Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

Noni Juice  : ನೋನಿ.. ಕಳೆದ ಒಂದು ದಶಕಗಳಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಹಣ್ಣು. ಆಸ್ಟ್ರೇಲಿಯಾ, ಇಂಡೋನೇಷ್ಯಾ ದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ನೋನಿ ಹಣ್ಣನ್ನು ಸೇವನೆ ಮಾಡುತ್ತಾರೆ. ಆದರೆ ಭಾರತದಲ್ಲಿ ನೋನಿ ಜ್ಯೂಸ್‌ (Noni Juice) ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ.

Noni Juice  : ನೋನಿ.. ಕಳೆದ ಒಂದು ದಶಕಗಳಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಹಣ್ಣು. ಆಸ್ಟ್ರೇಲಿಯಾ, ಇಂಡೋನೇಷ್ಯಾ ದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ನೋನಿ ಹಣ್ಣನ್ನು ಸೇವನೆ ಮಾಡುತ್ತಾರೆ. ಆದರೆ ಭಾರತದಲ್ಲಿ ನೋನಿ ಜ್ಯೂಸ್‌ (Noni Juice) ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ. ಆದರೆ ನೋನಿ ಜ್ಯೂಸ್‌ ಕುಡಿಯೋದು ಆಯೋಗ್ಯಕ್ಕೆ ಉತ್ತಮವೇ, ಇದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತಾ ? ಇದರ ಹಿಂದಿನ ಅಸಲಿಯತ್ತು ಏನು ? ಅನ್ನೋ ಬಗ್ಗೆ ಖ್ಯಾತ ವೈದ್ಯರಾದ ಡಾ.ರಾಜು ಕೃಷ್ಣಮೂರ್ತಿ ಅವರು ಆಘಾತಕಾರಿ ಮಾಹಿತಿ ನೀಡಿದ್ದಾರೆ.

Noni Juice Drinking Is Dangerous For Health Does It Really Control Diabetes What does Dr Raju Krishnamurthy say
Image Credit to Original Source

ನೋನಿ ಜ್ಯೂಸ್‌ ಕಳೆದ ಏಳೆಂಟು ವರ್ಷಗಳಿಂದಲೂ ಹೆಚ್ಚು ಚಾಲ್ತಿಯಲ್ಲಿದೆ. ನೋನಿ ಜ್ಯೂಸ್‌ ಸೇವನೆಯಿಂದ ಕ್ಯಾನ್ಸರ್‌ ನಿವಾರಣೆ ಆಗುತ್ತೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಅಂತಾ ಹೇಳಲಾಗುತ್ತಿದೆ. ಆದರೆ ನೋನಿ ನ್ಯೂಸ್‌ ಹೆಚ್ಚು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅಪಾಯಕಾರಿ ಅನ್ನೋ ಮಾಹಿತಿಯನ್ನು ಡಾ.ರಾಜು ಕೃಷ್ಣಮೂರ್ತಿ ಅವರು ಬಿಚ್ಚಿಟ್ಟಿದ್ದಾರೆ.

ನೋನಿ ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿಯಿದೆ. ಈ ಹಣ್ಣನ್ನು ಕತ್ತರಿಸಿ ಉಪ್ಪು ಸೇರಿಸಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಆದರೆ ನೋನಿ ಹಣ್ಣಿನಲ್ಲಿ ಪೊಟ್ಯಾಶಿಯಂ ಹಾಗೂ ವಿಟಮಿನ್‌ ಸಿ ಎತೇಚ್ಚವಾಗಿದೆ. ಜೊತೆಗೆ ಬಯೋಟಿನ್‌ ಮತ್ತು ಪೊಲೆಟ್‌ ಅನ್ನೋ ವಿಟಮಿನ್‌ ಹೆಚ್ಚಾಗಿದೆ. ಪೊಟ್ಯಾಶಿಯಂ ಅತೀ ಹೆಚ್ಚು ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ.

ಇದನ್ನೂ ಓದಿ :Heart Health Tips: ಹೃದ್ರೋಗದಿಂದ ದೂರವಿರಲು ಈ 5 ಹಾಲಿನ ಉತ್ಪನ್ನಗಳಿಂದ ದೂರವಿರಿ

ಆದರೆ ನೋನಿ ಹಣ್ಣು ಕ್ಯಾನ್ಸರ್‌ ಹಾಗೂ ಮಧುಮೇಹ ಗುಣಪಡಿಸುವ ಯಾವುದೇ ಅಂಶವಿಲ್ಲ. ಈ ಕುರಿತು ಅಮೇರಿಕಾದ ಎಫ್‌ಟಿಎ ನೋನಿ ಜ್ಯೂಸ್‌ ಅನ್ನು ಕ್ಯಾನ್ಸರ್‌ ನಿಯಂತ್ರಣ ಹಾಗೂ ಮಧುಮೇಹ ಗುಣವಾಗುತ್ತೆ ಅಂತಾ ಪ್ರಚಾರ ಮಾಡಿ ಮಾರಾಟ ಮಾಡದಂತೆ ನಿರ್ಬಂಧ ಹೇರಿದೆ. ವಿಶ್ವದಲ್ಲಿಯೇ ನೋನಿ ಹಣ್ಣನ್ನು ಇಂಡೋನೇಷ್ಯಾ ಹಾಗೂ ಆಸ್ಟ್ರೇಲಿಯಾದಲ್ಲಿ ಅತೀ ಹೆಚ್ಚಾಗಿ ಬಳಕೆ ಮಾಡುತ್ತಾರೆ.

