T20 World Cup : ಪಾಕಿಸ್ತಾನ ವಿರುದ್ದ ಪಂದ್ಯಕ್ಕೆ ಸಜ್ಜಾಗಿದೆ ಟೀಂ ಇಂಡಿಯಾ : ಹೇಗಿರುತ್ತೆ ಗೊತ್ತಾ ಪ್ಲೇಯಿಂಗ್‌ XI

ದುಬೈ : ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಡೀ ವಿಶ್ವವೇ ಬದ್ದವೈರಿಗಳ ಕಾದಾಟಕ್ಕೆ ಕಾಯುತ್ತಿದೆ. ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ರೆ ಟೀಂ ಇಂಡಿಯಾ ಬಲಿಷ್ಠವಾಗಿದೆ. ಈಗಾಗಲೇ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ಮಣ್ಣು ಮುಕ್ಕಿಸಿರುವ ಭಾರತ ಟಿ20 ವಿಶ್ವಕಪ್‌ ಗೆಲ್ಲುವ ಕನಸು ಕಾಣುತ್ತಿದೆ. ಈ ನಡುವಲ್ಲೇ ಪಾಕ್‌ ವಿರುದ್ದದ ಪಂದ್ಯಕ್ಕೆ ಭಾರತ ತಂಡದಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಬಹುದು ಅನ್ನೋ ಮಾಹಿತಿ ಇಲ್ಲಿದೆ.

T20 World Cup 2021: India Vs Pakistan Match Tickets Sold Out
ಟೀ ಇಂಡಿಯಾ ನಾಯಕ ವಿರಾಟ್‌ ಕೊಯ್ಲಿ, ಪಾಕಿಸ್ತಾನ ನಾಯಕ ಬಾಬರ್‌ ಅಜಮ್‌ ಹಾಗೂ ವಿಶ್ವಕಪ್‌ ಟ್ರೋಫಿ

ಟಿ 20 ವಿಶ್ವಕಪ್ ಅನ್ನು ಈ ಮೊದಲು 2020 ರಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಅಲ್ಲದೇ ಭಾರತವು ಪಂದ್ಯಾವಳಿಯ ಆತಿಥ್ಯ ವಹಿಸಬೇಕಿತ್ತು. ಆದರೆ ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವಕಪ್‌ ಪಂದ್ಯಾವಳಿ ಇದೀಗ ಯುಎಇಗೆ ಶಿಫ್ಟ್‌ ಆಗಿದ್ದು, ಅರ್ಹತಾ ಪಂದ್ಯ ಹಾಗೂ ಅಭ್ಯಾಸ ಪಂದ್ಯಗಳು ನಡೆಯುತ್ತಿವೆ.

ICC T20 World Cup : India vs England warm-up Match: Ishan Kishan, KL Rahul help India beat England by 7 wickets

ವಿಶ್ವಕಪ್‌ ಪಂದ್ಯಾವಳಿಯಲ್ಲಿಯೇ ಅಕ್ಟೋಬರ್ 24 ರಂದು ಹೈ ಓಲ್ಟೇಜ್‌ ಪಂದ್ಯಾವಳಿ ನಡೆಯಲಿದೆ. ಬದ್ದ ವೈರಿ ಪಾಕಿಸ್ತಾನ ತಂಡದ ವಿರುದ್ದ ಭಾರತ ಸೆಣೆಸಾಟವನ್ನು ನಡೆಸಲಿದೆ. ಬಲಿಷ್ಠ ಭಾರತ ತಂಡಕ್ಕೆ ಮಾಜಿ ನಾಯಕ ಧೋನಿ ಮೆಂಟರ್‌ ಆಗಿ ಕಾಣಿಸಿಕೊಂಡಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ. ಅಲ್ಲದೇ ಕೆ.ಎಲ್.ರಾಹುಲ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಯ್ಲಿ, ರಿಷಬ್‌ ಪಂತ್‌, ಜಸ್ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸೆಮಿ ಅದ್ಬುತ ಫಾರ್ಮ್‌ನಲ್ಲಿದ್ದಾರೆ.

BCCI has invited applications for the post of Team India Coach and NCA Chiefs
ಭಾರತ ಕ್ರಿಕೆಟ್‌ ತಂಡ

ಕನ್ನಡಿಗ ಕೆ.ಎಲ್.ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಆರಂಭಿಕರಾಗಿ ಕಾಣಿಸಿಕೊಂಡ್ರೆ ವಿರಾಟ್‌ ಕೊಯ್ಲಿ ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೂರ್ಯ ಕುಮಾರ್ಯ ಯಾದವ್‌, ರಿಷಬ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊಹಮದ್‌ ಶೆಮಿ ಹಾಗೂ ಜಸ್ಪ್ರೀತ್‌ ಬೂಮ್ರಾ ಬೌಲಿಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಮೂರನೇ ಬೌಲರ್‌ ಆಗಿ ವರುಣ್‌ ಚಕ್ರವರ್ತಿ ಅಥವಾ ಭುವನೇಶ್ವರ್‌ ಕುಮಾರ್‌ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಜಡೇಜಾ ಜೊತೆಯಲ್ಲಿ ಅನುಭವಿ ಆರ್.‌ ಅಶ್ವಿನ್‌ ಅಥವಾ ರಾಹುಲ್‌ ಚಹರ್‌ ಸ್ಪಿನ್ನರ್‌ ಕೋಟಾದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಸಂಭಾವ್ಯ ತಂಡ : ಭಾರತ : ಕೆ.ಎಲ್.ರಾಹುಲ್‌, ರೋಹಿತ್‌ ಶರ್ಮಾ ( ಉಪನಾಯಕ), ವಿರಾಟ್‌ ಕೊಯ್ಲಿ (ನಾಯಕ), ಸೂರ್ಯಕುಮಾರ್‌ ಯಾದವ್‌, ರಿಷಬ್‌ ಪಂತ್‌, ಹಾರ್ದಿಕ್‌ ಪಾಂಡ್ಯ/ ಶಾರ್ದೂಲ್‌ ಠಾಕೂರ್‌, ರವೀಂದ್ರ ಜಡೇಜಾ, ಆರ್.ಅಶ್ವಿನ್‌ / ರಾಹುಲ್‌ ಚಹರ್‌, ಜಸ್ಪ್ರಿತ್‌ ಬೂಮ್ರಾ, ಮಹಮದ್‌ ಸೆಮಿ, ಭುವನೇಶ್ವರ್‌ ಕುಮಾರ್‌/ ವರುಣ್‌ ಚಕ್ರವರ್ತಿ

( T20 World Cup India vs Pakistan Match India Playing XI )

Comments are closed.