Natural food colour: ಮನೆಯಲ್ಲೇ ಸುಲಭವಾಗಿ ತಯಾರಿಸಿ ನೈಸರ್ಗಿಕವಾದ ಫುಡ್‌ ಕಲರ್‌

(Natural food colour) ಯಾವುದೇ ಒಂದು ಆಹಾರವನ್ನು ಒಬ್ಬ ವ್ಯಕ್ತಿ ನೋಡಿದಾಗ ಬಹಳ ಆಕರ್ಷಿತನಾಗುತ್ತಾನೆ, ನಂತರ ತಿನ್ನ;ಲು ಬಯಸುತ್ತಾನೆ. ಈ ಆಕರ್ಷಣೆಗೆ ಮುಖ್ಯ ಕಾರಣ ಆಹಾರದ ಬಣ್ಣ ಹಾಗೂ ರುಚಿ. ಹೌದು.. ಜನರು ತಮ್ಮ ಆಹಾರವನ್ನು ಹೆಚ್ಚು ಆಕರ್ಷಿತವಾಗಿಸಲು ಫುಡ್‌ ಕಲರ್‌ ಅನ್ನು ಬಳಸುತ್ತಾರೆ. ಆದರೆ ಈ ಅಂಗಡಿಗಳಲ್ಲಿ ಸಿಗುವ ಫುಡ್‌ ಕಲರ್‌ ಗಳು ಕೆಮಿಕಲ್‌ ಮುಕ್ತವಾಗಿರುವುದಿಲ್ಲ. ಬದಲಾಗಿ ಇದರಲ್ಲಿನ ಕೆಮಿಕಲ್‌ ಗಳು ಮಕ್ಕಳಿಂದ ಹಿಡಿದು ವಯಸ್ಕರ ವರಗೂ ಹಾನಿ ಮಾಡುತ್ತದೆ. ನಿಗದಿತ ಪ್ರಮಾಣಕ್ಕಿಂದ ಹೆಚ್ಚಿನ ಫುಡ್‌ ಕಲರ್‌ ಬಳಸಿದರೆ ಅದು ನಿಮ್ಮ ಚರ್ಮ, ಕೂದಲು, ಕಣ್ಣು, ಹೃದಯ, ಹೊಟ್ಟೆ ಹೀಗೆ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ಅಂಗಡಿ ಮುಂಗಟ್ಟುಗಳಲ್ಲಿ ಸಿಗುವ ಫುಡ್‌ ಕಲರ್‌ ಗಳು ಆರೋಗ್ಯಕ್ಕೆ ಕೆಟ್ಟದ್ದು. ಇದರ ಬದಲಾಗಿ ನೈಸರ್ಗಿಕವಾಗಿ ಮನೆಯಲ್ಲೇ ಫುಡ್‌ ಕಲರ್‌ ಅನ್ನು ತಯಾರಿಸಬಹುದು. ನೈಸರ್ಗಿಕವಾಗಿ ತಯಾರಿಸಿದ ಫುಡ್‌ ಕಲರ್‌ ಗಳು ಆರೋಗ್ಯದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಹಾಗಿದ್ದರೆ ನೈಸರ್ಗಿಕವಾಗಿ ಮನಯೆಲ್ಲೇ ನೈಸರ್ಗಿಕವಾಗಿ ಫುಡ್‌ ಕಲರ್‌ ಅನ್ನು ಬಳಸುವುದು ಹೇಗೆ ಎನ್ನುವುದನ್ನು ತಿಳಿಯೋಣ.

