Pumpkin Soup : ಕುಂಬಳಕಾಯಿ ಸೂಪ್ ಕುಡಿದು ದೇಹದ ತೂಕ ಇಳಿಸಿಕೊಳ್ಳಿ

(Pumpkin Soup)ಕುಂಬಳಕಾಯಿ ಪಲ್ಯ ತಿನ್ನಲು ಕೆಲವರು ಮೂಗುಮುರಿಯುತ್ತಾರೆ. ಇದರಿಂದ ಹಲವು ಪ್ರಯೋಜನವಿರುವ ವಿಷಯದ ಬಗ್ಗೆ ಯಾರಿಗೂ ಗೊತ್ತೆ ಇರುವುದಿಲ್ಲ. ದೇಹದ ತೂಕ ಇಳಿಸಿಕೊಳ್ಳಲು ಡಯೆಟ್‌ ಮಾಡುತ್ತಿರುವವರು ಕುಂಬಳಕಾಯಿ ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ಕುಂಬಳಕಾಯಿಂದ ಸೂಪ್‌ ಮಾಡಿ ಕುಡಿದರೆ ರುಚಿಯ ಜೊತೆಗೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಈ ಸೂಪ್‌ ಹೇಗೆ ಮಾಡುವುದು ಎಂಬ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

Pumpkin Soup : ಬೇಕಾಗುವ ಸಾಮಗ್ರಿಗಳು:

  • ಚಕ್ಕೆ
  • ಲವಂಗ
  • ಶುಂಠಿ
  • ಈರುಳ್ಳಿ
  • ಕುಂಬಳಕಾಯಿ
  • ಉಪ್ಪು
  • ಅರಿಶಿಣ
  • ನೀರು

ಮಾಡುವ ವಿಧಾನ:
ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಲವಂಗ, ಶುಂಠಿ, ಈರುಳ್ಳಿ ಹಾಕಿ ಹೊರಿದು ಕೊಳ್ಳಬೇಕು.ಅದಕ್ಕೆ ಕುಂಬಳಕಾಯಿ ಉಪ್ಪು, ಅರಿಶಿಣ, ನೀರನ್ನು ಹಾಕಿ 15 ನಿಮಿಷ ಕಾಯಿಸಬೇಕು. ನಂತರ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು.ಅನಂತರ ರುಬ್ಬಿಕೊಂಡ ಮಿಶ್ರಣವನ್ನು ಕಾಯಿಸಿದರೆ ಕುಂಬಳಕಾಯಿ ಸೂಪ್ ರೆಡಿ.

ಕುಂಬಳಕಾಯಿಯಲ್ಲಿ ಮಿಟಮಿನ್‌ ಎ,ಇ ,ಸಿ ಮತ್ತು ಐರನ್‌ ಅಂಶ ಹೆರಳವಾಗಿರುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ .ಕುಂಬಳಕಾಯಿಯಲ್ಲಿ ಫೈಬರ್ ಅಂಶ ಸಮೃದ್ಧವಾಗಿರುವುದರಿಂದ ಇದನ್ನು ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕೆರೋಟಿನ್ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕುಂಬಳಕಾಯಿಯಲ್ಲಿ ಕಬ್ಬಿಣಾಂಶ ಹೆರಳವಾಗಿ ಇರುವುದರಿಂದ ಇದನ್ನು ಸೇವನೆ ಮಾಡಿದರೆ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಿಕೊಳ್ಳಬಹುದು. ಕಣ್ಣುಗಳ ದೃಷ್ಟಿ ಕಡಿಮೆಯಾಗದಂತೆ ಕಾಪಾಡುತ್ತದೆ. ಅಷ್ಟೇ ಅಲ್ಲದೆ ಶೀತ, ಕೆಮ್ಮು, ನೆಗಡಿ ಮತ್ತು ಗಂಟಲು ನೋವಿಗೆ ಕುಂಬಳಕಾಯಿ ಉತ್ತಮ ಮನೆ ಮದ್ದು.

ಇದನ್ನೂ ಓದಿ:Banana Face Pack:ಮುಖದ ಕಾಂತಿ ಹೆಚ್ಚಿಸಲು ಬಳಸಿ ಬಾಳೆ ಹಣ್ಣಿನ ಫೇಸ್ ಪ್ಯಾಕ್

ಇದನ್ನೂ ಓದಿ:Increase Immunity : ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಇದೆ ಮದ್ದು

ಕುಂಬಳಕಾಯಿ ಸಿಪ್ಪೆಯ ಚಟ್ನಿ

ಬೇಕಾಗುವ ಸಾಮಾಗ್ರಿಗಳು:

  • ಕುಂಬಳಕಾಯಿ
  • ಹಸಿಮೆಣಸು
  • ಬೆಳ್ಳುಳ್ಳಿ
  • ಶುಂಠಿ
  • ಉದ್ದಿನ ಬೆಳೆ
  • ಎಳ್ಳು
  • ಹುಣಸೆಹಣ್ಣು
  • ಉಪ್ಪು
  • ಎಣ್ಣೆ

ಮಾಡುವ ವಿಧಾನ:
ಮೊದಲಿಗೆ ಪಾತ್ರೆಯಲ್ಲಿ ಕುಂಬಳಕಾಯಿ ಸಿಪ್ಪೆ ಮತ್ತು ನೀರು ಹಾಕಿಕೊಂಡು ಐದು ನಿಮಿಷಗಳ ಕಾಲ ಕುದಿಸಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಉದ್ದಿನ ಬೆಳೆ, ಕುಂಬಳ ಕಾಯಿ ಸಿಪ್ಪೆ,ಕತ್ತರಿಸಿದ ಹಸಿಮೆಣಸು,ಬೆಳ್ಳುಳ್ಳಿ,ಶುಂಠಿ,ಎಳ್ಳು ಹಾಕಿ ಬಾಡಿಸಿಕೊಳ್ಳಿ. ಹುರಿದುಕೊಂಡ ಪದಾರ್ಥ ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ಬೆಲ್ಲ,ಉಪ್ಪು,ಹುಣಸೆಹಣ್ಣು ಸೇರಿಸಿ ರುಬ್ಬಿಕೊಂಡರೆ ರುಚಿಯಾದ ಕುಂಬಳಕಾಯಿ ಸಿಪ್ಪೆಯ ಚಟ್ನಿ ರೆಡಿ.

Drink pumpkin soup lose weight: how to prepare pumpkin soup

Comments are closed.