Mussoorie Winterline : ಮಸ್ಸೂರಿ ವಿಂಟರ್‌ಲೈನ್‌ ಉತ್ಸವ; ಪ್ರಕೃತಿ ಸೌಂದರ್ಯದ ಸೊಬಗು

ಉತ್ತರಾಖಾಂಡ್‌ (Uttarakhand) ನ ಪ್ರಸಿದ್ಧ ಬೆಟ್ಟಗಳ ರಾಣಿ (Queen of Hills) ಎಂದೇ ಖ್ಯಾತಿ ಪಡೆದ ಮಸ್ಸೂರಿ (Mussoorie) ಯ ಮಾಲ್‌ರೋಡ್‌ನಿಂದ ಗೋಚರಿಸುವ ನೇರವಾದ ಕೆಂಪು ಹಳದಿ ರೇಖೆಯನ್ನು ವಿಂಟರ್ ಲೈನ್ (Mussoorie Winterline) ಎಂದು ಕರೆಯಲಾಗುತ್ತದೆ. ತಜ್ಞರ ಪ್ರಕಾರ, ಭೂಮಿಯ ಮೇಲಿನ ಧೂಳಿನ ಕಾರಣದಿಂದ ವಿಂಟರ್‌ಲೈನ್‌ ರೂಪುಗೊಂಡಿದೆ ಮತ್ತು ಈ ನೋಟವು ಪ್ರಪಂಚದಲ್ಲಿ ಸ್ವಿಟ್ಜರ್ಲೆಂಡ್ ಹೊರತುಪಡಿಸಿ ಮಸ್ಸೂರಿಯಲ್ಲಿ ಮಾತ್ರ ಕಂಡುಬರುತ್ತದೆ.

ಅಂದಹಾಗೆ, ಮಸ್ಸೂರಿಯು ವರ್ಷವಿಡೀ ಪ್ರವಾಸಿಗರಿಂದ ತುಂಬಿರುತ್ತದೆ. ಆದರೆ ಚಳಿಗಾಲದಲ್ಲಿ ಎರಡು ವಿಷಯಗಳಿಗೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಮೊದಲನೆಯದು ಚಳಿಗಾಲ ಮತ್ತು ಎರಡನೆಯದು ಹಿಮಪಾತ. ಈ ಅದ್ಭುತ ದೃಶ್ಯವನ್ನು ನೋಡಲು ಪ್ರಪಂಚದಾದ್ಯಂತದ ಜನರು ಮಸ್ಸೂರಿಗೆ ಹೋಗುತ್ತಾರೆ.

ಮಸ್ಸೂರಿಯು ತನ್ನ ನೈಸರ್ಗಿಕ ಸೌಂದರ್ಯದಿಂದಾಗಿ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ. ಆದರೆ, ವಿಂಟರ್‌ ಲೈನ್‌ ಕಾರಣದಿಂದಾಗಿ ಪ್ರವಾಸಿಗರು ಡಿಸೆಂಬರ್ ತಿಂಗಳಲ್ಲಿ ಇಲ್ಲಿಗೆ ಹೆಚ್ಚಾಗಿ ಭೇಟಿಕೊಡುತ್ತಾರೆ. ಉದ್ದನೆಯ ಹಳದಿ ಮತ್ತು ಕೆಂಪು ರೇಖೆಯನ್ನು ನೋಡಲು ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

Mussoorie Winterline : ವಿಂಟರ್‌ ಲೈನ್‌ ಉತ್ಸವ:

