Drink More Water In Winter :ಹೆಚ್ಚು ನೀರು ಕುಡಿಯಿರಿ ಚಳಿಗಾಲದಲ್ಲಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ

(Drink More Water In Winter)ಬೇಸಿಗೆಗಾಲದಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ಎಷ್ಟಿದೆಯೋ ಚಳಿಗಾಲದಲ್ಲೂ ಕೂಡ ದೇಹಕ್ಕೆ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ. ಚಳಿಗಾಲದಲ್ಲಿ ಅತಿ ಹೆಚ್ಚು ತ್ವಚೆ ಒಡೆಯುವುದರಿಂದ ನೀರನ್ನು ಕುಡಿದರೆ ದೇಹಕ್ಕೆ ಉತ್ತಮ. ಬರಿ ನೀರನ್ನು ಕುಡಿಯುವ ಬದಲು ಅದರಲ್ಲಿ ಈ ಕೆಳಗೆ ಸೂಚಿಸಿದ ಪದಾರ್ಥವನ್ನು ಹಾಕಿಕೊಂಡು ಕುಡಿದರೆ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಯಾವೆಲ್ಲಾ ಪದಾರ್ಥವನ್ನು ನೀರಿನಲ್ಲಿ ಬೆರೆಸಿ ಕುಡಿಯಬೇಕು ಎಂಬುದರ ಮಾಹಿತಿಯ ಕುರಿತು ಈ ಕೆಳಗೆ ತಿಳಿಸಲಾಗಿದೆ.

(Drink More Water In Winter)ಬೇಕಾಗುವ ಸಾಮಾಗ್ರಿಗಳು:

  • ನೀರು
  • ಕರಿಬೇವು
  • ಅಜ್ವೈನ್ ಎಲೆ
  • ಕೊತ್ತಂಬರಿ ಬೀಜ
  • ಜೀರಿಗೆ
  • ಏಲಕ್ಕಿ
  • ಶುಂಠಿ

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಎರಡು ಲೋಟ ನೀರು, ಎಳರಿಂದ ಹತ್ತು ಕರಿಬೇವಿನ ಎಸಳು, ಮೂರು ಅಜ್ವೈನ್ ಎಲೆ, ಎರಡು ಚಮಚ ಕೊತ್ತಂಬರಿ ಬೀಜ,ಒಂದು ಚಮಚ ಜೀರಿಗೆ,ಪುಡಿಮಾಡಿಕೊಂಡ ಏಲಕ್ಕಿ, ಒಂದು ಶುಂಠಿ ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಬೇಕು. ನಂತರ ಇದನ್ನು ಲೋಟದಲ್ಲಿ ಸೊಸಿಕೊಂಡು ಕುಡಿದರೆ ತಲೆನೋವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತುರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.‌

ಅಜ್ವೈನ್ ಎಲೆ
ಅಜ್ವೈನ್ ಎಲೆಗಳಿಂದ ಹಲವು ಪ್ರಯೋಜನವಿರುವುದರಿಂದ ಆಯುರ್ವೇದದಲ್ಲಿ ಮುಖ್ಯವಾದ ಸ್ಥಾನವನ್ನು ಪಡೆದುಕೊಂಡಿದೆ. ಅಜ್ವೈನ್ ಎಲೆಗಳಿಂದ ಶೀತ ,ಜ್ವರ,ಕೆಮ್ಮು ಹಲವು ಸೋಂಕುಗಳು ನಿವಾರಣೆ ಆಗುತ್ತದೆ. ಚಳಿಗಾಲದ ಸಮಯದಲ್ಲಿ ಅಜ್ವೈನ್ ಎಲೆಯಿಂದ ತಯಾರಿಸಿದ ಕಶಾಯ ಕುಡಿಯುವುದರಿಂದ ಶೀತ ಮತ್ತು ಕೆಮ್ಮು ಹತ್ತಿರ ಸುಳಿದಂತೆ ನೋಡಿಕೊಳ್ಳುತ್ತದೆ.ಒಂದು ಪಾತ್ರೆಯಲ್ಲಿ ನೀರು ಮತ್ತು ಅಜ್ವೈನ್ ಎಲೆಗಳನ್ನು ಹಾಕಿ ಕುದಿಸಿಕೊಳ್ಳಬೇಕು. ನಂತರ ಆ ನೀರನ್ನು ಶೋಧಿಸಿಕೊಂಡು ಕುಡಿಯುವುದರಿಂದ ಕೆಮ್ಮು ಹಾಗೂ ಶೀತಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ.ರಕ್ತದಲ್ಲಿರುವ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ.ಕೂದಲು ಸೊಂಪಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Natural Powder :ಕೂದಲು ತೊಳೆಯಲು ಶಾಂಪೂ ಬದಲು ನೈಸರ್ಗಿಕ ಪುಡಿಯನ್ನು ಬಳಸಿ

ಇದನ್ನೂ ಓದಿ:Winter Season Lip Balm : ಚಳಿಗಾಲದಲ್ಲಿ ನಿಮ್ಮ ತುಟಿ ರಕ್ಷಣೆಗೆ ಈ ಲಿಪ್‌ ಬಾಮ್‌ ಟ್ರೈ ಮಾಡಿ

ಇದನ್ನೂ ಓದಿ:Onion Beauty Tips:ಕೂದಲು ಉದುರುವ ಸಮಸ್ಯೆಗೆ ಈರುಳ್ಳಿಯಲ್ಲಿದೆ ಪರಿಹಾರ

ಏಲಕ್ಕಿ
ಸೋಂಕುಗಳನ್ನು ನಿವಾರಣೆ ಮಾಡುವಂತಹ ಶಕ್ತಿ ಏಲಕ್ಕಿಯಲ್ಲಿ ಇದೆ. ಇದರಲ್ಲಿ ಆಂಟಿಆಕ್ಸಿಡೆಂಟ್‌ ಅಂಶಗಳು ಹೆಚ್ಚಾಗಿರುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಏಲಕ್ಕಿಯಲ್ಲಿ ಫೈಟೋ ಕೆಮಿಕಲ್‌ ಅಂಶಗಳು ಇರುವುದರಿಂದ ಮಾರಕ ಕ್ಯಾನ್ಸರ್‌ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಅಲ್ಸರ್‌ ಸಮಸ್ಯೆಯನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ.

Drink more water to take care of your skin in winter

Comments are closed.