Healthy Food :ಪದೇ ಪದೇ ಆಯಾಸವಾಗುತ್ತಿದೆಯೇ ? ಹಾಗಿದ್ರೆ ಈ ಆಹಾರ ಸೇವನೆ ಮಾಡಿ

(Healthy Food)ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಇದ್ದಾಗ ತಲೆ ಸುತ್ತುವುದು, ಮೈ ಬೆವರುವುದು, ದೇಹದಲ್ಲಿ ರಕ್ತದ ಕೊರತೆ, ವಿಪರೀತ ಆಯಾಸದ ತೊಂದರೆ ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಅವರು ಹೇಳಿದ ಸಲಹೆಗಳನ್ನು ಪಾಲಿಸುವುದು ಉತ್ತಮ. ಇದರ ಜೊತೆಗೆ ಕೆಲವು ಆಹಾರ ಕ್ರಮವನ್ನು ಪಾಲನೆ ಮಾಡಿದರೆ ನಿಮ್ಮ ದೇಹದಲ್ಲಿ ಕಬ್ಬಿಣ ಅಂಶವನ್ನು ಹೆಚ್ಚಿಸಿಕೊಳ್ಳಬಹುದು. ದೇಹದಲ್ಲಿ ಕಬ್ಬಿಣ ಅಂಶ ಹೆಚ್ಚಿಸಿಕೊಳ್ಳುವುದಕ್ಕೆ ಯಾವ ಆಹಾರ ಕ್ರಮ ಪಾಲನೆ ಮಾಡಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Healthy Food)ಮಾಂಸಕ್ಕಿಂತ ಹೆಚ್ಚು ತರಕಾರಿ,ಹಣ್ಣು, ಸೊಪ್ಪು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಕಬ್ಬಿಣ ಅಂಶ ಸಿಗುತ್ತದೆ. ಮಾಂಸಕ್ಕಿಂತ ಹೆಚ್ಚು ತರಕಾರಿ, ಸೊಪ್ಪು, ಹಣ್ಣುಗಳು ಕಬ್ಬಿಣ ಅಂಶವನ್ನು ಹೊಂದಿರುತ್ತದೆ ಹಾಗಾಗಿ ತರಕಾರಿಯನ್ನು ಹೆಚ್ಚು ಸೇವನೆ ಮಾಡುವುದರ ಮೂಲಕ ನಿಮ್ಮ ದೇಹದ ಕಬ್ಬಿಣ ಅಂಶವನ್ನು ಹೆಚ್ಚಿಸಿಕೊಳ್ಳಿ. ಬಿನ್ಸ್‌, ಬ್ರೊಕೋಲಿ, ಸೌತೆಕಾಯಿ ,ಸೇಬುಹಣ್ಣು, ಮುಸುಂಬೆ, ಕಿತ್ತಲೆ, ಪಾಲಕ್‌ ಸೇರಿದಂತೆ ಇತರ ಸೊಪ್ಪು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಕಬ್ಬಿಣ ಅಂಶವನ್ನು ಹೆಚ್ಚಿಸುತ್ತದೆ.

ಡ್ರೈ ಪ್ರೂಟ್ಸ್‌ ಆದ ಗೊಡಂಬಿ, ವಾಲ್‌ ನಟ್ಸ್‌, ಒಣದ್ರಾಕ್ಷಿ, ಖರ್ಜೂರವನ್ನು ಪ್ರತಿದಿನ ಸೇವನೆ ಮಾಡುವುದರಿಂದ ನಿಮ್ಮ ದೇಹದ ಕಬ್ಬಿಣ ಅಂಶದ ಕೊರತೆಯನ್ನು ನಿವಾರಿಸುತ್ತದೆ. ಇದನ್ನು ಹಾಗೆ ತಿನ್ನುವುದರ ಮೂಲಕ ಅಥವಾ ನೀರಲ್ಲಿ ನೆನಸಿಟ್ಟು ತಿನ್ನುವುದರಿಂದ ನಿಮ್ಮ ದೇಹದ ಕಬ್ಬಿಣ ಅಂಶವನ್ನು ಹೆಚ್ಚಿಸಿಕೊಳ್ಳಬಹುದು. ಪ್ರತಿದಿನ ಡ್ರೈ ಪ್ರೂಟ್ಸ್‌ ತಿನ್ನುವುದರಿಂದ ನಿಮ್ಮ ಹಲವು ಆರೋಗ್ಯದ ಸಮಸ್ಯೆ ನಿವಾರಣೆ ಆಗುತ್ತದೆ.ಕಡಲೆಯನ್ನು ಸೇವನೆ ಮಾಡುವ ಮೂಲಕ ನಿಮ್ಮ ದೇಹದ ಕಬ್ಬಿಣ ಅಂಶವನ್ನು ಹೆಚ್ಚಿಸಿಕೊಳ್ಳಬಹುದು. ಹುರಿಗಡಲೆಯನ್ನು ಪ್ರತಿದಿನ ನೀರಲ್ಲಿ ನೆನಸಿಟ್ಟು ತಿನ್ನುವ ಮೂಲಕ ಅಥವಾ ಬೇಯಿಸಿ ತಿನ್ನುವುದರಿಂದ ನಿಮ್ಮ ದೇಹದ ಕಬ್ಬಿಣ ಅಂಶ ಹೆಚ್ಚಿಸುತ್ತದೆ.

ಇದನ್ನೂ ಓದಿ:Fruits and Vegetables Health Tips:ನೈಸರ್ಗಿಕವಾಗಿ ನಿಮ್ಮ ಅಂದ ಹೆಚ್ಚಿಸುತ್ತೆ ಹಣ್ಣು ಮತ್ತು ತರಕಾರಿ

ಇದನ್ನೂ ಓದಿ:Pistachios Health Tips:ಪ್ರತಿದಿನ ನಾಲ್ಕು ಪಿಸ್ತಾ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?

ಮೀನುಗಳು ಅತಿ ಹೆಚ್ಚು ಕಬ್ಬಿಣ ಅಂಶ ಹೊಂದಿರುವುದರಿಂದ ಇದನ್ನು ಸೇವನೆ ಮಾಡಿದರೆ ನಿಮ್ಮ ದೇಹಕ್ಕೆ ಹೆಚ್ಚು ಕಬ್ಬಿಣ ಅಂಶ ದೊರೆಯುತ್ತದೆ. ಮತ್ತು ಚಾಕಲೇಟ್‌ ತಿನ್ನುವುದರಿಂದ ಕೂಡ ನಿಮ್ಮ ದೇಹದ ಕಬ್ಬಿಣ ಅಂಶವನ್ನು ಹೆಚ್ಚಿಸಿಕೊಳ್ಳಬಹುದು. ಕೆಂಪಕ್ಕಿಯನ್ನು ಸೇವನೆ ಮಾಡುವುದರಿಂದ ಕೂಡ ನಿಮ್ಮ ದೇಹದ ಕಬ್ಬಿಣ ಅಂಶವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.

Healthy Food Tired frequently? If so, consume this food

Comments are closed.