ಅತ್ತಿಹಣ್ಣನ್ನು ಎಂದಾದ್ರೂ ತಿಂದಿದ್ದೀರಾ ? ಅಪರೂಪದ ಅತ್ತಿಹಣ್ಣಿನ ಮಹತ್ವ ನಿಮಗೆ ಗೊತ್ತಾ ?

  • ರಕ್ಷಾ ಬಡಾಮನೆ

ಹಿಂದೂ ಸಂಪ್ರದಾಯದಲ್ಲಿ ಔದುಂಬರ ವೃಕ್ಷ ಎಂದೇ ಕರೆಯಲ್ಪಡುವ ಅತ್ತಿ ಮರವು ಪೂಜನೀಯ ಸ್ಥಾನದಲ್ಲಿರುವ ಆರೋಗ್ಯಕರ ವೃಕ್ಷ. ಅತ್ತಿಮರ ಇದರ ಸಸ್ಯಶಾಸ್ತ್ರೀಯ ಹೆಸರು ಫೈಕಸ್ ರೆಸೆಮೊಸಾ. ಹಳ್ಳಗಳ ದಂಡೆಯ ಮೇಲೆ ಸಾಧಾರಣ ಎತ್ತರದಲ್ಲಿ ಬೆಳೆಯುತ್ತದೆ.

10-15 ಮೀಟರ್ ಎತ್ತರ ಬೆಳೆಯುವ ಸದಾ ಹಸಿರು ವೃಕ್ಷ, ಎಲೆ, ಕಾಯಿ, ಫಲ, ತೊಗಟೆಯಿಂದ ಹಳದೀ ವರ್ಣದ, ಅಂಟಾದ ಹಾಲು ಬರುವುದು, ಕಾಯಿ ಹಸಿರಾಗಿದ್ದು, ಗುಂಡಾಗಿರುವುದು. ಹಣ್ಣಾದಾಗ ಕೆಂಪು ಬಣ್ಣವನ್ನು ಹೊಂದುವುದು. ಹಣ್ಣು ಮೃದುವಾಗಿರುವುದು ಮತ್ತು ಪರಿಮಳವಿರುವುದು.

ಹೋಳು ಮಾಡಿದಾಗ ಒಳಗಡೆ ಇರುವೆಗಳಿರುವುವು. ಇರುವೆಗಳ ಪರಾಗಸ್ಪರ್ಶದಲ್ಲಿ ನೆರವಾಗುವುವು. ಒಳಗಡೆ ಸಣ್ಣ ಬೀಜಗಳು ನೂರಾರು ಇರುವುವು. ರೆಂಬೆಗಳ ತುಂಬಾ ಮತ್ತು ಕಾಂಡದಲ್ಲಿ ಗೊಂಚಲು ಗೊಂಚಲಾಗಳಾಗಿ ಕಾಯಿ ಬಿಡುವುದು. ಬಹು ಪರಿಚಿತ ವೃಕ್ಷ ಮತ್ತು ಸಾಲು ಮರಗಳಾಗಿ ಮತ್ತು ಊರ ಗುಂಡು ತೋಪಿನಲ್ಲಿ ಬೆಳೆಸುತ್ತಾರೆ.

ಕೋತಿಗಳು, ಅಳಿಲು, ಗಿಣಿ, ಮತ್ತು ಪಶುಪಕ್ಷಿಗಳಿಗೆ ಪ್ರಿಯವಾದ ಹಣ್ಣು ಮತ್ತು ಪುಷ್ಟಿದಾಯಕವೂ ಹೌದು. ಅತ್ತಿ ಹಣ್ಣು ಯಾವಾಗಲು ಸಿಗುವುದಿಲ್ಲ. ಹೀಗಾಗಿ ಇತ್ತೀಚೆಗೆ ಅತ್ತಿ ಹಣ್ಣಿನ ಡ್ರೈ ಫ್ರೂಟ್ಸ್ ತುಂಬಾ ಫೇಮಸ್. ಬೆಲೆಯೂ ಜಾಸ್ತಿನೇ ಇರುತ್ತೆ. ಇನ್ನು, ಮಾರ್ಚ್ನಿಂದ ಆಗಸ್ಟ್ವರೆಗೆ ಅತ್ತಿ ಹಣ್ಣು ಸಿಗೋದ್ರಿಂದ ಸಾಮಾನ್ಯವಾಗಿ ಜ್ಯೂಸ್ ಅಂಗಡಿಗಳಲ್ಲಿ ಸಿಗುತ್ತೆ.

