wallnut : ‘ವಾಲ್ ನಟ್ʼ ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತೇ ?

ಯಾವುದೇ ಆಹಾರ ನಮಗೆ ಎಲ್ಲಾ ಪೋಷಕಾಂಶವನ್ನು ಕೊಡಲು ಸಾಧ್ಯವಿಲ್ಲ. ಹಾಗಾಗಿ ಪ್ರತಿನಿತ್ಯ ಡ್ರೈ ಪುಟ್ಸ್ ಗಳ ಸೇವನೆ ಮಾಡುವುದು ಉತ್ತಮ, ಅಂದ ಹಾಗೇ ವಾಲ್ ನಟ್ಸ್ ನ್ನು ಪ್ರತಿದಿನ ತಿಂದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಈ ವಾಲ್ ನಟ್ ನಲ್ಲಿರುವ ಅಂಶಗಳು ನಮ್ಮ ಹೃದಯ ಮತ್ತು ಮೆದುಳನ್ನು ಆರೋಗ್ಯವಾಗಿರಿಸುತ್ತದೆ. ವಾಲ್ ನಟ್ ನಲ್ಲಿ ಪಾಲಿಫಿನಾಲ್ ಇರುವುದರಿಂದ ಇದು ನಮ್ಮ ಮೆದುಳಿನ ನರಕೋಶಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ದಾಳಿಂಬೆಯಲ್ಲಿ ಅಡಗಿದೆ ಪೌಷ್ಟಿಕಾಂಶ

ಇಷ್ಟೇ ಅಲ್ಲಾ ಪ್ರತಿ ದಿನ ʼವಾಲ್ ನಟ್ʼ ತಿನ್ನುವುದರಿಂದ ಮೆದುಳಿನ ಶಕ್ತಿ ಕೂಡ ಹೆಚ್ಚಾಗುತ್ತದೆ. ಹಾಗೇ ನಮ್ಮ ಚಯಾಪಚಯ ಕ್ರೀಯೆ ಕೂಡ ಹೆಚ್ಚಿ ದೇಹದಲ್ಲಿರುವ ಬೇಡದ ಕೊಬ್ಬಿನಾಂಶವನ್ನು ಕರಗಿಸುತ್ತದೆ. ವಾಲ್ ನಟ್ ನಲ್ಲಿ ವಿಟಮಿನ್ ಬಿ1, 2, 3, 6 ಮತ್ತು ವಿಟಮಿನ್ ಇ ಆಗರವಾಗಿದೆ.

ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸುತ್ತದೆ. ಹಾಗೇ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ. ಕ್ಯಾನ್ಸರ್ ಬರದಂತೆ ಕಾಪಾಡುತ್ತದೆ. ಹಾಗೇ ಗಂಡಸರಲ್ಲಿ ವಿರ್ಯವೃದ್ಧಿಯಾಗುವಂತೆ ಮಾಡುವುದರ ಜತೆಗೆ ಮಹಿಳೆಯರಲ್ಲಿನ ಋತುಚಕ್ರ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಮುಟ್ಟಿನ ದಿನದ ನಿಯಮದ ಒಳ ಅರ್ಥ, ಆ ದಿನಗಳ ಆರೈಕೆ ಹೇಗಿರಬೇಕು ಗೊತ್ತಾ ?

(Do you know how much profit a walnut can eat?)

Comments are closed.