Director Yash : ಡೈರೈಕ್ಟರ್ ಕ್ಯಾಪ್ ತೊಡ್ತಾರಾ ರಾಕಿಂಗ್ ಸ್ಟಾರ್ : ಯಶ್ ಹೇಳಿದ್ದೇನು ಗೊತ್ತಾ ?!

ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಈಗ ಫ್ಯಾನ್ ಇಂಡಿಯಾ ಸ್ಟಾರ್. ಸಾಲು ಸಾಲು ಸಿನಿಮಾಗಳನ್ನು ಗೆದ್ದ ಯಶ್ ಕೆಜಿಎಫ್ ಮೂಲಕ ವಿಶ್ವಕ್ಕೆ ತಮ್ಮ ಪ್ರತಿಭೆ ಸಾರಿದರು. ಸದ್ಯ ಕೆಜಿಎಫ್- 2 ರಿಲೀಸ್ ಗೆ ಸಿದ್ಧವಾಗ್ತಿರೋ ಯಶ್‌ ( Rocking Star ) ಮುಂದಿನ ಪ್ರಾಜೆಕ್ಟ್ ಏನು ಅನ್ನೋ ದು ಎಲ್ಲರ ಕುತೂಹಲ. ಈ ಮಧ್ಯೆ ಯಶ್ ಫ್ಯಾನ್ ಇಂಡಿಯಾ ಸಿನಿಮಾ ನಟನೆ ಬಳಿಕ ಡೈರೈಕ್ಷ‌ನ್ ಕ್ಯಾಪ್ ತೊಡಲಿದ್ದಾರೆ (Director Yash) ಅನ್ನೋ ಮಾತು ಕೇಳಿ ಬರ್ತಿದೆ.

ಹೌದು, ಯಶ್ ಫ್ಯಾನ್ ಇಂಡಿಯಾ ಸಿನಿಮಾದ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.ಮಾತ್ರವಲ್ಲ ನೆಕ್ಸ್ಟ್ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ, ಯಾವ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಹೀಗಿರುವಾಗಲೇ ಯಶ್ ಡೈರೈಕ್ಷನ್ ಕ್ಯಾಪ್ ತೊಟ್ಟು ಡೈರೈಕ್ಟರ್ ಆಗ್ತಾರೆ ಅನ್ನೋ ಗಾಸಿಪ್ ಗಳು ದಟ್ಟವಾಗಿವೆ.

ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಈ ಅನುಮಾನಗಳಿಗೆ ರಾಕಿಂಗ್ ಸ್ಟಾರ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಯಶ್ ಡೈರೈಕ್ಷನ್ ಮಾಡುವಷ್ಟು ಬುದ್ಧಿವಂತ ನಾನಲ್ಲ. ಡೈರೈಕ್ಷನ್ ಈಸ್ ನಾಟ್ ಮೈ ಕಪ್ ಆಫ್ ಟೀ ಎಂದಿದ್ದಾರೆ. ನಟನೆಗೂ ಚಿತ್ರ ನಿರ್ದೇಶನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಾನು ನಿರ್ದೇಶನ ಮಾಡುವಷ್ಟು ಪ್ರತಿಭಾವಂತ ಎಂದು ನನಗೆ ಅನ್ನಿಸುತ್ತಿಲ್ಲ. ಅಲ್ಲದೇ ಆ ಬಗ್ಗೆ ನಾನು ಯೋಚನೆ ಕೂಡ ಮಾಡಿಲ್ಲ. ನಾನು ನನ್ನ ನಿರ್ದೇಶಕರನ್ನು ಅರ್ಥ ಮಾಡಿಕೊಂಡು ನಟಿಸಬಲ್ಲೇ ಅಷ್ಟೇ ಎಂದಿದ್ದಾರೆ.

ಅಲ್ಲದೇ ಪ್ರೇಕ್ಷಕರು ತಾವು ದುಡಿದ ದುಡ್ಡಲ್ಲಿ ಮನೋರಂಜನೆ ಪಡೆಯಲು ಥಿಯೇಟರ್ ಗೆ ಬರುತ್ತಾರೆ. ಹೀಗೆ ಥಿಯೇಟರ್ ಗೆ ಬಂದ ಪ್ರೇಕ್ಷಕರು ತೃಪ್ತಿಯಿಂದ ಥಿಯೇಟರ್ ನಿಂದ ಹೊರಕ್ಕೆ ಹೋಗಬೇಕೆಂಬುದು ನನ್ನ ಆಶಯ. ಹಾಗೇ ಪ್ರೇಕ್ಷಕರಿಗೆ ತೃಪ್ತಿಯಾಗುವಂತೆ ನಟಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.

ಅಲ್ಲದೇ ತಮ್ಮ ರಂಗಭೂಮಿ ಹಿನ್ನೆಲೆ ಬಗ್ಗೆಯೂ ಮಾತನಾಡಿದ ಯಶ್, ನಾವು ರಂಗಭೂಮಿಯಿಂದ ಬಂದವರು ನಮಗೆ ಜನರ ಮನೋರಂಜನೆಯೇ ಅಂತಿಮ‌ ಗುರಿ ಎಂದಿದ್ದಾರೆ. ಸದ್ಯ ಯಶ್ ನಟನೆಯ ಕೆಜಿಎಫ್ 2 ಸಿನಿಮಾ 2022 ರ ಏಪ್ರಿಲ್ 14 ರಂದು ದೇಶದಾದ್ಯಂತ ತೆರೆ ಕಾಣಲಿದ್ದು ಈಗಾಗಲೇ ಟೀಸರ್ ನಲ್ಲಿ ದಾಖಲೆ ಬರೆದಿರುವ ಸಿನಿಮಾ ಥಿಯೇಟರ್ ನಲ್ಲೂ ಹೊಸ ದಾಖಲೆ ಬರೆಯು ವ ಸಾಧ್ಯತೆ ಇದೆ.

ಇದನ್ನೂ ಓದಿ :‌ Shivaraj kumar Yash Sudeep : ಕೊರೋನಾ ಕಾಳಜಿಗೆ ಧ್ವನಿಯಾಗ್ತಾರೆ ಶಿವಣ್ಣ, ಯಶ್, ಸುದೀಪ್: ಬಿಬಿಎಂಪಿ‌ ವಿಭಿನ್ನ ಪ್ರಯತ್ನ

ಇದನ್ನೂ ಓದಿ : Yash Radhika : ಇದೊಂದು ವಿಚಾರದಲ್ಲಿ ಯಶ್ ಒಳ್ಳೆಯವರಲ್ಲ: ಹೀಗ್ಯಾಕಂದ್ರು ರಾಧಿಕಾ ಪಂಡಿತ್

ಇದನ್ನೂ ಓದಿ : ಕಲಾವಿದರ ಸಂಕಷ್ಟಕ್ಕೆ ‌ಮಿಡಿದ ರಾಕಿಂಗ್ ಸ್ಟಾರ್ : ಒಂದೂವರೆ ಕೋಟಿ ಫ್ಯಾಕೇಜ್ ಘೋಷಿಸಿದ ಯಶ್

ಇದನ್ನೂ ಓದಿ : Yash Radhika Pandit : ಯಶ್ ರಾಧಿಕಾಗೆ ಆನ್ಯಿವರ್ಸರಿ ಸಂಭ್ರಮ : ಪತಿ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಏನಂದ್ರು ಗೊತ್ತಾ

( Rocking Star Yash as a director)

Comments are closed.