  • ಮಾಲ್ರೋಡ್‌ನಿಂದ ಧೂನ್‌ಘಾಟಿಯ ಮೇಲೆ ನೇರವಾದ ಕೆಂಪು ಮತ್ತು ಹಳದಿ ರೇಖೆ ಕಂಡುಬರುತ್ತದೆ, ಇದನ್ನು ವಿಂಟರ್ ಲೈನ್ ಎಂದು ಕರೆಯಲಾಗುತ್ತದೆ.
  • ಇದನ್ನು ನೋಡಲು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮಸ್ಸೂರಿಗೆ ಬರುತ್ತಾರೆ.
  • ತಜ್ಞರ ಪ್ರಕಾರ, ಭೂಮಿಯಿಂದ ಏರುವ ಧೂಳಿನ ಕಾರಣದಿಂದಾಗಿ ಈ ರೇಖೆಯು ರೂಪುಗೊಳ್ಳುತ್ತದೆ.
  • ಸೂರ್ಯನ ಕಿರಣಗಳು ಈ ರೇಖೆಯ ಮೇಲೆ ಬಿದ್ದಾಗ, ಅದು ಹೊಳೆಯುತ್ತದೆ.
  • ಈ ರೇಖೆಯನ್ನು ಮಸ್ಸೂರಿಯಿಂದ ಡೆಹ್ರಾಡೂನ್ ಕಣಿವೆಯ ಕಡೆಗೆ ಅಕ್ಟೋಬರ್ ಅಂತ್ಯದಿಂದ ಜನವರಿವರೆಗೆ ಕಾಣಬಹುದು.

ವಿಂಟರ್‌ಲೈನ್‌ನ ವಿಶಿಷ್ಟ ನೋಟವನ್ನು ನೋಡಲು ಹೋಗುವುದು ಹೇಗೆ?
ಮಸ್ಸೂರಿಯಲ್ಲಿ ಪ್ರತಿ ವರ್ಷದಂತೆ, ಈ ವರ್ಷವೂ ಧೂನಘಾಟಿಯ ಮೇಲೆ ವಿಂಟರ್‌ ಲೈನ್‌ ಗೋಚರಿಸುತ್ತದೆ. ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಛಾಯಾಗ್ರಾಹಕರಿಗೆ ವಿಂಟರ್ ಲೈನ್‌ನ ವಿಶೇಷವಾಗಿದೆ. ಪ್ರಕೃತಿಯ ಅಧ್ಬುತ ದೃಶ್ಯ ನೋಡಲು ಮಸ್ಸೂರಿಗೆ ಹೋಗಲು ನೀವು ವಿಮಾನ, ಟ್ರೈನ್‌ ಮತ್ತು ರಸ್ತೆ ಸಾರಿಗೆಯ ಮೂಲಕ ಹೋಗಬಹುದು.

ಹತ್ತಿರದ ಏರ್‌ಪೋರ್ಟ್‌ : ಡೆಹ್ರಾಡೂನ್‌ನ ಜಾಲಿ ಗ್ರಾಂಟ್‌ ಏರ್‌ಪೋರ್ಟ್‌
ಹತ್ತಿರದ ರೇಲ್ವೆ ಸ್ಟೇಷನ್‌ : ಡೆಹ್ರಾಡೂನ್‌ ರೇಲ್ವೇ ಸ್ಟೇಷನ್‌
ಹತ್ತಿರದ ರಸ್ತೆ ಸಾರಿಗೆ ಸಂಪರ್ಕ : ದೆಹಲಿ, ಡೆಹ್ರಾಡೂನ್‌, ಹೃಷಿಕೇಶ, ಹರಿದ್ವಾರಗಳಿಂದ ರಸ್ತೆ ಸಾರಿಗೆ ಸಂಪರ್ಕವಿದೆ.

ಇದನ್ನೂ ಓದಿ : India’s Longest Train Journey : ಭಾರತದ ಅತಿ ಉದ್ದದ ರೈಲು ಮಾರ್ಗದಲ್ಲಿ ನೀವು ಪ್ರಯಾಣಿಸಿದ್ದೀರಾ?

ಇದನ್ನೂ ಓದಿ : History of Barkur: ಒಂದೊಂದು ಕಲ್ಲುಗಳು ಸಾರುತ್ತವೆ ಬಾರ್ಕೂರಿನ ಇತಿಹಾಸ

(Mussoorie Winterline. Mussoorie is ready to welcome winterline carnival this December)

Comments are closed.