Banana Face Pack:ಮುಖದ ಕಾಂತಿ ಹೆಚ್ಚಿಸಲು ಬಳಸಿ ಬಾಳೆ ಹಣ್ಣಿನ ಫೇಸ್ ಪ್ಯಾಕ್

(Banana Face Pack)ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುವ ಬಾಳೆ ಹಣ್ಣು ನಮ್ಮ ಆರೋಗ್ಯವನ್ನು ಕಾಪಾಡುವುದು ಅಷ್ಟೇ ಅಲ್ಲದೆ ಮುಖದ ಸೌಂದರ್ಯವನ್ನು ಕಾಪಾಡುತ್ತದೆ. ಬಾಳೆಹಣ್ಣಿನಿಂದ ಫೇಸ್‌ ಪ್ಯಾಕ್‌ ಮಾಡಿಕೊಂಡು ಮುಖಕ್ಕೆ ಹಚ್ಚಿದ್ರೆ ಕಲೆಯನ್ನು ಕಡಿಮೆಮಾಡಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಫೇಸ್‌ ಪ್ಯಾಕ್‌ ಹೇಗೆ ತಯಾರಿಸಿಕೊಳ್ಳಬೇಕು ಎಂಬ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

Banana Face Pack : ಬೇಕಾಗುವ ಸಾಮಗ್ರಿಗಳು:

ಬಾಳೆ ಹಣ್ಣು
ಕಡಲೆ ಹಿಟ್ಟು
ಹಾಲು

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಬಾಳೆ ಹಣ್ಣು, ಕಡಲೆ ಹಿಟ್ಟು, ಹಾಲನ್ನು ಹಾಕಿ ಕಲಸಿ ಕೊಂಡು ಫೆಸ್ ಪ್ಯಾಕ್ ಮಾಡಿಕೊಳ್ಳಬೇಕು. ನಂತರ ಅದನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷ ಬಿಟ್ಟು ಮುಖವನ್ನು ತೊಳೆಯಬೇಕು. ಹೀಗೆ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಮುಖದಲ್ಲಿರುವ ಕಲೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿ:Gooseberry Health Tips:ಕಹಿ “ನೆಲ್ಲಿಕಾಯಿಯ” ಆರೋಗ್ಯಕ್ಕೆ ಸಂಜೀವಿನಿ

ಇದನ್ನೂ ಓದಿ:Dark Circles :ಡಾರ್ಕ್ ಸರ್ಕಲ್ಸ್ ನಿಂದ ಮುಕ್ತಿ ಪಡೆಯಬೇಕಾ : ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

ಇದನ್ನೂ ಓದಿ:Guava Leaf : ಸೀಬೆ ಗಿಡದ ಚಿಗುರೆಲೆ ಮಧುಮೇಹಕ್ಕೆ ಅದ್ಭುತ ಔಷಧಿ


ಬೇಕಾಗುವ ಸಾಮಗ್ರಿಗಳು:

  • ಬಾಳೆ ಹಣ್ಣು
  • ಜೇನುತುಪ್ಪ
  • ನಿಂಬೆ ಹಣ್ಣಿನ ರಸ

ಮಾಡುವ ವಿಧಾನ:
ಒಂದು ಬೌಲ್ ನಲ್ಲಿ ಬಾಳೆಹಣ್ಣು, ಜೇನುತುಪ್ಪ, ನಿಂಬೆರಸ ಹಾಕಿಕೊಂಡು ಫೆಸ್ ಪ್ಯಾಕ್ ಮಾಡಿಕೊಳ್ಳಬೇಕು. ನಂತರ ಅದನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿಕೊಂಡು 20 ನಿಮಿಷ ಬಿಟ್ಟು ಮುಖವನ್ನು ತೊಳೆಯಬೇಕು. ಹೀಗೆ ವಾರಕ್ಕೆ ಎರಡು ಬಾರಿ ಈ ಫೇಸ್‌ ಪ್ಯಾಕ್‌ ಮಾಡಿಕೊಂಡು ಮುಖಕ್ಕೆ ಹಚ್ಚಬೇಕು.

ಬಾಳೆಹಣ್ಣು ಅಪಾರ ಪ್ರಮಾಣದ ಪ್ರೋಟೀನ್‌,ಪೊಟಾಶಿಯಮ್‌,ಕಬ್ಬಿಣಂಶ, ಹಾಗೂ ನಾರಿನ ಅಂಶಗಳನ್ನು ಹೊಂದಿರುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ಗುಣಪಡಿಸುತ್ತದೆ ಮತ್ತು ತಾತ್ಕಾಲಿಕವಾಗಿ ಹಸಿವು ನಿಗುತ್ತದೆ. ಪ್ರತಿನಿತ್ಯ ಬಾಳೆಹಣ್ಣು ಸೇವನೆ ಮಾಡುವುದರಿಂದ ಎದೆಯುರಿ,ಮಲಬದ್ಧತೆ,ಅಜೀರ್ಣ ಸಮಸ್ಯೆ,ರಕ್ತದೊತ್ತಡ,ರಕ್ತಹೀನತೆ,ಇಂತಹ ಹಲವಾರು ಅನಾರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ. ಬಾಳೆಹಣ್ಣು ತಿನ್ನುವುದರಿಂದ ಹೃದಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೂಳೆಯನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಬಹುದು. ಪ್ರತಿನಿತ್ಯ ಬಾಳೆಹಣ್ಣಿನ ಜ್ಯೂಸ್‌ ಮಾಡಿ ಕುಡಿದರೆ ಸೈನಸ್‌ ಸಮಸ್ಯೆಯಿಂದ ಹೊರಬರಬಹುದು. ಬಾಳೆಹಣ್ಣು ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸಿ ದೇಹವನ್ನು ಸದೃಡವಾಗಿಸುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಸಲ್ಫರ್‌, ಕಾರ್ಬೊ ಹೈಡ್ರೆಟ್‌ ಈ ಎಲ್ಲಾ ಅಂಶ ಇರುವುದರಿಂದ ಇದನ್ನು ತಿಂದರೆ ಸ್ಟ್ರೆಸ್‌ ಕಡಿಮೆಯಾಗುತ್ತದೆ.ರಾತ್ರಿ ಮಲಗುವ ಸಮಯದಲ್ಲಿ ಬಾಳೆಹಣ್ಣನ್ನು ತಿನ್ನಬಾರದು ಇದರಿಂದ ಅಜಿರ್ಣದ ಸಮಸ್ಯೆ ಉಂಟಾಗುತ್ತದೆ. ರಾತ್ರಿ ಮಲಗುವ ಒಂದು ಗಂಟೆಯ ಮುಂಚೆ ಬಾಳೆಹಣ್ಣನ್ನು ತಿಂದರೆ ಆರೋಗ್ಯಕ್ಕೆ ಉತ್ತಮ.

Use banana fruit face pack to increase the glow of the face

Comments are closed.