ಕಪ್ಪು ಕಲೆಯನ್ನು ಹೊಗಲಾಡಿಸಲು ಇಲ್ಲಿದೆ ಸುಲಭ ಉಪಾಯ

0
  • ಅಂಚನ್ ಗೀತಾ

ಇತ್ತೀಚಿನ ದಿನದಲ್ಲಿ ಧೂಳಿನಿಂದ ತುಂಬಿರೋ ರಸ್ತೆಗಳಲ್ಲಿ ವಾಹನ ಓಡಿಸಿ ಚರ್ಮದ ಅಂದವನ್ನು ಹಾಳು ಮಾಡುತ್ತಿದ್ದೆವೆ. ಅಷ್ಟೆಅಲ್ಲ ಈ ಸ್ಕೀನ್ ಪ್ರಾಬ್ಲೆಮ್ ನಿಂದ ಕಪ್ಪು ಕಲೆಗಳು ಮುಖದ ತುಂಬಾ ಆವರಿಸುತ್ತೆ. ಆ ಕಪ್ಪು ಕಲೆ ನಿವಾರಣೆ ಮಾಡಲು ನಾವಂತೂ ಸರ್ಕಸ್ ಮಾಡ್ತಾ ಇರ್ತೆವೆ.

ಕಲೆಗಳನ್ನು ಮುಚ್ಚುವ ಕ್ರೀಮ್ ಗಳನ್ನು ಆವಾಗವಗ ಬಳಸಿ ಮುಖದ ಅಂದವನ್ನು ಮತ್ತಷ್ಟು ಕುರೂಪಗೊಳಿಸ್ತೆವೆ. ಆದ್ರೆ ಇನ್ಮುಂದೆ ಯೋಚನೆ ಮಾಡ್ಬೇಕಿಲ್ಲ. ಕಪ್ಪು ಕಲೆಗಳನ್ನು ಬೇಗನೆ ತೊಲಗಿಸಿ ನಿಮ್ಮ ಚರ್ಮವನ್ನು ಮತ್ತೆ ಆರೋಗ್ಯಕರವಾಗಿಸಲು ಇಂದು ಕೆಲವು ಮನೆ ಮದ್ದುಗಳನ್ನು ನೋಡೋಣ.

ಗುಳ್ಳೆಗಳು, ಮೊಡವೆ, ಬೊಕ್ಕೆ, ಕಚ್ಚುಗಳಿಂದ ಕಪ್ಪು ಕಲೆಗಳು ಉಂಟಾಗುತ್ತವೆ. ಸೂರ್ಯನ ಶಾಕಕ್ಕೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಲೂ ಕಪ್ಪು ಕಲೆಗಳು ಹೆಚ್ಚಾಗುತ್ತವೆ. ಇದನ್ನು ತಡೆಗಟ್ಟಲು ಆಚೆ ಹೋಗುವ ಮುನ್ನ ಸನ್ ಸ್ಕ್ರೀನ್ ಅನ್ನು ಬಳಸಿ ಹಾಗೂ ಈ ಕೆಳಗಿನ ಮನೆ ಮದ್ದುಗಳ ಸಹಾಯದಿಂದ ಕಪ್ಪು ಕಲೆಗಳನ್ನು ಇಲ್ಲವಾಗಿಸಿ.

ರಾಸಾಯನಿಕಗಳನ್ನು ಬಳಸಿ ಚರ್ಮವನ್ನು ಸುಂದರವಾಗಿಸಲು ಪ್ರಯತ್ನಿಸುವುದಕ್ಕಿಂತ ಹಲವು ಮನೆ ಮದ್ದುಗಳನ್ನು ಬಳಸಿದರೆ ಹಣ ಪೋಲಾಗದಂತೆ ಮಾಡಬಹುದು ಹಾಗೂ ರಾಸಾಯನಿಕಗಳಿಂದ ಉಂಟಾಗುವ ಅಡ್ಡ ಪರಿಣಾಮಗಳಿಂದಲೂ ಸಹ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.

ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯ. ಈ ಕೆಳಗೆ ನೀಡಿರುವ ಕೆಲವು ಮನೆ ಮದ್ದುಗಳಿಂದ ನಿಮ್ಮ ಚರ್ಮವನ್ನು ಕಪ್ಪು ಕಲೆ, ಮೊಡವೆ, ಕಚ್ಚು ಹಾಗೂ ಬೊಕ್ಕೆಗಳಿಂದ ಮುಕ್ತವಾಗಿಸಬಹುದು. ಬನ್ನಿ ಹಾಗಿದ್ರೆ ಯಾವೆಲ್ಲ ವಿಧಾನಗಳನ್ನು ಅನುಸರಿಸಿದ್ರೆ ಕಪ್ಪು ಕಲೆ ಹೋಗಲಾಡಿಸಬಹುದು ಅನ್ನೋದನ್ನ ನೋಡೊಣ..

ಒಂದು ಮಧ್ಯಮ ಗಾತ್ರದ ಟೊಮ್ಯಾಟೋವನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿಕೊಳ್ಳಿ. ನಂತರ ಆ ರಸಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಕಲಸಿ. ಅದನ್ನು ಮುಖಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿರಿ.

ಈರುಳ್ಳಿಯಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಯಥೇಚ್ಚವಾಗಿರುವುದರಿಂದ ಕಲೆಗಳನ್ನು ಕಡಿಮೆ ಮಾಡುವಲ್ಲಿ ಇದು ಬಹಳ ಪರಿಣಾಮಕಾರಿ. ಒಂದು ಈರುಳ್ಳೀಯನ್ನು ತೆಗೆದುಕೊಂಡು ಸಣ್ಣಗೆ ಹೆಚ್ಚಿ, ನಂತರ ಆ ಹೊಳುಗಳನ್ನು ರುಬ್ಬಿ ಅದರಿಂದ ರಸವನ್ನು ಹಿಂಡಿ ತೆಗೆದುಕೊಳ್ಳಿ. ರಸವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಕೆಲವು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.

ಎರಡು ಚಮಚ ಶ್ರೀಗಂಧದ ಪುಡಿಗೆ ಸ್ವಲ್ಪ ಪನ್ನೀರನ್ನು (Rose Water) ಬೆರೆಸಿ ಕಲೆಗಳಿರುವ ಜಾಗಕ್ಕೆ ಅಥವಾ ಇಡೀ ಮುಖಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ತಿಳಿಯಾಗಿ ಮಾಡಿಕೊಳ್ಳುವುದರಿಂದ ಅದು ಒಣಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗಾಗಿ ಹೆಚ್ಚು ಲಾಭವನ್ನು ಪಡೆಯಬಹುದು. ಮುಖಕ್ಕೆ ಹಚ್ಚಿದ ಮಿಶ್ರಣ ಒಣಗಿದ ನಂತರ ನೀರಿನಿಂದ ತೊಳೆಯಿರಿ.

ಒಂದು ಚಿಟಿಕೆ ಅರಿಶಿನವನ್ನು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನಂತರ ಈ ಮಿಶ್ರಣವನ್ನು ಕಲೆಗಳಿರುವ ಕಡೆಗೆ ಹಚ್ಚಿರಿ. ಈ ಮಿಶ್ರಣ ನಿಮ್ಮ ಕಲೆಗಳನ್ನು ಬಹಳ ಸಮರ್ಥವಾಗಿ ನಿವಾರಿಸುತ್ತದೆ. ಈ ಮಿಶ್ರಣವನ್ನು ದಿನವೂ ಬಳಸುವುದರಿಂದ ಒಂದು ವಾರದಲ್ಲೇ ಫಲಿತಾಂಶವನ್ನು ಕಾಣಬಹುದು.

