Veg Momos : ಮನೆಯಲ್ಲೇ ಮಾಡಿ ಚೈನೀಸ್‌ ವೆಜ್ ಮೋಮೋಸ್

ಇತ್ತೀಚಿನ ವರ್ಷಗಳಲ್ಲಿ ಚೈನೀಸ್‌ ಖಾದ್ಯಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ಅದ್ರಲ್ಲೂ ಮೊಮೂಸ್‌ ಬಹುತೇಕರಿಗೆ ಇಷ್ಟವಾಗಲಿದೆ. ಅದ್ರಲ್ಲೂ ವೆಜ್‌ ಮೋಮೊಸ್‌ ನ್ನು ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಬೆಳಗಿನ ತಿಂಡಿಯಿಂದ ಹಿಡಿದು ಸಂಜೆಯ ಸ್ಯೇಕ್ಸ್‌ ವರೆಗೂ ಈ ವೆಜ್‌ ಮೋಮೊಸ್‌ ಮಾಡಿಕೊಂಡು ಸವಿಬೋದು ರುಚಿ ಸುಪರ್‌ ಆಗಿರುತ್ತೆ. ಮಾಡಲು ಸುಲಭ ತರಕಾರಿಗಳೆಲ್ಲಾ ಇರುವುದರಿಂದ ಆರೋಗ್ಯಕ್ಕೂ ಉತ್ತಮ. ಆದ್ರೀಗ ವೆಜ್‌ ಮೋಮೋಸ್‌ನ್ನು ಮನೆಯಲ್ಲಿಯೇ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು : 1 ಕಪ್‌ ಮೈದಾ ಹಿಟ್ಟು, 1 ಕಪ್‌ ಕ್ಯಾರೇಟ್‌, 1 ಕಪ್‌ ಎಲೆ ಕೋಸ್, 1 ದೊಡ್ಡ ಗಾತ್ರದ ಈರುಳ್ಳಿ, ಅರ್ಧ ಕಪ್‌ ಕೇಪ್ಸಿಕಂ, ಅರ್ಧ ಟೇಬಲ್‌ ಸ್ಪೂನ್‌ ಶುಂಠಿ, ಅರ್ಧ ಕಪ್‌ ಕೊತಂಬರಿ ಸೊಪ್ಪು, 3 ಹಸಿಮೆಣಸಿನ ಕಾಯಿ. ಈ ಎಲ್ಲಾ ತರಕಾರಿಗಳನ್ನು ತುರಿದು ಇಟ್ಟುಕೊಳ್ಳಬೇಕು. ಅರ್ಧ ಟೀ ಸ್ಪೂನ್‌ ಪೆಪ್ಪರ್‌ ಪೌಡರ್‌, ಬೇಕಾದಷ್ಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಇದನ್ನೂ ಓದಿ: RavaVada : ಸಂಜೆ ಸ್ನ್ಯಾಕ್ಸ್ ಗೆ ಥಟ್ ಅಂತ ರೆಡಿಮಾಡಿ ರುಚಿಕರ ರವಾ ವಡೆ

ಮಾಡುವ ವಿಧಾನ : ಮೊದಲಿಗೆ ಮೈದಾ ಹಿಟ್ಟಿಗೆ ಸ್ವಪ ನೀರನ್ನು ಹಾಕಿ ಪೂರಿಗೆ ಹಿಟ್ಟು ಕಲಿಸುವ ಹದಕ್ಕೆ ಈ ಮೈದಾ ಹಿಟ್ಟನ್ನು ಕಲಸಿಕೊಳ್ಳಬೇಕು. ನಂತರ 5 ನಿಮಿಷ ಬಿಡಿ. ನಂತರ ಒಂದು ಬೌಲ್‌ ಮೇಲೆ ಕೋಟನ್‌ ಬಟ್ಟೆ ಬಿಡಿಸಿ. ಆ ಬಟ್ಟೆಯ ವಳಗೆ ಹೆಚ್ಚಿದ ತರಕಾರಿಗಳನ್ನು ಹಾಕಿ ಚೆನ್ನಾಗಿ ಹಿಂಡಿ ಅದರಲ್ಲಿರುವ ನೀರಿನ ಅಂಶವನ್ನ ತೆಗೆಯಿರಿ.

ನಂತರ ಒಂದು ಬೌಲ್‌ ಗೆ ಆ ತರಕಾರಿಗಳನೆಲ್ಲಾ ಹಾಕಿ ನಂತರ ಅದಕ್ಕೆ ಪೆಪ್ಪರ್‌ ಪೌಡರ್‌, ಉಪ್ಪು, ಕೊತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ನಂತರ ಕಲಸಿ ಇಟ್ಟುಕೊಂಡಂತ ಮೈದಾ ಹಿಟ್ಟನ್ನು ಚಿಕ್ಕ ಚಿಕ್ಕ ಪೂರಿ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಲಟ್ಟಿಸಿಕೊಳ್ಳಬೇಕು. ನಂತರ ಲಟ್ಟಿಸಿಕೊಂಡ ಹಿಟ್ಟಿನ ವಳಗೆ ಕಲಸಿ ಇಟ್ಟಂತ ತರಕಾರಿಗಳನ್ನು ಹಾಕಿಕೊಂಡು. ಮೊದಕವನ್ನು ಮಡಚುವ ರೀತಿಯಲ್ಲಿ ಮಡಚಿಕೊಳ್ಳ ಬೇಕು.

ಇದನ್ನೂ ಓದಿ: Benne Dhosa : ಬಾಯಲ್ಲಿ ನೀರೂರಿಸುತ್ತೆ ಸಾಂಪ್ರದಾಯಿಕ ದಾವಣಗೆರೆ ಬೆಣ್ಣೆ ದೋಸೆ

ನಂತರ ಇಡ್ಲಿ ಮಾಡುವ ಪಾತ್ರೆಯಲ್ಲಿ ಇದನ್ನು ಮಾಡಬಹುದು. ಇಡ್ಲಿ ಮಾಡುವ ಪಾತ್ರೆಗೆ ಮೊದಲು ಎಣ್ಣೆಯನ್ನು ಹಚ್ಚಿಕೊಳ್ಳಿ. ನಂತರ ಇದನ್ನು ಮಧ್ಯಮ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಬೇಕು. ನಂತರ ಇದನ್ನು ಟೊಮೇಟೋ ಕೆಚಪ್‌ ಜೊತೆ ಸವಿಯ ಬಹುದು. ರುಚಿ ತುಂಬಾ ಚೆನ್ನಾಗಿರುತ್ತೆ.‌

(Make It At Home Chinese Veg Momos)

Comments are closed.