Remedies to Heal Burnt Tongue: ಗಡಿಬಿಡಿಯಲ್ಲಿ ಬಿಸಿ ಚಹಾ, ಕಾಫಿ ಕುಡಿದು ನಾಲಿಗೆ ಸುಟ್ಟಿಕೊಂಡಿದ್ದರೆ ಈ ಉಪಾಯಗಳಿಂದ ಪರಿಹಾರ ಕಂಡುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕೆಲಸಗಳನ್ನು ನಾವು ಗಡಿಬಿಡಿಯಿಂದ ಮಾಡುತ್ತೇವೆ. ಕಾರಣ ಸಮಯದ ಕೊರತೆ. ಅದರಲ್ಲೂ ಬೆಳಗ್ಗಿನ ಸಮಯದಲ್ಲೇ ಗಡಿಬಿಡಿ ಹೆಚ್ಚು. ಹಾಗೆ ಗಡಿಬಿಡಿಯಲ್ಲಿ ಬಿಸಿ ಪದಾರ್ಥಗಳನ್ನು, ಬಿಸಿ ಬಿಸಿ ಚಹಾ, ಕಾಫಿಯನ್ನು ಕುಡಿಯಲು ಮುಂದಾಗುತ್ತೇವೆ. ಪರಿಣಾಮ ನಾಲಿಗೆಯನ್ನು ಸುಟ್ಟುಕೊಳ್ಳುತ್ತೇವೆ. ನಾಲಿಗೆ ಸುಟ್ಟಿ (Burnt Tongue) ಕೆಂಪಾಗುತ್ತದೆ. ಇದು ಬಹಳಷ್ಟು ನೋವನ್ನುಂಟುಮಾಡುತ್ತದೆ. ಆಹಾರಗಳನ್ನು ಸೇವಿಸುವಾಗ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಕೆಲವು ಸಲ ವೈದ್ಯರ ಔಷಧಿಯ ಅಗತ್ಯವೂ ಇರುತ್ತದೆ. ನಾಲಿಗೆಯ ಮೇಲಾಗುವ ಸಣ್ಣ ಸುಟ್ಟಗಾಯಗಳಿಗೆ ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು (Remedies to Heal Burnt Tongue). ಈ ಉಪಾಯಗಳು ನಾಲಿಗೆ ಉರಿಯನ್ನು ಬಹಳ ಬೇಗನೆ ಕಡಿಮೆಮಾಡುತ್ತವೆ.

ಇದನ್ನೂ ಓದಿ: Superfood for Bone Health: ಆರೋಗ್ಯಕರ ಮತ್ತು ಬಲವಾದ ಮೂಳೆಗಳಿಗಾಗಿ ಪ್ರತಿದಿನ ಸೇವಿಸಬೇಕಾದ ಸೂಪರ್‌ಫುಡ್‌ಗಳಿವು

ನಾಲಿಗೆ ಉರಿಯುವುದರಿಂದ ಪಾರಾಗಲು ಮನೆಮದ್ದುಗಳು‌ (Tongue Burnt Tips)

