Coconut Health Tips : ಪ್ರತಿಯೊಬ್ಬ ಹೆಣ್ಣು ಕೂಡ ತನ್ನ ಕೂದಲು ದಟ್ಟವಾಗಿ, ಕಪ್ಪಾಗಿ ಹಾಗೂ ರೇಶ್ಮೆಯಂತೆ ಇರಬೇಕು ಅಂತಾ ಬಯಸುತ್ತಾಳೆ. ಇದೇ ಕಾರಣಕ್ಕೆ ಹಲವಾರು ಪ್ರಾಡೆಕ್ಟ್‌ಗಳನ್ನು ಬಳಕೆ ಮಾಡುತ್ತಾರೆ. ಆದರೆ ಕೆಲವೊಂದು ಲೋಷನ್, ಆಯಿಲ್‌ನಿಂದಾಗಿ ಕೂದಲು ಉದುರಿ ಹೋಗುತ್ತೆ. ಇದರ ಬದಲು ಮನೆಯಲ್ಲಿಯೇ ನಿಸರ್ಗ ದತ್ತವಾಗಿ ಸಿಗುವ ಕೊಬ್ಬರಿ ಎಣ್ಣೆಯಂತಹ ವಸ್ತುಗಳಿಂದಲೇ ಕೂದಲಿನ ಆರೈಕೆಯನ್ನು ಮಾಡಬಹುದು. ನಾವು ಹೇಳುವ ಸಿಂಪಲ್ ಆಗಿರುವ ಆರೋಗ್ಯ ಸಲಹೆಗಳನ್ನು ಫಾಲೋ ಮಾಡಿದ್ರೆ ಕೂದಲು ಬುಡದಿಂದಲೇ ಗಟ್ಟಿಯಾಗುವುದರ ಜೊತೆಗೆ ಕೂದಲು ಉದುರುವಿಕೆ ಸಮಸ್ಯೆಯಿಂದಲೂ ಮುಕ್ತಿ ದೊರೆಯಲಿದೆ. ಇನ್ನು ಪುರುಷರ ಬೊಕ್ಕತಲೆ ಚಿಂತೆಯೂ ದೂರವಾಗುತ್ತದೆ.
ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿದ್ದರೆ ಮಾತ್ರ ಬಹಳ ಬೇಗನೇ ಕೂದಲು ಬೆಳೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲಾ ಇದರಿಂದಾಗಿ ಕೂದಲು ತೆಳುವಾಗುವುದು, ಬೊಕ್ಕತಲೆ ಉಂಟಾಗುವುದನ್ನು ಕಡಿಮೆ ಆಗುತ್ತದೆ. ಅದರಲ್ಲೂ ಪುರುಷರಲ್ಲಿ ಬಹಳ ಬೇಗನೇ ಬೊಕ್ಕತಲೆ ಉಂಟಾಗುತ್ತದೆ. ಏನೂ ಮಾಡಿದ್ದರೂ ಕೂದಲು ಉದ್ದನೆ ಆಗುವುದಿಲ್ಲ. ಇಂತಹ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತದೆ. ಈ ಮನೆಮದ್ದನ್ನು ಮನೆಯಲ್ಲಿ ಮಾಡಿ ಬಳಸುವುದರಿಂದ ನಿಮ್ಮ ಕೂದಲಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಸಿಗುವುದರ ಜೊತೆಗೆ ದಟ್ಟವಾಗಿ, ಕಪ್ಪಾಗಿ ಹಾಗೂ ರೇಶ್ಮೆಯಂತಹ ಕೂದಲು ನಿಮ್ಮದಾಗುತ್ತದೆ.
ಬೇಕಾಗುವ ಸಾಮಾಗ್ರಿ :
ಒಂದು ಬೌಲ್ ಕರಿಬೇವಿನ ಸೊಪ್ಪು
ಕೊಬ್ಬರಿ ಎಣ್ಣೆ
ಮೆಂತೆ ಕಾಳು ಎರಡು ಸ್ಪೂನ್
ಕಾಳು ಮೆಣಸು ಹತ್ತರಿಂದ ಹನ್ನೆರಡು
ಮಾಡುವ ವಿಧಾನ :
ಮೊದಲಿಗೆ ಒಂದು ಬಾಣಲೆಗೆ ಎರಡು ಚಮಚ ಆಗುವಷ್ಟು ಮೆಂತೆಕಾಳು ಹಾಗೂ ಹತ್ತರಿಂದ ಹನ್ನೆರಡು ಕಾಳುಮೆಣಸು ಹಾಕಿಹುರಿದುಕೊಳ್ಳಬೇಕು. ಅದಕ್ಕೆ ಒಂದು ಕಪ್ ಆಗುವಷ್ಟು ಕರಿಬೇವಿನ ಸೊಪ್ಪನ್ನು ಹಾಕಿ ಹುರಿದುಕೊಳ್ಳಬೇಕು. ಕರಿಬೇವಿನ ಸೊಪ್ಪು ಗರಿಗರಿ ಆಗುವವರೆಗೂ ಹುರಿದುಕೊಳ್ಳಬೇಕು. ಆಮೇಲೆ ತಣ್ಣಗೆ ಆಗುವವರೆಗೂ ಬಿಡಬೇಕು. ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೌಡರ್ ಮಾಡಿಕೊಳ್ಳಬೇಕು. ನಂತರ ಒಂದು ಕಪ್ ತೆಂಗಿನ ಎಣ್ಣೆಯನ್ನು ಹಾಕಿ, ಅದಕ್ಕೆ ಎರಡರಿಂದ ಮೂರು ಚಮಚ ಮಾಡಿ ಇಟ್ಟುಕೊಂಡ ಪೌಡರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಸಣ್ಣ ಉರಿಯಲ್ಲಿ ಎರಡರಿಂದ ಮೂರು ನಿಮಿಷ ಕುದಿಸಿಕೊಳ್ಳಬೇಕು. ನಂತರ ಸ್ವಲ್ಪ ತಣ್ಣಗೆ ಆದ ಮೇಲೆ ಒಂದು ಗಾಜಿನ ಬಾಟಲ್‌ನಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಈ ಎಣ್ಣೆಯನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಅಥವಾ ದಿನಲೂ ಹಚ್ಚಿಕೊಳ್ಳಬಹುದು. ಇದನ್ನೂ ಓದಿ : Milk Benefits: ಪ್ರತಿದಿನ ರಾತ್ರಿ ಹಾಲು ಕುಡಿಯಿರಿ; ಈ ಎಲ್ಲಾ ತೊಂದರೆಗಳಿಂದ ದೂರವಿರಿ

ಕರಿಬೇವಿನ ಸೊಪ್ಪು :
ಕರಿಬೇವಿನ ಸೊಪ್ಪಿನಲ್ಲಿ ರೀಚ್ ಆದಂತಹ ಐರನ್ ಅಂಶವಿರುತ್ತದೆ. ಇದು ಸ್ಕಾಪ್‌ನಲ್ಲಿ ಇರುವಂತಹ ರಕ್ತನಾಳಗಳ ಬ್ಲೆಡ್ ಸರ್ಕುಲೇಶ್‌ನ್ನು ಹೆಚ್ಚಸಿಲು ತುಂಬಾನೇ ಸಹಾಯಕಾರಿ ಆಗುತ್ತದೆ. ಹಾಗೆಯೇ ಕೂದಲು ಬೆಳವಣೆಗೆಯನ್ನು ಹೆಚ್ಚಿಸುತ್ತದೆ. ಅದಲ್ಲದೇ ಇದರಲ್ಲಿ ವಿಟಮಿನ್ ಸಿ, ಬಿ, ಪ್ರೋಟೀನ್ ಹಾಗೂ ಆಂಟಿ ಆಕ್ಸಿಡೆಂಟ್ನಂತಹ ಅಂಶಗಳನ್ನು ಹೊಂದಿದೆ. ಈ ಎಲ್ಲಾ ಅಂಶಗಳು ನಮ್ಮ ತಲೆಕೂದಲಿನ ಬೆಳವಣಿಗೆಗೆ ತುಂಬಾ ಸಹಾಯಕಾರಿ ಆಗುತ್ತದೆ. ಕೂದಲು ದಟ್ಟವಾಗಿ, ಕಪ್ಪಾಗಿ, ಮೃದುವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಜೊತೆಗೆ ಹೇರ್‌ರೂಟ್‌ನ್ನು ಸರಿಪಡಿಸುವುದರಿಂದ ಕೂದಲು ಬೆಳವಣೆಗೆ ಸಹಾಯಕಾರಿ ಆಗುತ್ತದೆ. ಇದನ್ನೂ ಓದಿ : High Cholesterol : ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಬೇಡಿ

ಮೆಂತೆಕಾಳು :
ನಮ್ಮ ಅಡುಗೆ ಮನೆಯ ಸರ್ವೇ ಸಾಮಾನ್ಯ ಪದಾರ್ಥ ಮೆಂತೆಕಾಳು ನಮ್ಮ ಕೂದಲಿಗೆ ತುಂಬಾ ಒಳ್ಳೆಯದು. ಇದರಲ್ಲಿ ಪ್ರೋಟಿನ್ ಅಂಶ ಹೇರಳವಾಗಿರುತ್ತದೆ. ಇದರಿಂದ ನಮ್ಮ ಕೂದಲ ಬೆಳವಣಿಗೆ ತುಂಬಾ ಪ್ರಯೋಜನಕಾರಿ ಆಗಿರುತ್ತದೆ. ಕೂದಲ ಬುಡ ಗಟ್ಟಿಯಾಗಿಸುತ್ತದೆ. ತಲೆ ಹೊಟ್ಟು ನಿವಾರಣೆ ಮಾಡುತ್ತದೆ. ಕೂದಲಿನಲ್ಲಿ ಹೆಚ್ಚಿನ ಸಮಸ್ಯೆಯನ್ನು ನಿವಾರಣೆ ಮಾಡುವ ಮೂಲಕ ಕೂದಲಿನ ಬೆಳವಣೆಗೆ ತುಂಬಾನೇ ಸಹಾಯಕಾರಿ ಆಗಿರುತ್ತದೆ. ಇದನ್ನೂ ಓದಿ : Pumpkin Seeds : ನಿಮ್ಮ ಕೂದಲು ಬೆಳವಣಿಗಾಗಿ ಕುಂಬಳಕಾಯಿ ಬೀಜ ಒಮ್ಮೆ ಟ್ರೈ ಮಾಡಿ