Lack Of Memory Power : ಮಕ್ಕಳ ನೆನಪಿನ ಶಕ್ತಿ ಕೊರತೆಯೇ ? ಬಳಸಿ ಈ ಬ್ರಾಹ್ಮಿ ಲೇಹ

ಶಾಲೆಗೆ ಹೋಗುವ ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು (Lack Of Memory Power) ಹೆಚ್ಚಿಸಲು ಪ್ರತಿ ಮನೆಯ ತಂದೆ – ತಾಯಿ ಹರಸಾಹಸ ಪಡುತ್ತಾರೆ. ಮಕ್ಕಳು ಓದುವುದರಲ್ಲಿ ಉತ್ತಮವಾಗಿರಬೇಕೆಂದು ಪ್ರತಿ ಮನೆಯ ತಂದೆ – ತಾಯಿ ಬಯಸುತ್ತಾರೆ. ಅಷ್ಟೇ ಅಲ್ಲದೇ ಶಾಲೆಗೆ ಹೋಗುವ ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ನೆನಪಿನ ಶಕ್ತಿ ಕಡಿಮೆಯಾಗಿರುತ್ತದೆ.

ಅದಕ್ಕೆ ಕಾರಣ ಒಂದು ಆಹಾರ ಕ್ರಮವಾದರೆ, ಇನ್ನೊಂದು ಅತಿಯಾದ ಮೊಬೈಲ್‌ ಬಳಕೆ ಆಗಿರುತ್ತದೆ. ಹಾಗೆ ಪದೇ ಪದೇ ಕಾಯಿಲೆ ಬೀಳುವುದರಿಂದ ಕೂಡ ಮಕ್ಕಳಲ್ಲಿ ನೆನಪಿನ ಶಕ್ತಿ ಕುಂಠಿತಗೊಳ್ಳುತ್ತದೆ. ಮನೆಯಲ್ಲಿಯೇ ಲೇಹವನ್ನು ತಯಾರಿಸುವ ಮೂಲಕ ಮಕ್ಕಳಲ್ಲಿ ಕಡಿಮೆಯಾದ ನೆನಪಿನ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ. ಹಾಗಾದರೆ ಆ ಲೇಹಕ್ಕೆ ಏನೆಲ್ಲಾ ಬಳಸುತ್ತಾರೆ ? ಹಾಗೆ ಹೇಗೆ ಮಾಡುತ್ತಾರೆ ? ಎನ್ನುವುದನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಬ್ರಾಹ್ಮಿ ಎಲೆ/ ಒಂದಲಗ/ ಉರುಗ
  • ಕೊತ್ತಂಬರಿ
  • ಜೀರಿಗೆ
  • ಬಾದಾಮಿ
  • ಹಸಿ ಖರ್ಜೂರ
  • ಒಣದ್ರಾಕ್ಷಿ
  • ಏಲಕ್ಕಿ
  • ಲವಂಗ

ಮಾಡುವ ವಿಧಾನ :
ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಒಂದು ಚಮಚ ಕೊತ್ತಂಬರಿ, ಒಂದು ಚಮಚ ಜೀರಿಗೆ, ಎರಡು ಏಲಕ್ಕಿ ಹಾಗೂ ಎಂಟರಿಂದ ಹತ್ತು ಲವಂಗವನ್ನು ಹಾಕಿ ನುಣ್ಣಗೆ ರುಬ್ಬಿ ಪೌಡರ್‌ ಮಾಡಿಕೊಳ್ಳಬೇಕು. ಪುಡಿ ಮಾಡಿದ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ ಇಟ್ಟುಕೊಳ್ಳಬೇಕು. ನಂತರ ಅದೇ ಮಿಕ್ಸಿ ಜಾರಿಗೆ ಏಳರಿಂದ ಎಂಟು ಬಾದಾಮಿ, ಹತ್ತರಿಂದ ಹನ್ನೆರಡು ಒಣದ್ರಾಕ್ಷಿ ಹಾಗೂ ನಾಲ್ಕರಿಂದ ಐದು ಹಸಿ ಖರ್ಜೂರ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಇದನ್ನು ಒಂದು ಬಟ್ಟಲಿಗೆ ತೆಗೆದು ಇಟ್ಟುಕೊಳ್ಳಬೇಕು. ನಂತರ ಚೆನ್ನಾಗಿ ತೊಳೆದು ಇಟ್ಟುಕೊಂಡ ಬ್ರಾಹ್ಮಿಎಲೆ ಹಾಗೂ ಸ್ಪಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡ ಬ್ರಾಹ್ಮೀ ಎಲೆಯನ್ನು ಒಂದು ಜಾರಡಿ ಅಥವಾ ಕಾಟನ್‌ ಬಟ್ಟೆಯ ಮೂಲಕ ರಸವನ್ನು ಸೊಸಿಕೊಳ್ಳಬೇಕು. ಆಮೇಲೆ ಗ್ಯಾಸ್‌ ಮೇಲೆ ಒಂದು ಪಾತ್ರೆಯನ್ನು ಇಟ್ಟು ಪಾತ್ರೆ ಬಿಸಿ ಆದಮೇಲೆ ಬ್ರಾಹ್ಮೀ ಎಲೆಯ ರಸದ ಜೊತೆಗೆ ಅರ್ಧ ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.

