ಮನೆ ಊಟನೂ ಸೇಫ್ ಅಲ್ಲ! ನೀವು ದಿನಾ ತಿನ್ನೋ ಆಹಾರದಲ್ಲಿದೆ ‘ಸ್ಲೋ ಪಾಯ್ಸನ್’.. ಹುಷಾರ್!

ಇವತ್ತಿನ ಪರಿಸ್ಥಿತಿಯಲ್ಲಿ ನಾವು ಅಡುಗೆಗೆ ಬಳಸೋ ಉಪ್ಪಿನಿಂದ ಹಿಡಿದು, ಬೆಳಿಗ್ಗೆ ಕುಡಿಯೋ ಟೀ ಪುಡಿಯವರೆಗೆ ಪ್ರತಿಯೊಂದರಲ್ಲೂ ಕಲಬರಕೆಯ ಮಹಾಜಾಲ ಆವರಿಸಿಕೊಂಡಿದೆ! ಹೌದು, ನಾವು ಆರೋಗ್ಯವಾಗಿರಲು ದಿನಾ ಮನೆ ಊಟ ಮಾಡ್ತೀವಿ. ಆದ್ರೆ ಅದೇ ಮನೆ ಊಟ ಇವತ್ತು ನಮ್ಮನ್ನ ನಿಧಾನವಾಗಿ ಸಾವಿನ ದವಡೆಗೆ ತಳ್ಳುತ್ತಿದೆಯಾ ಅನ್ನೋ ಭಯ ಶುರುವಾಗಿದೆ.

ಉಪ್ಪಿಗಿಂತ ರುಚಿಲ್ಲ, ತಾಯಿಗಿಂತ ಬಂಧುವಿಲ್ಲ’ ಅನ್ನೋ ಗಾದೆ ಮಾತಿದೆ. ಆದ್ರೆ ಇವತ್ತಿನ ಪರಿಸ್ಥಿತಿಯಲ್ಲಿ ನಾವು ಅಡುಗೆಗೆ ಬಳಸೋ ಉಪ್ಪಿನಿಂದ ಹಿಡಿದು, ಬೆಳಿಗ್ಗೆ ಕುಡಿಯೋ ಟೀ ಪುಡಿಯವರೆಗೆ ಪ್ರತಿಯೊಂದರಲ್ಲೂ ಕಲಬರಕೆಯ ಮಹಾಜಾಲ ಆವರಿಸಿಕೊಂಡಿದೆ! ಹೌದು, ನಾವು ಆರೋಗ್ಯವಾಗಿರಲು ದಿನಾ ಮನೆ ಊಟ ಮಾಡ್ತೀವಿ. ಆದ್ರೆ ಅದೇ ಮನೆ ಊಟ ಇವತ್ತು ನಮ್ಮನ್ನ ನಿಧಾನವಾಗಿ ಸಾವಿನ ದವಡೆಗೆ ತಳ್ಳುತ್ತಿದೆಯಾ ಅನ್ನೋ ಭಯ ಶುರುವಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ರಾಜ್ಯದ ಹಲವೆಡೆ ಮುಗಿಬಿದ್ದು ದಾಳಿ ನಡೆಸಿದಾಗ ಸಿಕ್ಕಿರೋ ಆಘಾತಕಾರಿ ಸತ್ಯಗಳು ಪ್ರತಿಯೊಬ್ಬ ಗೃಹಿಣಿಯ, ಪ್ರತಿಯೊಬ್ಬ ನಾಗರಿಕನ ನಿದ್ದೆ ಗೆಡಿಸುವಂತಿದೆ. ಹಾಗಾದ್ರೆ ನಾವು ದಿನಾ ತಿನ್ನುತ್ತಿರೋ ಆಹಾರದಲ್ಲಿ ಏನೆಲ್ಲಾ ಮಿಕ್ಸ್ ಆಗ್ತಿದೆ? ಈ ನಕಲಿ ಜಾಲ ನಮ್ಮ ದೇಹ ಸೇರಿ ಹೇಗೆ ‘ಸ್ಲೋ ಪಾಯ್ಸನ್’ ಆಗ್ತಿದೆ?

