Milk Benefits: ಪ್ರತಿದಿನ ರಾತ್ರಿ ಹಾಲು ಕುಡಿಯಿರಿ; ಈ ಎಲ್ಲಾ ತೊಂದರೆಗಳಿಂದ ದೂರವಿರಿ

Milk Benefits : ಹಾಲು ಒಂದು ಸಂಪೂರ್ಣ ಆಹಾರ. ಇದು ಅಗಾಧ ಪೋಷಕಾಂಶಗಳನ್ನು ಹೊಂದಿದೆ. ಈ ಕಾರಣದಿಂದಲೇ ವೈದ್ಯರು ಪ್ರತಿನಿತ್ಯ ರಾತ್ರಿ ಮಲಗುವ ಮೊದಲು ಒಂದು ಕಪ್ ಹಾಲು (Milk Benefits) ಕುಡಿಯಲು ಸಲಹೆ ನೀಡುತ್ತಾರೆ. ಪ್ರತಿದಿನ ರಾತ್ರಿ ಬಿಸಿ ಹಾಲು ಕುಡಿಯವುದರಿಂದ ನಮ್ಮ ಪಚನ ಶಕ್ತಿ ಹೆಚ್ಚುತ್ತದೆ. ಆರೋಗ್ಯವೃದ್ದಿಸುವುದರ ಜೊತೆಗೆ ಜೀರ್ಣ ಕ್ರಿಯೆ ಸುಧಾರಿಸುತ್ತದೆ. ಮಲ ವಿಸರ್ಜನೆಯಲ್ಲಿ ಉಂಟಾಗುವ ತೊಂದರೆ ಹೋಗಲಾಡಿಸುತ್ತದೆ.

ರಾತ್ರಿ ಹಾಲು ಕುಡಿಯುವುದು ಬೆಳಿಗ್ಗೆ ಸ್ಟ್ರೆಸ್‌ ಫ್ರೀ ಆಗಿ ಇರಲು ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಅಮಿನೊ ಆಸಿಡ್‌, ಕೋರ್ಟಿಸೋಲ್‌ ಹಾರ್ಮೋನ್‌ನ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಸ್ಟ್ರೆಸ್‌ ಕಡಿಮೆಯಾಗುತ್ತದೆ. ಮನಸ್ಸು ಶಾಂತವಾಗಿರುತ್ತದೆ.

ಪ್ರತಿದಿನ ರಾತ್ರಿ ಬೆಚ್ಚಗಿನ ಹಾಲು ಕುಡಿಯುವುದರಿಂದ ನಿದ್ರೆ ಸುಧಾರಿಸುತ್ತದೆ. ಬೆಚ್ಚಗಿನ ಹಾಲಿನಲ್ಲಿ ಲ್ಯಾಕ್ಟಾಬ್ಲುಮಿನ್‌ ಪ್ರೋಟಿನ್‌ ಕಂಡಬರುತ್ತದೆ. ಇದು ಟ್ರಿಫ್ಟೊಫಾನ್‌ ಅಮೈನೊ ಆಮ್ಲವಾಗಿದೆ. ಇದು ಸಿರೊಟೋನಿನ್‌ ಹಾರ್ಮೊನ್‌ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದರಿಂದ ಉತ್ತಮ ನಿದ್ರೆ ನಿಮ್ಮದಾಗುತ್ತದೆ. ಇದನ್ನೂ ಓದಿ : Conjunctivitis Eye : ರಾಜ್ಯದಲ್ಲಿ ಹೆಚ್ಚಾದ ಮದ್ರಾಸ್‌ ಐ : 5 ವಿಧದ ಕಂಗೆಣ್ಣು ಬೇನೆ, ನಿಮ್ಮಲ್ಲಿ ಈ ರೀತಿ ಲಕ್ಷಣಗಳು ಇದೆಯಾ ?

ಹಾಲಿನಲ್ಲಿ ಕ್ಯಾಲ್ಸಿಯಂ ಅಷ್ಟೇ ಅಲ್ಲದೆ ಫಾಸ್ಪರಸ್‌, ವಿಟಮಿನ್‌ ಡಿ ಮತ್ತು ಪ್ರೋಟೀನ್‌ಗಳಿರುತ್ತವೆ. ಅವು ಮೂಳೆಗಳನ್ನು ಗಟ್ಟಿಯಾಗಿಸುತ್ತವೆ. ಪ್ರತಿದಿನ ಹಾಲು ಕುಡಿಯುವುದರಿಂದ ಆಸ್ಟಿಯೋಪೋರೊಸಿಸ್‌ ಮತ್ತು ಮೂಳೆ ಮುರಿತಗಳನ್ನು ತಡೆಯುತ್ತದೆ.

ಇದನ್ನೂ ಓದಿ : Amruthaballi Leaves Benefits‌ : ಮಳೆಗಾಲದಲ್ಲಿ ಕಾಡುವ ವೈರಸ್‌ ರೋಗಗಳಿಗೆ ಅಮೃತ ಬಳ್ಳಿ ರಾಮಬಾಣ

ರಾತ್ರಿ ಹಾಲು ಕುಡಿದು (Milk Benefits) ಮಲಗುವುದು ದೇಹದ ತೂಕ ಇಳಿಕೆಯಲ್ಲಿಯೂ ಸಹಕಾರಿಯಾಗಿದೆ. ಹಾಲಿನಲ್ಲಿರುವ ಪ್ರೊಟೀನ್‌ಗಳೇ ಇದಕ್ಕೆ ಕಾರಣ. ಇದಲ್ಲದೆ ಹಾಲು ಹಸಿವನ್ನು ಸಹ ಕಡಿಮೆ ಮಾಡುತ್ತದೆ. ಕ್ಯಾಲ್ಸಿಯಂ ಇರುವ ಕಾರಣದಿಂದ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹಾಲು ಸಂಪೂರ್ಣ ಆಹಾರವಾಗಿರುವುದರಿಂದ ಇದು ಬ್ಲಡ್‌ ಶುಗರ್‌ ಲೆವಲ್‌ ಅನ್ನು ಸಹ ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ : Cardiac arrest – Heart attack : ಹೃದಯ ಸ್ತಂಭನ ಹಾಗೂ ಹೃದಯಾಘಾತ ನಡುವಿನ ವ್ಯತ್ಯಾಸವೇನು ? ಇಲ್ಲಿದೆ ಸಂಪೂರ್ಣ ಮಾಹಿತಿ

(milk benefits know the importance to drink warm milk every night health tips)

Comments are closed.