Maruti Suzuki Baleno vs Tata Punch : ಅತೀ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ-ಟಾಟಾದ ಅಗ್ಗದ ಕಾರುಗಳು ಯಾವುವು ಗೊತ್ತಾ ?

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕಾರು, ಬೈಕ್‌ ಹಾಗೂ ಸ್ಕೂಟರ್‌ಗಳನ್ನು ತೆಗೆದುಕೊಳ್ಳುವ ಕ್ರೇಜ್‌ ಹೆಚ್ಚಾಗಿದೆ. (Maruti Suzuki Baleno vs Tata Punch) ಅದರಂತೆ ನವೆಂಬರ್ ತಿಂಗಳಲ್ಲಿ ಯಾವ ಕಾರು ಅತಿ ಹೆಚ್ಚು ಮಾರಾಟವಾಗಿದೆ ಎನ್ನುವ ಪಟ್ಟಿ ಹೊರ ಬಿದ್ದಿದೆ. ಇದರಲ್ಲಿ 7 ಕಾರುಗಳು ಮಾರುತಿ ಸುಜುಕಿಯದ್ದೇ ಆಗಿವೆ. ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಾರುಗಳ ಮಾರಾಟದಲ್ಲಿ ದರ ಏರಿಕೆ ಕಂಡಿವೆ. ಕಳೆದ ನವೆಂಬರ್‌ ತಿಂಗಳಲ್ಲಿ ಮಾರುತಿ ಸುಜುಕಿ ಒಟ್ಟು ಮಾರಾಟದಲ್ಲಿ 14 ಪ್ರತಿಶತದಷ್ಟು ಹೆಚ್ಚಳವಾಗಿದೆ.

ಹುಂಡೈ ಮೋಟಾರ್ಸ್ ಎರಡನೇ ಸ್ಥಾನದಲ್ಲಿದ್ದು, ಟಾಟಾ ಮೋಟಾರ್ಸ್ ಮೂರನೇ ಸ್ಥಾನದಲ್ಲಿದೆ. ಟಾಪ್ 10 ಕಾರುಗಳ ಪಟ್ಟಿಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್‌ನ ತಲಾ ಒಂದು ಕಾರು ನವೆಂಬರ್‌ನಲ್ಲಿ ಅತ್ಯಧಿಕ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಮಾರುತಿ ಬಲೆನೊ :
ನವೆಂಬರ್ 2022ರಲ್ಲಿ ಮಾರುತಿ ಬಲೆನೊ ಹೆಚ್ಚು ಮಾರಾಟವಾದ ಕಾರು ಆಗಿದೆ. ಇದು ಟಾಪ್ 10 ಕಾರುಗಳ ಪಟ್ಟಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಕಾರು ಆಗಿದೆ. ಕಳೆದ ತಿಂಗಳು 20,945 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 11,014 ಯುನಿಟ್ ಬಲೆನೊ ಮಾರಾಟವಾಗಿತ್ತು. ಅಂದರೆ, ಬಲೆನೊ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 111% ಏರಿಕೆ ಕಂಡು ಬಂದಿದೆ. ಈ ಹ್ಯಾಚ್‌ಬ್ಯಾಕ್ ಬೆಲೆ 6.49 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದರಲ್ಲಿ 360 ಡಿಗ್ರಿ ಕ್ಯಾಮೆರಾ, ಹೆಡ್ ಅಪ್ ಡಿಸ್ಪ್ಲೇ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ನೀಡಲಾಗಿದೆ.

ಟಾಟಾ ಪಂಚ್ :
ಇದು ಟಾಟಾ ನೆಕ್ಸಾನ್ ನಂತರ ಅತಿ ಹೆಚ್ಚು ಮಾರಾಟವಾದ ಟಾಟಾ ಕಂಪನಿಯ ಕಾರು ಇದಾಗಿದೆ. ಟಾಪ್ 10 ಪಟ್ಟಿಯಲ್ಲಿ ಇದು 9ನೇ ಸ್ಥಾನ ಪಡೆದಿದೆ. ಮಾರುತಿಯ ಬ್ರೆಝಾಕ್ಕಿಂತ ಹೆಚ್ಚು ಖರೀದಿಯಾದ ಕಾರು ಇದಾಗಿದೆ. ಟಾಟಾ ಪಂಚ್ ನವೆಂಬರ್‌ನಲ್ಲಿ 12,131 ಯುನಿಟ್‌ ಮಾರಾಟವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಈ ಕಾರಿನ 6,110 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ ಟಾಟಾ ಪಂಚ್ ವರ್ಷದಿಂದ ವರ್ಷಕ್ಕೆ 98% ಬೆಳವಣಿಗೆ ಸಾಧಿಸಿದೆ.

ಇದನ್ನೂ ಓದಿ : Volkswagen Tiguan : ಫೋಕ್ಸ್‌ವ್ಯಾಗನ್‌ ಎಕ್ಸ್‌ಕ್ಲೂಸಿವ್‌ ಎಡಿಷನ್‌ ಟಿಗಾನ್‌ ಅನಾವರಣ

ಇದನ್ನೂ ಓದಿ : Honda Cars : ಹೊಂಡಾ ಕಾರು ಖರೀದಿಸುವವರಿಗೆ ಸಿಹಿ ಸುದ್ದಿ; 72,340 ರೂ.ಗಳ ವರಗೆ ಭಾರಿ ಡಿಸ್ಕೌಂಟ್‌ ಘೋಷಣೆ

ಇದನ್ನೂ ಓದಿ : Mercedes EQB And GLB Launch : ಭಾರತದ ಮಾರುಕಟ್ಟೆಗೆ ಬಂದ ಮರ್ಸಡೀಸ್‌ ನ ಎರಡು SUV ಕಾರುಗಳು

ಟಾಟಾ ಪಂಚ್ ಎಸ್‌ಯುವಿ ಬೆಲೆ 6 ಲಕ್ಷದಿಂದ ಪ್ರಾರಂಭವಾಗಿ 9.54 ಲಕ್ಷದವರೆಗೆ ಏರುತ್ತದೆ. ಇದು 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಏರ್ ಕಂಡೀಷನ್, ಆಟೋ ಮ್ಯಾಟಿಕ್ ಹೆಡ್‌ಲೈಟ್‌ಗಳು, ಕನೆಕ್ಟೆಡ್ ಕಾರ್ ತಂತ್ರಜ್ಞಾನ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Maruti Suzuki Baleno vs Tata Punch: Do you know which are the best selling Maruti-Tata cheap cars?

Comments are closed.