ಮನೆಯಲ್ಲೇ ಫುಡ್‌ ಕಲರ್‌ ಮಾಡಲು ಬೇಕಾದ ಸಾಮಾಗ್ರಿಗಳು:
ಬೀಟ್ರೂಟ್‌ ಅಥವಾ ಪಾಲಕ್‌

ಫುಡ್‌ ಕಲರ್‌ ಮಾಡುವ ವಿಧಾನ:
ಮೊದಲು ಮೂರರಿಂದ ನಾಲ್ಕು ಬೀಟ್ರೂಟ್‌ ಅನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಚೆನ್ನಾಗಿ ತೊಳೆದುಕೊಳ್ಳಿ. ನಂತರ ತೆಳ್ಳಗೆ ಬೀಟ್ರೂಟ್‌ ಅನ್ನು ಕತ್ತರಿಸಿಕೊಂಡು ಒಂದು ಬಟ್ಟಲಲ್ಲಿ ಹಾಕಿ ಸೂರ್ಯನ ಬಿಸಿಲಿನಲ್ಲಿಡಿ. ಎರಡರಿಂದ ಮೂರು ದಿನಗಳ ಕಾಲ ಬೀಟ್ರೂಟ್‌ ಅನ್ನು ಒಣಗಲು ಬಿಡಿ. ಬೀಟ್ರೂಟ್‌ ಸಂಪೂರ್ಣವಾಗಿ ಒಣಗಿದ ನಂತರ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಪುಡಿಮಾಡಿಕೊಂಡಿರುವ ಹುಡಿಯನ್ನು ಜರಡಿ ಹಿಡಿಯಿರಿ. ಇದೀಗ ನೈಸರ್ಗಿಕವಾದ ಫುಡ್‌ ಕಲರ್‌ ಮನೆಯಲ್ಲೇ ಸಿದ್ದವಾಗಿದೆ. ಇದನ್ನು ಒಂದು ಬಾಟಲಿಗೆ ಹಾಕಿ ಶೇಖರಿಸಿ ಇಡಿ.

ಪಾಲಕ್‌ ಫುಡ್‌ ಕಲರ್‌ ಅನ್ನು ಕೂಡ ಇದೇ ರೀತಿಯಾಗಿ ತಯಾರಿಸಿಕೊಳ್ಳಬಹುದು. ಪಾಲಕ್‌ ಸೊಪ್ಪನ್ನು ಚೆನ್ನಾಗಿ ತೊಳೆದು ನಂತರ ಇದನ್ನು ಮೂರರಿಂದ ನಾಲ್ಕು ದಿನಗಳ ವರೆಗೆ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ಇಡಿ. ಮೂರು ದಿನದ ನಂತರ ಒಣಗಿದ ಪಾಲಕ್‌ ಅನ್ನು ಮಿಕ್ಸಿ ಜಾರಿನಲ್ಲಿ ನುಣ್ಣಗೆ ರುಬ್ಬಿಕೊಂಡು ಸೋಸಿಕೊಂಡು ನಂತರ ತಯಾರಿಸಿದ ಫುಡ್‌ ಕಲರ್‌ ಅನ್ನು ಒಂದು ಬಾಟಲಿಯಲ್ಲಿ ಶೇಖರಿಸಿಡಿ.

ನೈಸರ್ಗಿಕವಾದ ಫುಡ್‌ ಕಲರ್‌ ಅನ್ನು ಒಂದು ವರ್ಷಗಳವರೆಗೂ ಬಳಸಬಹುದು. ಇದಕ್ಕೆ ನೀರು ತಾಗಿಸಬಾರದು ಏಕೆಂದರೆ ನೀರು ತಾಗಿಸಿದರೆ ಇದು ಹಾಳಾಗುತ್ತದೆ. ಇದನ್ನು ರಾಸಾಯನಿಕ ಫುಡ್‌ ಕಲರ್‌ ಅಂತೆಯೇ ಅಡುಗೆಗಳಲ್ಲಿ ಆರಾಮವಾಗಿ ಬಳಸಬಹುದು. ಇದು ರಾಸಾಯನಿಕ ಫುಡ್‌ ಕಲರ್‌ ನಂತೆ ಬಣ್ಣವನ್ನು ಹೊಂದಿರುವುದಿಲ್ಲ. ಶುದ್ದ ಕೆಂಪು ಬಣ್ಣದಲ್ಲಿ ಕೂಡ ಇದು ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಇದು ಕಂದು ಬಣ್ಣದಲ್ಲಿ ಕಾಣುತ್ತದೆ. ಆದರೆ ನೈಸರ್ಗಿಕವಾದ ಫುಡ್‌ ಕಲರ್‌ ವಿಶೇಷವಾದ ವೈಶಿಷ್ಟ್ಯವನ್ನು ಹೊಂದಿವೆ.

ಇದನ್ನೂ ಓದಿ : Holi 2023: ಹೋಳಿ ಬಣ್ಣಗಳಿಂದ ನಿಮ್ಮ ಚರ್ಮ, ಕೂದಲಿಗೆ ಹಾನಿಯಾಗಿದ್ಯಾ ? ಹಾಗಾದ್ರೆ ಈ ಟಿಫ್ಸ್‌ ಫಾಲೋ ಮಾಡಿ

Natural food colour: Natural food color easily prepared at home

Comments are closed.