ಜೀವನದಲ್ಲಿ ಈ ಒಂದು ಅಭ್ಯಾಸ ರೂಢಿಸಿಕೊಳ್ಳಿ; ಹೃದಾಯಾಘಾತದ ಅಪಾಯ 50% ಕಡಿಮೆಯಾಗುತ್ತದೆ
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಬಹಳ ಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನವರಲ್ಲಿಯೇ ಕಾಡುವ ಹೃದಯಾಘಾತ ಪ್ರಕರಣಗಳು ಕಳವಳ ಹುಟ್ಟಿಸಿವೆ. ಇದಕ್ಕೆ ಹಲವು ಕಾರಣಗಳು ಇರಬಹುದು.
ಇಂದಿನ ಆಧುನಿಕ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಅತಿಯಾದ ಒತ್ತಡ, ಅಸಮರ್ಪಕ ನಿದ್ರೆ ಮುಂತಾದವುಗಳ ಪ್ರಮುಖ ಕಾರಣಗಳು ಎನ್ನಬಹುದು.
ಇದರ ಜೊತೆಗೆ ಯುವಕರಲ್ಲಿ ಕಾಣಿಸುವ ಬೊಜ್ಜು, ಒತ್ತಡ, ಆಲಸ್ಯ ಇವೆಲ್ಲವೂ 10–15 ವರ್ಷಗಳ ಮೊದಲೇ ಹೃದಯಾಘಾತದ ಅಪಾಯವನ್ನು ಎದುರಿಸವಂತೆ ಮಾಡಿದೆ.
ವಿಶೇಷವಾಗಿ ದಕ್ಷಿಣ ಏಷ್ಯಾದ ದೇಶಗಳಲ್ಲಿ ಈ ಪ್ರಮಾಣ ಬಹಳ ವೇಗವಾಗಿ ಹೆಚ್ಚುತ್ತಿದೆ. ಇದಕ್ಕೆ ಪರಿಹಾರ ನಮ್ಮ ಕೈಯಲ್ಲೇ ಇದೆ ಎಂದು ತಜ್ಞರು ಹೇಳುತ್ತಾರೆ.
ಅದಕ್ಕಾಗಿ ನೀವು ಪ್ರತಿದಿನ ಜಿಮ್ ಹೋಗುವ, ಔಷಧಿಗಳನ್ನು ತೆಗೆದುಕೊಳ್ಳುವ ಅಥವಾ ಗಂಟೆಗಟ್ಟಲೆ ಬೆವರಿಳಿಸುವ ಅವಶ್ಯಕತೆಯಿಲ್ಲ.
ಕೇವಲ 10 ನಿಮಿಷ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸಾಕು, ಹೃದಯಾಘಾತದ ಅಪಾಯವು ಶೇಕಡಾ 50 ರಷ್ಟು ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಆ ಒಂದು ಅಭ್ಯಾಸ ಯಾವುದು ಇಲ್ಲಿದೆ ಓದಿ.
ಇದನ್ನೂ ಓದಿ: ಬೆಳಿಗ್ಗೆ ಅಲಾರಾಂ ಜೋರಾಗಿ ಹೊಡೆದುಕೊಂಡ್ರೆ ಮಾತ್ರ ನಿಮಗೆ ಎಚ್ಚರವಾಗೋದಾ? ಹಾಗಿದ್ರೆ ಈ ಅಪಾಯಗಳು ನಿಮ್ಮನ್ನು ಕಾಡಬಹುದು ಎಚ್ಚರ!
ಯಾವ ಅಭ್ಯಾಸ ರೂಢಿಸಿಕೊಳ್ಳಬೇಕು?
ಪ್ರತಿದಿನ 10 ನಿಮಿಷಗಳ ಕಾಲ ಸರಳ ಅಥವಾ ಲಘು ವ್ಯಾಯಾಮಗಳನ್ನು ಮಾಡಿ. ಅದು ನಿಮ್ಮ ಹೃದಯಾಘಾತದ ಅಪಾಯವನ್ನು ಶೇಕಡಾ 50 ರಷ್ಟು ಕಡಿಮೆ ಮಾಡುತ್ತದೆ. ಹತ್ತು ನಿಮಿಷದಲ್ಲಿ ನೀವು ವೇಗದ ನಡಿಗೆ ಅಥವಾ ಲಘು ವ್ಯಾಯಾಮ ಮಾಡಬಹುದು.
