Radish : ಮೂಲಂಗಿ ಅಂದ್ರೆ ನಿಮಗೆ ಅಲರ್ಜಿನಾ ? ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಅಂತಾ ತಿಳಿದ್ರೆ ಬೇಡಾ ಅಂದ್ರೂ ಮೂಲಂಗಿ ತಿನ್ನುತ್ತೀರಿ

ಸಾಮಾನ್ಯವಾಗಿ ಮೂಲಂಗಿಯನ್ನು ತಿಂದಿರುತ್ತೀರಿ, ಆದರೆ ಮೂಲಂಗಿ ಬಹುತೇಕರಿಗೆ ಇಷ್ಟವಾಗೋದಿಲ್ಲ. ಆದ್ರೆ ಮೂಲಂಗಿ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವನ್ನು ತರುತ್ತದೆ ಅನ್ನೋದು ನಿಮಗೆ ತಿಳಿದ್ರೆ ತಿಂಗಳಲ್ಲಿ ಒಮ್ಮೆಯಾದ್ರೂ ತಿನ್ನದೇ ಇರೋದಕ್ಕೆ ಸಾಧ್ಯವೇ ಇಲ್ಲ. ಅದ್ರಲ್ಲೂ ನಿತ್ಯವೂ ಮೂಲಂಗಿ ಸೇವನೆಯಿಂದ ಆರೋಗ್ಯ ವೃದ್ದಿಸುತ್ತದೆ. ಅಷ್ಟೇ ಅಲ್ಲಾ ಔಷದೀಯ ಗುಣವನ್ನು ಹೊಂದಿದೆ.

ಸಾಮಾನ್ಯ ತರಕಾರಿ ಅನ್ನಿಸಬಹುದಾದ ಮೂಲಂಗಿಯಲ್ಲಿ ವಿಟಮಿನ್‌ ಸಿ ಹೇರಳವಾಗಿದೆ. ದೇಹದಲ್ಲಿರುವ ರಕ್ತಕಣಗಳನ್ನು ವೃದ್ದಿಸಲು ಸಹಕಾರ ಮಾಡುಯತ್ತದೆ. ಅಲ್ಲದೇ ದೇಹದಲ್ಲಿ ರೋಗ ಪ್ರತಿರೋದಕ ಶಕ್ತಿಯನ್ನು ಹೆಚ್ಚುತ್ತದೆ. ಇಷ್ಟೇ ಅಲ್ಲದೇ ಮೂಲಂಗಿಯಲ್ಲಿ ಇತ್ತೀಚಿನ ದಿನದಲ್ಲಿ ಮನುಷ್ಯರನ್ನು ಹೆಚಾಗಿ ಕಾಡುತ್ತಿರುವ ರೋಗ ಕ್ಯಾನ್ಸ್‌ರ್ ಅನ್ನು ಕೂಡ ತಡೆಗಟ್ಟುವ ಶಕ್ತಿ ಇದೆ.

ಇದನ್ನೂ ಓದಿ: ಇನ್ನೇನು ಶುರುವಾಯ್ತು ಚಳಿಗಾಲ, ನಿಮ್ಮ ತ್ವಚೆಯ ಆರೈಕೆ ಹೀಗಿರಲಿ

ಕೆಂಪು ರಕ್ತ ಕಣದ ಬೆಳವಣಿಗೆಯ ಜೊತೆಗೆ ಕಾಮಾಲೆ ರೋಗದ ಚಿಕ್ಸಿತ್ತೆಗೆ ಮೂಲಂಗಿ ರಾಮಭಾಣ. ಮೂಲಂಗಿ ಸೇವನೆಯಿಂದ ದೇಹದ ತೂಕವನ್ನು ಇಳಿಸಲು ಮೂಲಂಗಿ ಸಹಾಯಕವಾಗಲಿದೆ. ಮೂಲಂಗಿ ಸೇವನೆಯಿಂದ ಬೇಗನೇ ಹಸಿವಾಗುವುದಿಲ್ಲ. ಹೊಟ್ಟೆ ತುಂಬಿದಂತೆ ಅನುಭವಾಗುತ್ತದೆ ಇದರಿಂದ ದೇಹದ ತೂಕ ಕಡಿಮೆ ಮಾಡಲು ಬಯಸುವವರಿಗೆ ಉಪಯೋಗವಾಗುತ್ತದೆ. ಅಲ್ಲದೇ ಮೂಲವ್ಯಾದಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೂಲಂಗಿಯನ್ನು ಸೇವನೆ ಮಾಡಲು ವೈದ್ಯರೇ ಸಲಹೆ ನೀಡುತ್ತಾರೆ.

ಮೂತ್ರ ಕೋಶ ಹಾಗೂ ಮೂತ್ರ ಪಿಂಡವನ್ನು ಶುದ್ದೀಕರಿಸಲು ಮೂಲಂಗಿ ಸೇವನೆ ಸಹಾಯಕ ವಾಗಲಿದೆ. ಅಲ್ಲದೇ ಮೂತ್ರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರು ಅದನ್ನು ಮೂಲಂಗಿ ತಿನ್ನುವುದರಿಂದ ನಿವಾರಿಸಿಕೊಳ್ಳಬಹುದಾಗಿದೆ. ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸಲು ಮೂಲಂಗಿ ಸಹಾಯಕವಾಗಿದೆ.

ಇದನ್ನೂ ಓದಿ: Guava : ಮುಖದ ಸೌಂದರ್ಯಕ್ಕೆ ಪೇರಳೆ ತಿನ್ನಿ

ಹಸಿ ಮೂಲಂಗಿ ತುಂಡರಿಸಿ ಅದಕ್ಕೆ ನಿಂಬೆ ರಸ, ಕಾಳುಮೆಣಸಿನ ಪುಡಿ ಹಾಗೂ ಉಪ್ಪು ಬೆರಸಿ ತಿನ್ನೂವುದರಿಂದ ಕಾಮಾಲೆ ರೋಗ, ಕಣ್ಣಿನ ತೊಂದರೆ, ಅಜೀರ್ಣದ ಸಮಸ್ಯೆ ನೀವಾರಣೆಗೆ ಸಹಾಯಕವಾಗುತ್ತದೆ. ಇಷ್ಟೇ ಅಲ್ಲದೇ ಹಸಿ ಮೂಲಂಗಿಯನ್ನು ತುರಿದು ಅದಕ್ಕೆ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ತಿನ್ನುವುದರಿಂದ ನೆಗಡಿ ನಿವಾರಣೆಯಾಗುತ್ತದೆ.

( Are you allergic to radish? If you know how much health benefits you have, you will eat radish)

Comments are closed.