ನಿತ್ಯವೂ ನೋನಿ ಹಣ್ಣನ್ನು ಈ ಎರಡೂ ದೇಶದ ಜನರು ಬಳಕೆ ಮಾಡುತ್ತಿದ್ದಾರೆ. ಅತೀ ಹೆಚ್ಚು ಸೇವನೆ ಮಾಡುವ ಈ ದೇಶಗಳ ಜನರಿಗೆ ಮಧುಮೇಹ ಹಾಗೂ ಕ್ಯಾನ್ಸರ್‌ ಸಮಸ್ಯೆಯೇ ಬರುತ್ತಿರಲಿಲ್ಲ. ಆದರೆ ಈ ಎರಡೂ ದೇಶಗಳ ಜನತೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಧುಮೇಹ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ ಅನ್ನೋ ಆಘಾತಕಾರಿ ಮಾಹಿತಿಯನ್ನು ಡಾ.ರಾಜು ಕೃಷ್ಣಮೂರ್ತಿ ಅವರು ಹಂಚಿಕೊಂಡಿದ್ದಾರೆ.

Noni Juice Drinking Is Dangerous For Health Does It Really Control Diabetes What does Dr Raju Krishnamurthy say
Image Credit to Original Source

ಅತೀಯಾದ ನೋನಿ ಸೇವೆ ಆರೋಗ್ಯಕ್ಕೆ ಅಪಾಯಕಾರಿ !

ಹೌದು, ನೋನಿ ಹಣ್ಣನ್ನು ಅತೀ ಹೆಚ್ಚಾಗಿ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನೋನಿ ಹಣ್ಣಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇರುವುದರಿಂದ ಕಿಡ್ನಿ, ಹೃದಯ ಹಾಗೂ ಲಿವರ್‌ನ ಆರೋಗ್ಯಕ್ಕೆ ಅಪಾಯಕಾರಿ. ಅಲ್ಲದೇ ಹೃದಯಾಘಾತ ಕೂಡ ಸಂಭವಿಸುವ ಸಾಧ್ಯತೆಯಿದೆ.

ನೋನಿ ಹಣ್ಣನ್ನು ಕತ್ತರಿಸಿ ಉಪ್ಪು ಬೆರೆಸಿ ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ. ಆದರೆ ಹಣ್ಣನ್ನು ನೇರವಾಗಿ ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಹೀಗಾಗಿ ನೋನಿ ಜ್ಯೂಸ್‌ ಮಾರಾಟ ಮಾಡುವವರು ಈ ಹಣ್ಣಿನ ರಸವನ್ನು ಬಟ್ಟಿ ಇಳಿಸಿ, ರುಚಿಗಾಗಿ ಕೆಮಿಕಲ್ ಅಂಶವನ್ನು ಬೆರೆಸಿ ಸಿರಪ್‌ ತಯಾರಿಸುತ್ತಾರೆ. ಈ ಹಣ್ಣನ್ನು ಭಟ್ಟಿ ಇಳಿಸುವುದು ಕೂಡ ಆರೋಗ್ಯದ ದೃಷ್ಟಿಯಿಂದ ಅಷ್ಟೋಂದು ಉತ್ತಮವಲ್ಲ.
ಇದನ್ನೂ ಓದಿ :ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ

ಶುದ್ದ ನೋನಿಯ ಹಣ್ಣಿನ ಜ್ಯೂಸ್‌ ತಯಾರಿಸಿ ಇಟ್ಟರೆ ಅದು ಬಹುಬೇಗನೇ ಕೆಟ್ಟು ಹೋಗುತ್ತದೆ. ಆದರೆ ಕೆಮಿಕಲ್‌ ಬಳಕೆ ಮಾಡುವುದರಿಂದ ಹೆಚ್ಚು ದಿನಗಳ ಕಾಲ ಈ ಜ್ಯೂಸ್‌ ಬಳಕೆ ಮಾಡಬಹುದಾಗಿದೆ. ನೋನಿ ಹಣ್ಣಿಂದ ಕಾಯಿಲೆಗಳು ಗುಣಮುಖವಾಗುತ್ತವೆ ಅನ್ನೋದು ಶುದ್ದ ಸುಳ್ಳು. ಕೇವಲ ಲಾಭಕ್ಕಾಗಿ ಈ ಹಣ್ಣಿನಲ್ಲಿನ ಅಂಶಗಳ ಕುರಿತು ಸುಳ್ಳು ಮಾಹಿತಿಯನ್ನು ಹಂಚಲಾಗುತ್ತಿದೆ ಎನ್ನುತ್ತಾರೆ ವೈದ್ಯರಾದ ಡಾ|ರಾಜು ಕೃಷ್ಣಮೂರ್ತಿ.

ಆರೋಗ್ಯ ಸಲಹೆಯ ಕುರಿತ ಹೆಚ್ಚಿನ ವಿಡಿಯೋಗಳಿಗಾಗಿ News Next Subscribe ಮಾಡಿ

Health Tips : Noni Juice Drinking Is Dangerous For Health: Does It Really Control Diabetes? What does Dr Raju Krishnamurthy say?

Comments are closed.