ಇದರ ಆರೋಗ್ಯಕರ ಪ್ರಯೋಜನಗಳು ಕೂಡ ಅನೇಕ ಉಷ್ಣತೆಯಿಂದ ಬಾಯಿಹುಣ್ಣಾಗಿದ್ದರೆ ಅತ್ತಿ ಎಲೆ ಮೇಲಿನ ಉಬ್ಬಿದ ಕಾಳುಗಳನ್ನು ತೆಗೆದು ಕಲ್ಲುಸಕ್ಕರೆಯ ಜತೆ ಅರೆದು ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ. ಉಗುರು ಸುತ್ತು ಆದ ಬೆರಳನ್ನು ಹತ್ತಿ ಹಣ್ಣಿನೊಳಗೆ ಇಟ್ಟು ಗಟ್ಟಿಯಾಗಿ ಕಟ್ಟಿದರೆ, ಉಗುರು ಸುತ್ತು ಬೇಗ ಮಾಯುತ್ತದೆ.

ಅತ್ತಿ ಮರದ ತಾಜಾ ಎಲೆಯನ್ನು ಅರೆದು ಅದಕ್ಕೆ ಮೊಸರು ಹಾಗೂ ಸೈಂಧವ ಉಪ್ಪನ್ನು ಬೆರೆಸಿ ಕುಡಿದರೆ ಮೂಲವ್ಯಾಧಿ ಗುಣವಾಗುತ್ತದೆ.
ಅತ್ತಿ ಮರದ ತೊಗಟೆಯನ್ನು ನೀರಲ್ಲಿ ತೇದು ದೇಹದಲ್ಲಿ ಊತ ಇರುವ ಜಾಗದಲ್ಲಿ ಹಟ್ಟಿದರೆ ಊತ ಬೇಗ ಶಮನವಾಗುತ್ತದೆ.

ಅತ್ತಿ ಹಣ್ಣಿನ ಸೇವನೆಯಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಹೆಣ್ಣು ಮಕ್ಕಳಲ್ಲಿ ಬಿಳಿ ಮುಟ್ಟು ಸಮಸ್ಯೆ ಹೆಚ್ಚಾಗಿದ್ದರೆ ಅತ್ತಿ ಹಣ್ಣಿನ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ದಿನಕ್ಕೆ 2 ಬಾರಿ ಕುಡಿದರೆ ತೊಂದರೆ ನಿವಾರಣೆಯಾಗುತ್ತದೆ.

ಅತ್ತಿಕಾಯಿಯ ಪುಡಿಗೆ ಕಲ್ಲುಸಕ್ಕರೆ ಬೆರೆಸಿ ನೀರಿನ ಜತೆ ಕುಡಿದರೆ ಮುಟ್ಟಿನ ಸಮಯದಲ್ಲಿ ಆಗುವ ಅತಿ ಹೆಚ್ಚು ರಕ್ತಸ್ರಾವ ನಿಲ್ಲುತ್ತದೆ. ಅತ್ತಿ ಮರದ ತೊಗಟೆ ಕಷಾಯದಿಂದ ಪ್ರತಿ ದಿನ ಬಾಯಿ ಮುಕ್ಕಳಿಸಿದರೆ ಪದೇ ಪದೇ ಆಗುತ್ತಿರುವ ಬಾಯಿಹುಣ್ಣು ನಿವಾರಣೆಯಾಗುತ್ತದೆ.

ಅತ್ತಿ ರಸವನ್ನು ಗೋಧಿ ಹಿಟ್ಟಿನಲ್ಲಿ ಚೆನ್ನಾಗಿ ಕಲೆಸಿ, ಬಾವುಗಳಿಗೆ ಲೇಪಿಸಿ ಬಟ್ಟೆ ಕಟ್ಟುವುದರಿಂದ ಬಾವು ವಾಸಿಯಾಗುವುದು. ಅತ್ತಿ ಮರದ ತೊಗಟೆಯನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಚೂರ್ಣ ಮಾಡಬೇಕು.

ಬಳಿಕ ಎರಡು ಚಮಚ ಪುಡಿಯನ್ನ ಬಿಸಿ ನೀರಿಗೆ ಹಾಕಿ ಕಷಾಯ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮೂಗಿನಿಂದ ರಕ್ತಸ್ರಾವ ಆಗುತ್ತಿದ್ದರೆ ಅತ್ತಿ ಹಣ್ಣಿಗೆ ಸಕ್ಕರೆ ಸೇರಿಸಿ ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ.

Comments are closed.