Hair Beauty Tips : ಕಪ್ಪಾದ ದಟ್ಟವಾದ ಕೂದಲು ನಿಮಗೆ ಬೇಕೇ ? ಬಳಸಿ ಈ ಎಣ್ಣೆ

ಚಳಿಗಾಲ ಪ್ರಾರಂಭವಾದರೆ ಸಾಕು ಕೂದಲು ಉದುರುವ ಸಮಸ್ಯೆ, ತಲೆಹೊಟ್ಟಿನ ಸಮಸ್ಯೆ (Hair Beauty Tips) ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ಶುರುವಾಗುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಕೂದಲು ತನ್ನ ಶುಷ್ಕತೆಯನ್ನು ಕಳೆದುಕೊಂಡು ಕಳೆಗುಂದಿದ ಹಾಗೆ ಇರುತ್ತದೆ. ಇದಕ್ಕೆ ಯಾವ ಶ್ಯಾಂಪೂ, ಎಣ್ಣೆಯನ್ನು ಬಳಸಿದರೂ ಪ್ರಯೋಜನವಾಗದೇ ಹೆಂಗೆಳೆಯರು ಬೇಸರಗೊಂಡಿರುತ್ತಾರೆ.

ಅದರಲ್ಲೂ ಮಳೆಗಾಲ ಮತ್ತು ಚಳಿಗಾಲದಲ್ಲಿ ಕೂದಲು ಉದುರುವ ಸಮಸ್ಯೆ ಹಾಗೂ ತಲೆಹೊಟ್ಟಿನ ಸಮಸ್ಯೆ ಅಧಿಕವಾಗಿರುತ್ತದೆ. ಮನೆಯಲ್ಲಿ ತಯಾರಿಸುವ ಮನೆಮದ್ದಿನ ಮೂಲಕ ಉದುರಿದ ಕೂದಲಿನ ಜಾಗದಲ್ಲಿ ಮತ್ತೆ ಕೂದಲು ಹುಟ್ಟುವ ಹಾಗೆ ಮಾಡಬಹುದಾಗಿದೆ. ಕೂದಲು ಸೊಂಪಾಗಿ ಬೆಳೆಯಲು ಮತ್ತು ತಲೆಹೊಟ್ಟು ನಿವಾರಣೆಗೆ ಮನೆಯಲ್ಲಿ ತಯಾರಿಸುವ ಮನೆಮದ್ದುನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :
ತೆಂಗಿನ ಎಣ್ಣೆ
ಹರಳೆಣ್ಣೆ
ವಿಟಮಿನ್‌ ಇ ಮಾತ್ರೆ

ತಯಾರಿಸುವ ವಿಧಾನ :
ಮೊದಲಿಗೆ ಒಂದು ಬೌಲ್‌ಗೆ ಮೂರರಿಂದ ಐದು ಚಮಚ ತೆಂಗಿನ ಎಣ್ಣೆಯನ್ನು ಹಾಕಿಕೊಳ್ಳಬೇಕು. ನಂತರ ಅದಕ್ಕೆ ಒಂದು ಚಮಚ ಹರಳೆಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ಆಮೇಲೆ ಮಿಶ್ರಣ ಮಾಡಿಕೊಂಡ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು (ಇದಕ್ಕೆ ಬೇಕಾದರೆ ಬಾದಾಮಿ ಎಣ್ಣೆ ಮತ್ತು ಆಲಿವ್‌ ಎಣ್ಣೆಯನ್ನು ಬಳಸಿಕೊಳ್ಳಬಹುದು) ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡ ಮೇಲೆ ಅದಕ್ಕೆ ಒಂದು ವಿಟಮಿನ್‌ ಇ ಮಾತ್ರೆಯನ್ನು ಕಟ್‌ ಮಾಡಿ ಅದರ ಒಳಗೆ ಇರುವ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಸರಿಯಾಗಿ ಹಾಕಿಕೊಳ್ಳಬೇಕು.

ಇದನ್ನೂ ಓದಿ : Insomnia Home Remedies:ನಿದ್ರಾಹೀನತೆ ಸಮಸ್ಯೆ ನಿವಾರಣೆ ಮಾಡಲು ಮನೆಮದ್ದು

ಇದನ್ನೂ ಓದಿ : Oily Skin : ನಿಮ್ಮದು ಎಣ್ಣೆಯುಕ್ತ ತ್ವಚೆನಾ; ಹಾಗಾದರೆ ಇದನ್ನು ಮಾಡಿ ನೋಡಿ, ಒಂದೇ ವಾರದಲ್ಲಿ ಸಮಸ್ಯೆ ದೂರವಾಗುವುದು

ಇದನ್ನೂ ಓದಿ : Drink More Water In Winter :ಹೆಚ್ಚು ನೀರು ಕುಡಿಯಿರಿ ಚಳಿಗಾಲದಲ್ಲಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ

ಇದನ್ನು ತಲೆಸ್ನಾನದ ಹಿಂದಿನ ದಿನ ಅಥವಾ ತಲೆಸ್ನಾನಕ್ಕೆ ಐದಾರು ಗಂಟೆಗೆ ಮೊದಲು ಹಾಕಿ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ದಟ್ಟವಾಗಿ ಬೆಳೆಯುತ್ತದೆ. ಈ ಎಣ್ಣೆಯನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ನಿಯಮಿತವಾಗಿ ಬಳಸುವುದರಿಂದ ಕೂದಲು ಕಪ್ಪಾಗಿ ದಟ್ಟವಾಗಿ ಚೆನ್ನಾಗಿ ಬೆಳೆದು ಕೂದಲು ಉದರುವ ಸಮಸ್ಯೆಯಿಂದ ಮುಕ್ತರಾಗಬಹುದು.

Hair Beauty Tips: Do you want dark thick hair? Use this oil

Comments are closed.