ಒಂದು ಸಣ್ಣ ಆಲೂಗಡ್ಡೆಯನ್ನು ರುಬ್ಬಿಕೊಳ್ಳಿ ಹಾಗೂ ರುಬ್ಬಿಕೊಂಡ ಆಲೂಗಡ್ದೆಗೆ ಸ್ವಲ್ಪ ಜೇನುತುಪ್ಪವನ್ನು ಬೆರಸಿ ಈ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿಕೊಳ್ಳಿ ಅಥವಾ ಇಡೀ ಮುಖಕ್ಕೂ ಹಚ್ಚಿಕೊಳ್ಳಬಹುದು. ಹದಿನೈದು ನಿಮಿಷಗಳ ನಾನಾತರ ಮಿಶ್ರಣವನ್ನು ನೀರಿನಿಂದ ತೊಳೆಯಬಹುದು. ಹಾಗಲ್ಲದೆ ಬಾರಿ ಅಲೂವಿನ ಹೊಳನ್ನು ತೆಗೆದುಕೊಂಡು ನಿಮ್ಮ ಕಲೆಗಳ ಮೇಲೆ ನೇರವಾಗಿ ಉಜ್ಜಿಕೊಂಡು ಹದಿನೈದು ನಿಮಿಷಗಳಲ್ಲಿ ತೊಳೆಯಬಹುದು. ಆಲೂಗಡ್ಡೆಯನ್ನು ಬಳಸುವ ಮತ್ತೊಂದು ವಿಧಾನವೆಂದರೆ ಅಲೂಗದ್ದೆಯ ರಸವನ್ನು ತೆಗೆದು ಅದನ್ನು ನೇರವಾಗಿ ಕಲೆಗಳ ಮೇಲೆ ನೇರವಾಗಿ ಬಳಸಿ ಫಲಿತಾಂಶವನ್ನು ಕಾಣಬಹುದು.

ಸೌತೆಕಾಯಿಯನ್ನು ರುಬ್ಬಿ ಅದಕ್ಕೆ ಹಾಲನ್ನು ಹಾಗೂ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣ ಚೇತೋಹಾರಿಯಾಗಿದ್ದು ಇಡೀ ಮುಖಕ್ಕೂ ಬಳಸಬಹುದಾಗಿದೆ. ಇದನ್ನು ಹಚ್ಚಿದ ಹತ್ತು ನಿಮಿಷಗಳ ನಂತರ ನೀರಿನಿಡ ತೊಳೆದುಕೊಳ್ಳಬೇಕು.

ಪಪ್ಪಾಯದಲ್ಲಿರುವ ಹಲವು ಕಿಣ್ವಗಳು ಕಪ್ಪು ಕಲೆಗಳನ್ನು ಆಳಿಸುವಲ್ಲಿ ಬಹಳ ಉಪಯೋಗಿ. ಹಣ್ಣಾಗಿರುವ ಪಾಯದ ಇರುಳನ್ನು ನೇರವಾಗಿ ಮುಖಕ್ಕೆ ಹಚ್ಚಿ ಕಲೆಗಳಿರುವೆಡೆ ಮೆದುವಾಗಿ ಉಜ್ಜಿರಿ. ನಂತರ ಹದಿನೈದು ನಿಮಿಷಗಳು ಆ ಮಿಶ್ರಣವನ್ನು ಅಲ್ಲಿಯೇ ಬಿಟ್ಟು ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ.

