Green Gram Rotti Recipe :ಶುಗರ್‌, ಥೈರಾಯ್ಡ್‌ ಸಮಸ್ಯೆ ನಿವಾರಿಸುತ್ತೆ ಹೆಸರು ಕಾಳಿನ ರೊಟ್ಟಿ

(Green Gram Roti Recipe)ದೇಹದಲ್ಲಿ ಪ್ರೋಟಿನ್‌ ಅಂಶಗಳು ಕಡಿಮೆ ಆದಾಗ ಸಾಕಷ್ಟು ಅನಾರೋಗ್ಯದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಪ್ರತಿದಿನ ಹೆಸರು ಕಾಳು ನೆನಸಿಟ್ಟು ಮೊಳಕೆ ಬರಿಸಿ ತಿನ್ನುವುದರಿದ ಅಧಿಕ ಪ್ರೋಟಿನ್‌ ಅಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಹೆಸರುಕಾಳಿನಲ್ಲಿ ಅಧಿಕವಾಗಿ ಪ್ರೋಟಿನ್‌ ಇರುವುದರಿಂದ ಪ್ರತಿದಿನ ಇದನ್ನು ಸೇವನೆ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಬರಿ ಹೆಸರುಕಾಳನ್ನು ತಿನ್ನಲು ಬಯಸದವರು ಇದರ ರೊಟ್ಟಿ ಮಾಡಿಕೊಂಡು ತಿಂದರೆ ಶುಗರ್‌ ಮತ್ತು ಥೈರಾಯಡ್‌ ಸಮಸ್ಯೆಯನ್ನು ನಿವಾರಣೆ ಮಾಡುವುದರ ಜೊತೆಗೆ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಸರು ಕಾಳು ರೊಟ್ಟಿ ಹೇಗೆ ಮಾಡುವುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Green Gram Roti Recipe)ಬೇಕಾಗುವ ಸಾಮಾಗ್ರಿಗಳು:

  • ಹೆಸರು ಕಾಳು
  • ಹುರುಳಿಕಾಳು
  • ಶುಂಠಿ
  • ಹಸಿ ಮೆಣಸು
  • ಕೊತ್ತಂಬರಿ ಸೊಪ್ಪು
  • ಈರುಳ್ಳಿ
  • ಕ್ಯಾರೆಟ್‌
  • ಮೆಂತ್ಯೆ ಸೊಪ್ಪು
  • ಅಜ್ವಾನ ಪುಡಿ
  • ಜೋಳದ ಹಿಟ್ಟು
  • ಕೊಬ್ಬರಿ ಎಣ್ಣೆ

ಮಾಡುವ ವಿಧಾನ
ಬೌಲ್ ನಲ್ಲಿ ಅರ್ಧ ಕಪ್‌ ಹೆಸರು ಕಾಳು, ಮೂರು ಚಮಚ ಹುರುಳಿಕಾಳು ಹಾಕಿ ಅದಕ್ಕೆ ನೀರು ಹಾಕಿಕೊಂಡು ತೊಳೆದುಕೊಳ್ಳಬೇಕು. ಅದೆ ಬೌಲ್‌ ನಲ್ಲಿ ಹೆಸರುಕಾಳು ಮತ್ತು ಹುರುಳಿ ಕಾಳನ್ನು ನೀರಲ್ಲಿ ನಾಲ್ಕು ಗಂಟೆಯವರೆಗೆ ನೆನಸಬೇಕು. ಮಿಕ್ಸಿ ಜಾರಿಗೆ ಅರ್ಧದಷ್ಟು ನೆನಸಿಕೊಂಡ ಹೆಸರುಕಾಳು ಮತ್ತು ಹುರುಳಿಕಾಳು ಹಾಕಿ, ಅರ್ಧ ಶುಂಠಿ, ಒಂದು ಹಸಿ ಮೆಣಸು, ಕೋತ್ತಂಬರಿಸೊಪ್ಪು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಬೌಲ್‌ ಗೆ ಹಾಕಿಕೊಂಡು ಅದಕ್ಕೆ ಹೆಚ್ಚಿಕೊಂಡ ಒಂದು ಈರುಳ್ಳಿ, ಒಂದು ಕಪ್‌ ತುರಿದ ಕ್ಯಾರೆಟ್, ಸ್ವಲ್ಪ ಮೆಂತ್ಯೆಸೊಪ್ಪು, ಒಂದು ಚಮಚ ಅಜ್ವಾನ ಪುಡಿ, ಕಾಲುಕಪ್‌ ಜೋಳದ ಹಿಟ್ಟು ಹಾಕಿ ಕಲಸಿಕೊಂಡು ಉಂಡೆ ಮಾಡಿಕೊಳ್ಳಬೇಕು.

ಇದನ್ನೂ ಓದಿ:Ragi Laddu Recipe:ರಾಗಿ ಮುದ್ದೆ, ದೋಸೆ ಇಷ್ಟಪಡದವರು ತಿನ್ನಿ ರಾಗಿ ಲಡ್ಡು

ಇದನ್ನೂ ಓದಿ:Cracked Heels Reduce Tips:ನಿಮ್ಮ ಹಿಮ್ಮಡಿ ಬಿರುಕು ಬಿಡುತ್ತಿದ್ದರೆ ಚಿಂತೆ ಬೇಡ ಇಲ್ಲಿದೆ ಪರಿಹಾರ

ಇದನ್ನೂ ಓದಿ:Ajawan And Camphor Health Tips:ಅಜವಾನ, ಪಚ್ಚ ಕರ್ಪೂರ ಬಳಸಿದ್ರೆ ಶೀತ ,ಕೆಮ್ಮು ,ತಲೆನೋವು ಕಡಿಮೆಯಾಗುತ್ತೆ

ಈ ಉಂಡೆಯನ್ನು ಬಟ್ಟೆಯ ಮೇಲೆ ರೊಟ್ಟಿಯ ತರ ತಟ್ಟಿಕೊಂಡು, ಗ್ಯಾಸ್‌ ಹಚ್ಚಿ ತವಾ ಇಟ್ಟುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆ ಸವರಿ ತಟ್ಟಿಕೊಂಡ ಹಿಟ್ಟನ್ನು ಬಟ್ಟೆಯ ಸಮೆತ ತವಾದ ಮೇಲೆ ಹಾಕಿ ನಿಧಾನಕ್ಕೆ ಬಟ್ಟೆಯನ್ನು ತೆಗೆಯಬೇಕು. ಸಣ್ಣ ಉರಿಯಲ್ಲಿ ಕಾಯಿಸಿಕೊಂಡರೆ ನಿಮ್ಮ ಆರೋಗ್ಯವನ್ನು ಕಾಪಾಡುವ ಮತ್ತು ರುಚಿಕರವಾದ ಹೆಸರುಕಾಳು ರೊಟ್ಟಿ ಸವಿಯಲು ರೆಡಿ.

Green Gram Rotti Recipe green gram Roti relieves the problem of sugar and thyroid

Comments are closed.