“ಹೌದು, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್, ಕಿಡ್ನಿ ಫೇಲ್ಯೂರ್, ಮತ್ತು ಹಾರ್ಟ್ ಅಟ್ಯಾಕ್ ಕೇಸ್‌ಗಳು ಯುವಕರಲ್ಲಿ ದಿಢೀರ್ ಅಂತ ಜಾಸ್ತಿ ಆಗ್ತಿರೋದಕ್ಕೆ ಕೇವಲ ಲೈಫ್‌ಸ್ಟೈಲ್ ಕಾರಣವಲ್ಲ, ನಾವು ತಿನ್ನೋ ಆಹಾರವೂ ಕಾರಣ! ಚಹಾ ಪುಡಿಗೆ ಕೃತಕ ಕೆಮಿಕಲ್ ಬಣ್ಣ ಮತ್ತು ಒಣಗಿದ ರೇಷ್ಮೆ ಗೂಡಿನ ಪುಡಿ ಬೆರೆಸಲಾಗುತ್ತಿದೆ. ಇನ್ನು ನಿಮ್ಮ ಸಾಂಬಾರಿಗೆ ಘಾಟು ಕೊಡುವ ಅಚ್ಚಖಾರದ ಪುಡಿಗೆ ಇಟ್ಟಿಗೆ ಧೂಳು ಹಾಗೂ ಮರದ ಪುಡಿಯನ್ನು ಮಿಕ್ಸ್ ಮಾಡಲಾಗ್ತಿದೆ! ಅರಿಶಿನ ಪುಡಿಗೆ ಬಣ್ಣ ಬರಲು ‘ಮೆಟಾನಿಲ್ ಯೆಲ್ಲೋ’ ಅನ್ನೋ ನಿಷೇಧಿತ ಕೆಮಿಕಲ್ ಬಳಸಲಾಗ್ತಿದೆ. ಇದು ನೇರವಾಗಿ ಲಿವರ್ ಅನ್ನು ಡ್ಯಾಮೇಜ್ ಮಾಡುತ್ತದೆ!

“ಬರೀ ಮಸಾಲೆ ಪದಾರ್ಥಗಳಲ್ಲ, ನಾವು ನಿತ್ಯ ಬಳಸೋ ಹಾಲಿಗೆ ಯೂರಿಯಾ ಮತ್ತು ಡಿಟರ್ಜೆಂಟ್ ಮಿಕ್ಸ್ ಮಾಡೋ ದಂಧೆಯೂ ನಡೀತಿದೆ. ತರಕಾರಿಗಳು ಫ್ರೆಶ್ ಆಗಿ ಕಾಣ್ಲಿ ಅಂತ ಕಾಪರ್ ಸಲ್ಫೇಟ್ ಕೆಮಿಕಲ್ ಹಸಿರು ಬಣ್ಣದ ನೀರಿಗೆ ಅದ್ದಿ ಮಾರ್ಕೆಟ್‌ಗೆ ತರಲಾಗ್ತಿದೆ. ಬ್ರ್ಯಾಂಡೆಡ್ ಪ್ಯಾಕೆಟ್‌ಗಳ ಮೇಲಿರೋ ಐಎಸ್‌ಐ ಮಾರ್ಕ್ ನೋಡಿ ನಾವು ನಂಬ್ತೀವಿ, ಆದ್ರೆ ಆ ಪ್ಯಾಕೆಟ್ ಒಳಗಿರೋದು ಅಪ್ಪಟ ವಿಷ ಅನ್ನೋದು ಲ್ಯಾಬ್ ಟೆಸ್ಟ್‌ಗಳಲ್ಲಿ ಸಾಬೀತಾಗಿದೆ!”

ಈ ಮಾಫಿಯಾವನ್ನು ತಡೆಯೋದು ಸರ್ಕಾರದ ಕೆಲಸ ಹೌದು. ಆದ್ರೆ ನಮ್ಮ ಜೀವ ಉಳಿಸಿಕೊಳ್ಳಲು ನಾವೇ ಅಲರ್ಟ್ ಆಗಿರಬೇಕು. ನಿಮ್ಮ ಮನೆಯಲ್ಲಿರೋ ಪದಾರ್ಥ ಅಸಲಿನಾ ನಕಲಿನಾ ಅಂತ ತಿಳಿಯಲು ಒಂದು ಸಿಂಪಲ್ ಟೆಸ್ಟ್ ಮಾಡಿ. ಒಂದು ಗ್ಲಾಸ್ ತಣ್ಣಗಿನ ನೀರಿಗೆ ಒಂದು ಚಮಚ ಚಹಾ ಪುಡಿ ಅಥವಾ ಅರಿಶಿನ ಹಾಕಿ. ಅದು ನೀರಿಗೆ ಬಿದ್ದ ತಕ್ಷಣ ಕೆಳಗೆ ಹೋಗ್ತಾ ದಟ್ಟವಾದ ಬಣ್ಣ ಬಿಟ್ಟರೆ, ಅದು ನಕಲಿ ಅಂತ ಅರ್ಥ. ಅಸಲಿ ಪದಾರ್ಥಗಳು ಕುದಿಸಿದಾಗ ಅಥವಾ ಸ್ವಲ್ಪ ಸಮಯದ ಬಳಿಕವಷ್ಟೇ ಬಣ್ಣ ಬಿಡುತ್ತವೆ.

ಲಾಭಕೋರತನಕ್ಕಾಗಿ ಜನರ ಜೀವದ ಜೊತೆ ಆಟವಾಡ್ತಿರೋ ಇಂತಹ ನಕಲಿ ದಂಧೆಕೋರರ ಬಗ್ಗೆ ನಿಮಗೇನಾದ್ರೂ ಮಾಹಿತಿ ಸಿಕ್ಕರೆ ತಕ್ಷಣ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿ. ಜಾಗೃತರಾಗಿರಿ, ಆರೋಗ್ಯವಾಗಿರಿ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.