ಈ ಜೀವಸತ್ವದ ಎಣ್ಣೆ ಒಂದು ನೈಸರ್ಗಿಕ ಉತ್ಕರ್ಷಣ ವಿರೋಧಿಯಾಗುವುದರಿಂದ ಗಾಯಗಳನ್ನು ಗುಣಪದಿಸುವುದರಲ್ಲಿ ಬಹಳ ಸಹಾಯಕಾರಿ. ಆದ್ದರಿಂದ ಈ ಜೀವಸ್ತ್ವದ ಎಣ್ಣೆಯನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಕಲೆಗಳಿರುವೆಡೆಗೆ ಹಚ್ಚಿ ಸ್ವಲ್ಪ ಕಾಲ ಬಿಟ್ಟುಬಿಡಿ. ಇಪತ್ತು ನಿಮಿಷಗಳ ನಂತರ ಹತ್ತಿಯ ಸಹಾಯದಿಂದ ಎಣ್ಣೆಯನ್ನು ತೆಗೆದು ನಂತರ ನೀರಿನಿಂದ ತೊಳೆಯಿರಿ.

ಸಾಕಷ್ಟು ನೀರನ್ನು ಕುಡಿಯುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಬಹುದು. ದಿನಕ್ಕೆ ಕಡಿಮೆ ಎಂದರೆ ಆರರಿಂದ ಎಂಟು ಲೋಟ ನೀರನ್ನು ಕುಡಿಯಿರಿ. ಇದು ದೇಹದಲ್ಲಿನ ಕಲ್ಮಶಗಳನ್ನು ತೊಲಗಿಸುವುದಲ್ಲದೆ ಚರ್ಮವು ನೈಸರ್ಗಿಕವಾಗಿ ಪುನರುಜ್ಜೀವನಗೊಳ್ಳಲು ಸಹಾಯ ಮಾಡುತ್ತದೆ ಹಾಗೂ ಕಪ್ಪು ಕಲೆಗಳು ಶೀಘ್ರವಾಗಿ ವಾಸಿಯಾಗಲು ಸಹಾಯಮಾಡುತ್ತದೆ.

ಕೇಸರಿಯ ಕೆಲವು ಎಸಳುಗಳನ್ನು ಎರಡು ಚಮಚೆ ಹಸಿ ಹಾಲಿನಲ್ಲಿ ನೆನೆಸಿಡಿ. ಹಾಲು ಹಾಳಾಗದೆ ಇರುವುದಕ್ಕಾಗಿ ಫ್ರಿಡ್ಜ್ ನಲ್ಲಿರಿಸಿ. ಬೆಳ್ಳಿಗೆ ಕೇಸರಿಯನ್ನು ಹಾಲಿನಲಿ ನುರಿದು ಆ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ, ಕಲೆ ಹಾಗೂ ಮೊಡವೆಗಳಿರುವಲ್ಲಿ ಸ್ವಲ್ಪ ಹೆಚ್ಚಾಗಿಯೇ ಹಚ್ಚಿ. ಅದು ಪೂರ್ತಿ ಒಣಗಿದ ಮೇಲೆ ನೀರಿನಿಂದ ತೊಳೆಯಿರಿ. ಇದನ್ನು ನಿತ್ಯ ಮಾಡುವುದರಿಂದ ಒಂದು ವಾರದಲ್ಲಿ ಫಲಿತಾಂಶವನ್ನು ಕಾಣಬಹುದು.