ಇದಕ್ಕಾಗಿ ನಿಮಗೆ ಜಿಮ್ ಅಥವಾ ದುಬಾರಿ ಉಪಕರಣಗಳು ಅಗತ್ಯವಿಲ್ಲ. ನಿಮ್ಮ ಮನೆಯ ಸಮೀಪದ ಗ್ರೌಂಡ್ ಅಥವಾ ಪಾರ್ಕ್‌ನಲ್ಲಿ 10 ನಿಮಿಷಗಳ ಕಾಲ ವೇಗವಾಗಿ ನಡೆಯಿರಿ.
ನಿಮಗೆ ಹೊರಗೆ ಹೋಗಲು ಸಾಧ್ಯವಾಗದಿದ್ದರೆ ಪ್ರತಿದಿನ 10 ನಿಮಿಷಗಳ ಕಾಲ ಬಾಡಿ ವೇಟ್ ಸ್ಕೌಟ್ ಅನ್ನು 20 ಸಲ, 10 ಪುಷ್-ಅಪ್‌ಗಳ 3 ಸೆಟ್, ಪ್ರತಿದಿನ ಒಂದಿಷ್ಟು ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಅಥವಾ ಹಗುರವಾದ ಡಂಬಲ್ಸ್ ಎತ್ತುವುದು.
ಹೀಗೆ ಹಗುರವಾದ ವ್ಯಾಯಾಮಗಳನ್ನು ಕೇವಲ 10 ನಿಮಿಷ ಮಾಡಿ.
ಇದು ಹೇಗೆ ಪ್ರಯೋಜನಕಾರಿ?
ಕೇವಲ 10 ನಿಮಿಷ ವ್ಯಾಯಾಮ ಮಾಡಿದರೆ ಹೃದಯಾಘಾತದ ಅಪಾಯ 50% ಹೇಗೆ ಕಡಿಮೆಯಾಗಬಹುದು ಎಂಬ ಪ್ರಶ್ನೆ ಕಾಡಬಹುದು.
ಹೇಗೆಂದರೆ 10 ನಿಮಿಷಗಳ ಕಾಲ ತೊಡಗಿಸಿಕೊಳ್ಳುವ ದೈಹಿಕ ಚಟುವಟಿಕೆಗಳು ನಿಮ್ಮ ಹೃದಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಇದು ರಕ್ತದ ಹರಿವನ್ನು ಸುಧಾರಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಉರಿಯೂತವನ್ನು ಕಡಿಮೆ ಮಾಡುತ್ತದೆ, ಇನ್ಸುಲಿನ್ ಕೊರತೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯ ಕೊಬ್ಬಿನ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಇವು ಹೃದಯಾಘಾತದ ಅಪಾಯವನ್ನು ನೇರವಾಗಿ ಕಡಿಮೆ ಮಾಡುತ್ತದೆ.
ಯಾರು ಈ ಅಭ್ಯಾಸವನ್ನು ರೂಢಿಸಿಕೊಳ್ಳಲೇ ಬೇಕು?
35 ವರ್ಷದೊಳಗಿನ ಪುರುಷರು ಈ ಅಭ್ಯಾಸಗಳನ್ನು ತಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಲೇ ಬೇಕು. ಇದನ್ನು ದಿನಚರಿಯ ಭಾಗವಾಗಿಸಿಕೊಳ್ಳಬೇಕು.
ನೀವು ಮಾಡಬೇಕಾಗಿರುವುದು ಕೇವಲ 10 ನಿಮಿಷಗಳನ್ನು ಮಾತ್ರ. ಈ ಒಂದು ಸಣ್ಣ ಅಭ್ಯಾಸಗಳು ನಿಮ್ಮ ಜೀವವನ್ನು ಉಳಿಸುತ್ತದೆ.