  1. ನಾಲಿಗೆ ಸುಟ್ಟ ಅನುಭವವಾದ ತಕ್ಷಣ ಮೊದಲು ತಂಪಾದ ನೀರಿನಿಂದ ಬಾಯಿಯನ್ನು ತೊಳೆಯಿರಿ. ಒಂದು ಸ್ವಚ್ಛ ಬಟ್ಟೆಯಲ್ಲಿ ಐಸ್‌ಕ್ಯೂಬ್‌ಗಳನ್ನು ಹಾಕಿ ನಾಲಿಗೆಯ ಸುಟ್ಟ ಭಾಗದಲ್ಲಿ ನಿಧಾನವಾಗಿ ಇಡಿ. ತಂಪು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ತಕ್ಷಣದ ಸುಲಭ ಪರಿಹಾರಗಳಲ್ಲೊಂದು.
  2. ಅಲೋವೆರಾ ಅದರ ಹಿತವಾದ ಮತ್ತು ತಂಪಾಗಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಅಲೋವೆರಾ ಜೆಲ್ ಸುಟ್ಟ ನಾಲಿಗೆಯ ಶಮನಗೊಳಿಸಲು ಸಹಾಯಮಾಡುತ್ತದೆ. ತಾಜಾ ಅಲೋವೆರಾ ಎಲೆಯಿಂದ ಜೆಲ್ ಅನ್ನು ಹೊರತೆಗೆಯಿರಿ ಮತ್ತು ಅದನ್ನು ನೇರವಾಗಿ ಸುಟ್ಟ ಜಾಗಕ್ಕೆ ಲೇಪಿಸಿ.
  1. ಜೇನುತುಪ್ಪ ನೈಸರ್ಗಿಕವಾಗಿ ಉರಿಯೂತವನ್ನು ಕಡಿಮೆಮಾಡುವ ಗುಣಲಕ್ಷಣಹೊಂದಿರುವ ಪದಾರ್ಥ. ಜೇನುತುಪ್ಪವು ನಾಲಿಗೆ ಸುಡುವಿಕೆಗೆ ಅತ್ಯುತ್ತಮ ಪರಿಹಾರವಾಗಿದೆ. ಸುಟ್ಟ ಜಾಗಕ್ಕೆ ಸ್ವಲ್ಪ ಜೇನುತುಪ್ಪವನ್ ಸವರಿ. ಅದು ಕರಗುವವರೆಗೂ ಬಾಯಿಯಲ್ಲಿಯೇ ಇರಲಿ.ಇದು ಶೀಘ್ರವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.
  2. ತೆಂಗಿನ ಎಣ್ಣೆ ಇದೊಂದು ದಿವ್ಯೌಷಧಿ ಎಂದೇ ಹೇಳಬಹುದು. ಇದರಲ್ಲಿರುವ ಮಾಯ್‌ಶ್ಚರೈಸರ್‌ ಮತ್ತು ಉರಿಯೂತ ಶಮನಗೊಳಿಸುವ ಗುಣವು ಅದ್ಭುತವಾಗಿದೆ. ನಾಲಿಗೆ ಉರಿ ನಿವಾರಿಸಲು, ಒಂದು ಚಮಚ ತಾಜಾ ತೆಂಗಿನ ಎಣ್ಣೆಯನ್ನು ಸುಟ್ಟ ಜಾಗದ ಮೇಲೆ ಲೇಪಿಸಿ. ಸ್ವಲ್ಪ ಸಮಯದವರೆಗೆ ಹಾಗೆಯೇ ಇರಿಸಿ. ನಂತರ ಅದನ್ನು ಉಗಿದು ಮತ್ತು ತಣ್ಣೀರಿನಿಂದ ನಿಮ್ಮ ಬಾಯಿಯನ್ನು ತೊಳೆಯಿರಿ. ತ್ವರಿತವಾಗಿ ಗುಣವಾಗಲು, ಈ ವಿಧಾನವನ್ನು ದಿನಕ್ಕೆ ಎರಡು ಮೂರು ಬಾರಿ ಪುನರಾವರ್ತಿಸಿ.
  3. ನಾಲಿಗೆ ಸುಟ್ಟಿದಾಗ ಉಂಟಾಗುವ ಉರಿ ಕಡಿಮೆ ಮಾಡಲು ಮತ್ತೊಂದು ಸುಲಭದ ಪರಿಹಾರವೆಂದರೆ ತಂಪು ಹಾಲು ಕುಡಿಯುವುದು. ಹಾಲು ಉರಿ ಕಡಿಮೆಮಾಡಲು ಬಹಳ ಪರಿಣಾಮಕಾರಿಯಾಗಿದೆ.

ಈ ವಿಷಯ ನೆನಪಿನಲ್ಲಿಡಿ
ನಾಲಿಗೆಯ ಮೇಲಾದ ಸಣ್ಣ ಸುಟ್ಟ ಗಾಯಗಳಿಗೆ ಈ ಮನೆಮದ್ದುಗಳು ಉಪಯುಕ್ತವಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ತೀವ್ರವಾದ ಸುಟ್ಟಗಾಯಗಳು ಅಥವಾ ಅತಿಯಾದ ಊತ, ರಕ್ತಸ್ರಾವ ಅಥವಾ ನಿರಂತರ ನೋವು, ಪರಿಹಾರಕ್ಕಾಗಿ ವೃತ್ತಿಪರ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: PunarPuli Juice Health Tips:ಪುನರ್‌ ಪುಳಿ ಜ್ಯೂಸ್ ಕುಡಿದ್ರೆ ತಲೆನೋವು ಹತ್ತಿರಕ್ಕೂ ಸುಳಿಯುವುದಿಲ್ಲ

(Home Remedies to Heal Burnt Tongue tips to get relief from burnt Tongue health news)

Comments are closed.