ಹರಳೆಣ್ಣೇಯಲ್ಲಿ ಬಹಳಷ್ಟು ಶಮನಕಾರಿ ಗುಣಗಳಿರುವುದರಿಂದ ಕಲೆಗಳನ್ನು ತೊಲಗಿಸುವಲ್ಲಿ ಅದು ಬಹಳ ಸಹಾಯಕಾರಿ. ಕಲೆಗಳಿರುವ ಚರ್ಮದ ಭಾಗವನ್ನು ಸ್ವಚ್ಛಗೊಳಿಸಿ ಆ ಭಾಗಕ್ಕೆ ಹರಳೆಣ್ಣೆ ಹಚ್ಚಿ ಐದು ನಿಮಿಷ ನಿಧಾನವಾಗಿ ಮಾಲಿಶು ಮಾಡಿಕೊಳ್ಳಿರಿ. ನಂತರ ಇಪತ್ತು ನಿಮಿಶಗಳು ಎಣ್ಣೆಯಣ್ನಿ ಇಂಗಲು ಬಿಡಿ. ನಂತರ ಹತ್ತಿಯಿಂದ ಎಣ್ಣೆಯನ್ನು ತೆಗೆಯಿರಿ. ಮತೂಮ್ಮೆ ಎಣ್ಣೆಯನ್ನು ಹಚ್ಚಿ ಐದು ನಿಮಿಷ ಮಾಲಿಶು ಮಾಡಿ ಕೊನೆಯದಾಗಿ ನೀರಿನಿಂದ ತೊಳೆಯಿರಿ. ಈ ರೀತಿಯಾಗಿ ದಿನಕ್ಕೆ ಎರಡು ಬಾರಿ ಮಾಡುವುದರಿಂದ ಒಂದು ತಿಂಗಳಲ್ಲೇ ಫಲಿತಾಂಶವನ್ನು ಕಾಣಬಹುದು.

ಕಲೆ ಹಾಗೂ ಮಚ್ಚೆಗಳನ್ನು ನಿವಾರಿಸುವಲ್ಲಿ ಮೂಲಂಗಿ ಬಹಳ ಪ್ರಭಾವಿ ಔಷಧಿ. ಮೂಲಂಗಿಯನ್ನು ರುಬ್ಬಿಕೊಂಡು ಕಲೆ ಹಾಗೂ ಮಚ್ಚೆ ಇರುವ ಜಾಗಕ್ಕೆ ಹಚ್ಚಿರಿ. ಹದಿನೈದು ನಿಮಿಷಗಳು ಅದನ್ನು ಅಲ್ಲಿಯೇ ಬಿಟ್ಟು ನನತ್ರ ನೀರಿನಿಂದ ತೊಳೆಯಿರಿ. ಈ ರೀತಿಯಾಗಿ ದಿನಕ್ಕೆ ಎರಡು ಬಾರಿ ಮಾಡುವುದರಿಂದ ಕಲೆಗಳು ಕಡಿಮೆ ಯಾಗುವುದನ್ನು ನೋಡಬಹುದು.

ಮುಲ್ತಾನಿ ಮಿಟ್ಟಿಯಲ್ಲಿ ಅನೇಕ ನೈಸರ್ಗಿಕ ಖನಿಜಗಳಿರುವುದರಿಂದ ಅದು ಚರ್ಮವನ್ನು ಗೌರವರ್ಣಕ್ಕೆ ತರುವಲ್ಲಿ ಸಹಾಯಮಾಡುತ್ತದೆ. ಮುಲ್ತಾನಿ ಮಿಟ್ಟಿ ಹಾಗೂ ನೀರನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿಕೊಳ್ಳಿ, ಅದಕ್ಕೆ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಅದನ್ನು ಕಲೆಗಳಿರುವೆಡೆ ಹಚ್ಚಿಕೊಳ್ಳಿ ಹಾಗೂ ಒಣಗುವವರೆಗೂ ಬಿಡಿ. ಇಡೀ ಮುಖಕ್ಕೆ ಹಚ್ಚುವಿರಾ ದರೆ ಅದನ್ನು ಇಡಿಯಾಗಿ ಒಣಗಲು ಬಿಡಬೇಡಿ. ನಂತರ ನೀರು ಬಳಸಿ, ಕೈಯಿಂದ ಉಜ್ಜಿ ಮುಖವನ್ನು ತೊಳೆಯಿರಿ. ಇದ್ರಲ್ಲಿ ನಿಮಗಿಷ್ಟವಾದ ವಿಧಾನವನ್ನು ಬಳಸಿ ಕಪ್ಪು ಕಲೆಯಿಂದ ಮುಕ್ತಿ ಪಡೆಯಿರಿ.

Leave A Reply

Your email address will not be published.