ಚೆನ್ನಾಗಿ ಕುದಿಸಿ ನೀರಿನಾಂಶ ಎಲ್ಲಾ ಒಣಗಿದ ಮೇಲೆ ಗ್ಯಾಸ್‌ನ್ನು ಸಣ್ಣ ಉರಿಯಲ್ಲಿ ಇಟ್ಟುಕೊಂಡು ಮೊದಲಿಗೆ ಪುಡಿ ಮಾಡಿ ಇಟ್ಟುಕೊಂಡ ಕೊತ್ತಂಬರಿ, ಜೀರಿಗೆ, ಏಲಕ್ಕಿ ಮತ್ತು ಲವಂಗ ಪುಡಿಯನ್ನು ಪಾತ್ರೆಗೆ ಹಾಕಿ ಅದರ ಜೊತೆಗೆ ಕುದಿಸಿಕೊಳ್ಳಬೇಕು. ನಂತರ ಒಣದ್ರಾಕ್ಷಿ, ಬಾದಾಮಿ ಮತ್ತು ಖರ್ಜೂರದ ಮಿಶ್ರಣವನ್ನು ಹಾಕಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಬೆಲ್ಲವನ್ನು ಹಾಕಿಕೊಂಡು ಸೌಟನ್ನು ಆಡಿಸುತ್ತಾ ಇರಬೇಕು. ಹೀಗೆ ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಶ್ರಣಗೊಂಡು ಲೇಹದ ರೂಪಕ್ಕೆ ಬರುತ್ತದೆ.

ಇದನ್ನೂ ಓದಿ : Gooseberry Benefits: ಹುಳಿ–ಸಿಹಿ ರುಚಿ ಹೊಂದಿರುವ ನೆಲ್ಲಿಕಾಯಿಯನ್ನು ಮಧುಮೇಹಿಗಳು ತಿನ್ನಬಹುದಾ…

ಇದನ್ನೂ ಓದಿ : Cucumber Juice Reduce BellyFat:ಹೊಟ್ಟೆಯ ಬೊಜ್ಜು ಕರಗಿಸಲು ಕುಡಿಯಿರಿ ಸೌತೆಕಾಯಿ ಜ್ಯೂಸ್

ಇದನ್ನೂ ಓದಿ : Hair fall solutions :ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ?ಹಾಗಿದ್ದರೆ ಈ ಮೂರು ಪದಾರ್ಥಗಳನ್ನು ಸೇವಿಸಿ

ಬಿಸಿ ಆರಿದ ಮೇಲೆ ಒಂದು ಡಬ್ಬದಲ್ಲಿ ಹಾಕಿ ಪ್ರಿಡ್ಜ್‌ನಲ್ಲಿ ಇಟ್ಟುಕೊಂಡು ಹತ್ತರಿಂದ ಹದಿನೈದು ದಿನಗಳ ಕಾಲ ಬಳಸಬಹುದಾಗಿದೆ. ಈ ಬ್ರಾಹ್ಮೀ ಲೇಹವನ್ನು ಮಕ್ಕಳಿಗೆ ಪ್ರತಿದಿನ ಬೆಳ್ಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲು ಕೊಡುವುದರಿಂದ ನೆನಪಿನ ಶಕ್ತಿ ಜಾಸ್ತಿ ಆಗುತ್ತಾ ಬರುತ್ತದೆ. ಹಾಗೆ ಮಕ್ಕಳ ದೈಹಿಕ ಆರೋಗ ಕೂಡ ಉತ್ತಮಗೊಳಿಸುತ್ತದೆ.

Lack Of Memory Power: Lack of children’s memory power? Use this brahmi leh

Comments are closed.