Home Remedy For Period Pain: ಋತುಚಕ್ರದಲ್ಲಿ ಕಾಡುವ ಹೊಟ್ಟೆನೋವಿಗೆ ಇಲ್ಲಿದೆ ಮನೆಮದ್ದು

(Home Remedy For Period Pain)ಅತ್ತಿಮರವನ್ನು ಪೂಜನೀಯ ಮನೋಭಾವದಿಂದ ಪ್ರರದಕ್ಷಿಣೆ ಹಾಕುವುದು ಅಷ್ಟೇ ಅಲ್ಲದೆ ಆರೋಗ್ಯದ ದೃಷ್ಟಿಯಿಂದ ಹಲವು ರೀತಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಇದರ ಹಣ್ಣನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ಹಾಗೂ ಇದರ ಹಣ್ಣು, ಮರದ ತೊಗಟೆಯಿಂದ ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಋತುಚಕ್ರದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವನ್ನು ಗುಣಪಡಿಸುವ ಶಕ್ತಿ ಅತ್ತಿ ಮರದ ತೊಗಟೆಗಿದೆ. ಅತ್ತಿ ಮರದ ತೊಗಟೆಯಿಂದ ಮನೆಮದ್ದು ಹೇಗೆ ತಯಾರಿಸಿಕೊಳ್ಳುವುದು ಎಂಬ ಮಾಹಿತಿಯ ಕುರಿತು ಈ ಕೆಳಗೆ ತಿಳಿಸಲಾಗಿದೆ.

(Home Remedy For Period Pain)ಬೇಕಾಗುವ ಸಾಮಾಗ್ರಿಗಳು:

  • ಅತ್ತಿ ಮರದ ತೊಗಟೆ
  • ಜೀರಿಗೆ
  • ಬೆಲ್ಲ
  • ಹಾಲು

ಮಾಡುವ ವಿಧಾನ
ಮೊದಲಿಗೆ ಅತ್ತಿ ಮರದ ತೊಗಟೆಯನ್ನು ಕೆರೆಸಿಕೊಳ್ಳಬೇಕು ನಂತರ ಅದರ ಅರ್ಧ ಭಾಗವನ್ನು ತೆಗೆದುಕೊಂಡು ಕುಟ್ಟಣಿಗೆಗೆ ಹಾಕಿ ಸ್ವಲ್ಪ ಜಜ್ಜಿಕೊಳ್ಳಬೇಕು. ಪಾತ್ರೆಯಲ್ಲಿ ನೀರು ಇಟ್ಟುಕೊಂಡು ಕುದಿ ಬರುತ್ತಿದ್ದ ಹಾಗೆ ಈ ತೊಗಟೆಯನ್ನು ಹಾಕಿ ಕುದಿಸಿಕೊಳ್ಳಬೇಕು. ಇದಕ್ಕೆ ಅರ್ಧ ಜೀರಿಗೆ, ಬೆಲ್ಲ ಒಂದು ಚಮಚ ಹಾಕಿಕೊಂಡು ಹದಿನೈದು ನಿಮಿಷ ಕುದಿಸಿಕೊಂಡು ಲೋಟದಲ್ಲಿ ಸೊಸಿಕೊಂಡು ಹಾಲು ಹಾಕಿ ಬಿಸಿ ಬಿಸಿಯಾಗಿ ಕುಡಿದರೆ ಹೊಟ್ಟೆ ನೋವು ಕಡಿಮೆ ಆಗುತ್ತದೆ.

ಅತ್ತಿ ಮರ
ಮುಂಜಾನೆಯಂದು ಅತ್ತಿಮರವನ್ನು ಪ್ರದಕ್ಷಿಣೆ ಹಾಕುವುದರ ಮೂಲಕ ಧಾರ್ಮಿಕವಾಗಿ ಈ ಮರಕ್ಕೆ ಹೆಚ್ಚಿನ ಪ್ರಶಸ್ತ್ಯವನ್ನು ನೀಡಲಾಗಿದೆ. ಧಾರ್ಮಿಕವಾಗಿ ಈ ಮರ ಸುತ್ತಿದರು ವೈಜ್ಙಾನಿಕವಾಗಿ ಈ ಮರದಿಂದ ಆರೋಗ್ಯಕ್ಕೆ ಉಪಯೋಗವಿದೆ. ಈ ಮರದಿಂದ ಬಿಡುಗಡೆ ಆಗುವ ರಾಸಾಯನಿಕ ವಿಕಿರಣ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಮೂಗಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಅತ್ತಿ ಹಣ್ಣಿಗೆ ಸಕ್ಕರೆ ಸೇರಿಸಿ ತಿನ್ನುವುದರಿಂದ ಇದನ್ನು ಕಡಿಮೆ ಮಾಡುತ್ತದೆ. ಅತ್ತಿ ಮರದ ತೊಗಟೆಯನ್ನು ಸ್ವಲ್ಪ ನೀರು ಹಾಕಿ ತೇದುಕೊಂಡು ದೇಹದಲ್ಲಿ ಊತ ಇರುವ ಜಾಗಕ್ಕೆ ಹಚ್ಚಿದರೆ ಬೇಗ ಗುಣವಾಗುತ್ತದೆ. ಅತ್ತಿಮರದ ತೊಗಟೆ ಕಷಾಯದಿಂದ ಬಾಯಿ ಮುಕ್ಕಳಿಸುವುದರಿಂದ ಪದೇ ಪದೇ ಆಗುವ ಬಾಯಿಹುಣ್ಣನ್ನು ಶಮನ ಮಾಡುತ್ತದೆ.

ಇದನ್ನೂ ಓದಿ:Pomegranate Peel Tambuli:ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಮಾಡಿ ನೋಡಿ ರುಚಿ ರುಚಿ ತಂಬುಳಿ

ಇದನ್ನೂ ಓದಿ:Coconut Milk Tea Recipe:ಎಂದಾದರೂ ಟ್ರೈ ಮಾಡಿದ್ರಾ ತೆಂಗಿನಕಾಯಿ ಹಾಲಿನ ಚಹಾ

ಇದನ್ನೂ ಓದಿ:Sugarcane Juice Benefits : ಕಬ್ಬಿನ ಹಾಲಿನ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ…

ಜೀರಿಗೆ
ಜೀರಿಗೆಯನ್ನು ನೀರಲ್ಲಿ ಕುದಿಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂದಪಟ್ಟ ಸಮಸ್ಯೆ ಹೊಟ್ಟೆ ನೋವು, ಗ್ಯಾಸ್ಟ್ರಿಕ್‌ ಈ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ನಿತ್ಯ ತಪ್ಪದೆ ಜೀರಿಗೆ ನೀರನ್ನು ಕುಡಿಯುತ್ತಾ ಬಂದರೆ ಮುಖದಲ್ಲಿರುವ ಸುಕ್ಕನ್ನು ಕಡಿಮೆ ಮಾಡುತ್ತದೆ. ಮತ್ತು ಮುಖದ ಮೇಲಿನ ಕಲೆಯನ್ನು ಹೋಗಲಾಡಿಸುತ್ತದೆ.

Home Remedy For Period Pain Here is a home remedy for stomach ache during menstruation

Comments are closed.