Winter Season Lip Balm : ಚಳಿಗಾಲದಲ್ಲಿ ನಿಮ್ಮ ತುಟಿ ರಕ್ಷಣೆಗೆ ಈ ಲಿಪ್‌ ಬಾಮ್‌ ಟ್ರೈ ಮಾಡಿ

(Winter Season Lip Balm)ಚಳಿಗಾಲದಲ್ಲಿ ತುಟಿ ಅತಿ ಹೆಚ್ಚು ಬಿರುಕು ಬಿಡುವುದರಿಂದ ಮಹಿಳೆಯರು ಅಂಗಡಿಯಿಂದ ತಂದ ಹಲವು ಬಗೆಯ ಲಿಪ್‌ ಬಾಮ್‌ ಬಳಕೆ ಮಾಡುತ್ತಾರೆ. ಅಂಗಡಿಯಿಂದ ಲಿಪ್‌ ಬಾಮ್‌ ಖರಿದಿಸುವ ಬದಲು ಮನೆಯಲ್ಲಿಯೇ ಲಿಪ್‌ ಬಾಮ್‌ ತಯಾರಿಸಬಹುದು. ಲಿಪ್‌ ಬಾಮ್‌ ಹೇಗೆ ತಯಾರಿಸುವುದು ಎಂಬುದರ ಕುರಿತು ಈ ಕೆಳಗೆ ಮಾಹಿತಿಯನ್ನು ತಿಳಿಸಲಾಗಿದೆ.

(Winter Season Lip Balm)ಬೇಕಾಗುವ ಸಾಮಾಗ್ರಿಗಳು:

  • ತುಪ್ಪ
  • ಅರಿಶಿಣ
  • ಜೇನುತುಪ್ಪ

ಮಾಡುವ ವಿಧಾನ
ಒಂದು ಬೌಲ್‌ ನಲ್ಲಿ ಎರಡು ಚಮಚ ತುಪ್ಪ, ಒಂದು ಚಮಚ ಅರಿಶಿಣ, ಒಂದು ಚಮಚ ಜೇನುತುಪ್ಪ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡು ಪ್ರತಿದಿನ ತುಟಿಗೆ ಹಚ್ಚಿದರೆ ತುಟಿ ಬಿರುಕು ಬಿಡುವುದಿಲ್ಲ ಜೊತೆಗೆ ನೈಸರ್ಗಿಕವಾಗಿ ಪಿಂಕ್‌ ಲಿಪ್ಸ್‌ ಪಡೆಯಬಹುದು.

ಬೇಕಾಗುವ ಸಾಮಾಗ್ರಿಗಳು

  • ಬಿಟ್ರೋಟ್‌
  • ಸಕ್ಕರೆ(ಪುಡಿಮಾಡಿಕೊಂಡ ಸಕ್ಕರೆ)
  • ಬಾದಾಮಿ ಎಣ್ಣೆ

ಮಾಡುವ ವಿಧಾನ
ಮೊದಲಿಗೆ ತುರಿದ ಬಿಟ್ರೋಟ್‌ ರಸವನ್ನು ಸೊಸಿಕೊಳ್ಳಬೇಕು. ಒಂದು ಬೌಲ್‌ ನಲ್ಲಿ ಪುಡಿಮಾಡಿಕೊಂಡ ಸಕ್ಕರೆ ಎರಡು ಚಮಚ ,ಬಿಟ್ರೋಟ್‌ ರಸ ,ಒಂದು ಚಮಚ ಬಾದಾಮಿ ಎಣ್ಣೆ, ಒಂದು ಚಮಚ ವ್ಯಾಸಲಿನ್‌ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು.

ಬೇಕಾಗುವ ಸಾಮಾಗ್ರಿಗಳು
ವ್ಯಾಸಲಿನ್‌
ದಾಸವಾಳ ಪುಡಿ

ಮಾಡುವ ವಿಧಾನ
ಒಂದು ಬೌಲ್ ನಲ್ಲಿ ಒಂದು ಚಮಚ ವ್ಯಾಸಲಿನ್‌, ಒಂದು ಚಮಚ ದಾಸವಾಳ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ಇದನ್ನು ತುಟಿಗೆ ಹಚ್ಚುವುದರಿಂದ ತುಟಿ ಬಿರುಕು ಬಿಡುವುದಿಲ್ಲ.

ಇದನ್ನೂ ಓದಿ:Almond Cream: ಚಳಿಗಾಲಕ್ಕೆ ತ್ವಚೆ ಒಡೆಯದಿರಲು ಬಾದಾಮಿ ಕ್ರೀಮ್‌ ತಯಾರಿಸಿಕೊಳ್ಳಿ

ಇದನ್ನೂ ಓದಿ:Fittness Healthy Tips : ನೀವು ತುಂಬಾ ಸಣ್ಣ ಇದ್ದೀರಾ ? ದಪ್ಪ ಆಗ್ಬೇಕಾ ? ಬಳಸಿ ಈ ಡ್ರಿಂಕ್‌

ಇದನ್ನೂ ಓದಿ:Honey Face Wash:ಮನೆಯಲ್ಲಿಯೇ ತಯಾರಿಸಿಕೊಳ್ಳಿ ಜೇನುತುಪ್ಪದ ಫೇಸ್‌ ವಾಶ್‌

ಬಿಟ್ರೋಟ್‌
ಬಿಟ್ರೋಟ್‌ ನಲ್ಲಿ ವಿಟಮಿನ್ಸ್‌ ಅಂಶಗಳು ಹೆಚ್ಚಾಗಿರುವುದರಿಂದ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ. ಅಷ್ಟೇ ಅಲ್ಲದೆ ಸಂಧರ್ಯವರ್ದಕವಾಗಿ ಮಹಿಳೆಯರು ಉಪಯೋಗಿಸುತ್ತಾರೆ. ಬಿಟ್ರೋಟ್ ಜ್ಯೂಸ್‌ ಕುಡಿಯುವುದರಿಂದ ಹೃದಯ ಮತ್ತು ಶ್ವಾಸಕೋಶ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹೃದ್ರೋಗ ಮತ್ತು ಪಾರ್ಶ್ವವಾಯುವನ್ನು ತಡೆಗಟ್ಟುವ ಶಕ್ತಿ ಈ ಬಿಟ್ರೋಟ್‌ಗೆ ಇದೆ. ಇದರಲ್ಲಿರುವ ನಾರಿನ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಲಿವರನ್ನು ರಕ್ಷಿಸುವಂತಹ ಕಾರ್ಯವನ್ನು ಮಾಡುತ್ತದೆ. ಬಿಟ್ರೋಟ್‌ ನಲ್ಲಿರುವ ಕೋಲೈನ್‌ ಅಂಶ ಮೆದುಳಿನ ಜೀವಕೊಶಗಳಿಗೆ ಅಗತ್ಯವಾದ ಪೋಷಕಾಂಶ ಒದಗಿಸುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:Coffee Powder Face Mask :ಬಿಸಿಲಿಗೆ ಟ್ಯಾನ್‌ ಆಗುವ ಚಿಂತೆಯೇ ? ಕಾಫಿ ಪೌಡರ್‌ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಿ

Try this lip balm to protect your lips in winter

Comments are closed.