Okra Kebab Recipe : ಊಟಕ್ಕೆ ಬೆಂಡೆಕಾಯಿ ಸಾರು ಪಲ್ಯ ಅಂದರೆ ಬೇಸರವೇ ಹಾಗಿದ್ದರೆ ಟ್ರೈ ಮಾಡಿ ಬೆಂಡೆಕಾಯಿ ಕಬಾಬ್‌

ಬೆಂಡೆಕಾಯಿ ಎಂದರೆ ಹೆಚ್ಚಿನವರು ಇಷ್ಟಪಡುವುದಿಲ್ಲ. ಬೆಂಡೆಕಾಯಿಯನ್ನು ಬಳಸಿ ಅನೇಕ ಖಾದ್ಯಗಳನ್ನು ಮಾಡಬಹುದು. ಅದರಲ್ಲಿ ಬೆಂಡೆಕಾಯಿ ಪಲ್ಯ, ಸಾರು ಸೇರಿದಂತೆ ಕಬಾಬ್‌ನ್ನು (Okra Kebab Recipe) ಕೂಡ ಮಾಡಬಹುದು. ಬೆಂಡೆಕಾಯಿಯಿಂದ ಮಾಡಿದ ಸಾರು ಮತ್ತು ಪಲ್ಯವನ್ನು ಇಷ್ಟಪಡದವರು ಅದರಿಂದ ಮಾಡುವ ಕಬಾಬ್‌ನ್ನು ಒಮ್ಮೆ ಟ್ರೈ ಮಾಡಿ ನೋಡಿ. ಹಾಗಾದರೆ ಬೆಂಡೆಕಾಯಿಯನ್ನು ಬಳಸಿ ಕಬಾಬ್‌ ಮಾಡುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಸಾಮಗ್ರಿ :

  • ಬೆಂಡೆಕಾಯಿ
  • ಕಡಲೆಹಿಟ್ಟು
  • ಅಕ್ಕಿಹಿಟ್ಟು
  • ಕಾನ್ಫ್ಲೋರ್‌
  • ಖಾರದ ಪುಡಿ
  • ಧನ್ಯಪುಡಿ
  • ಗರಂ ಮಸಾಲೆ
  • ಚಾಟ್‌ ಮಸಾಲೆ
  • ಜೀರಿಗೆ ಪುಡಿ
  • ಅರಶಿನ ಪುಡಿ
  • ಉಪ್ಪು

ಮಾಡುವ ವಿಧಾನ :
ಮೊದಲಿಗೆ ಎಳೆತ ಇರುವ ಕಾಲು ಕೆಜಿ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ರೌಂಡ್‌ ಶೆಪ್‌ ಅಲ್ಲಿ ಸಣ್ಣಕ್ಕೆ ಕಟ್‌ ಮಾಡಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ಆರು ಚಮಚ ಕಡಲೆಹಿಟ್ಟು, ಮೂರು ಚಮಚ ಅಕ್ಕಿಹಿಟ್ಟು, ಎರಡು ಚಮಚ ಕಾನ್ಫ್ಲೋರ್‌, ಮೂರು ಚಮಚ ಖಾರದ ಪುಡಿ, ಒಂದು ಚಮಚ ಧನ್ಯ ಪುಡಿ, ಅರ್ಧ ಚಮಚ ಗರಂ ಮಸಾಲೆ, ಚಾಟ್‌ ಮಸಾಲೆ, ಜೀರಿಗೆ ಪುಡಿ, ಕಾಲು ಚಮಚ ಅರಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಹಿಟ್ಟನ್ನು ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಕಟ್‌ ಮಾಡಿ ಇಟ್ಟುಕೊಂಡ ಬೆಂಡೆಕಾಯಿಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು.

ಅದಕ್ಕೆ ಅರ್ಧ ಲಿಂಬೆಹಣ್ಣಿನ ರಸ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ನಂತರ ಬೇಕಾದರೆ ಮಾತ್ರ ನೀರನ್ನು ಬೆರೆಸಿಕೊಳ್ಳಬೇಕು. ಆಮೇಲೆ ಗ್ಯಾಸ್‌ ಮೇಲೆ ಒಂದು ಬಾಣಲೆಯನ್ನು ಇಟ್ಟು ಬೆಂಡೆಕಾಯಿಯನ್ನು ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಬೇಕು. ನಂತರ ಬಾಣಲೆಯಲ್ಲಿರುವ ಎಣ್ಣೆ ಬಿಸಿ ಆದ ಮೇಲೆ ರೆಡಿ ಮಾಡಿ ಇಟ್ಟುಕೊಂಡ ಬೆಂಡೆಕಾಯಿಯನ್ನು ಎಣ್ಣೆಗೆ ಹಾಕಿ ಗರಿ ಗರಿ ಆಗುವರೆಗೂ ಕರಿಯಬೇಕು. ಹೀಗೆ ಕರಿದ ರುಚಿ ರುಚಿಯಾದ ಬೆಂಡೆಕಾಯಿ ಕಬಾಬ್‌ ರೆಡಿಯಾಗುತ್ತದೆ. ಈ ಬೆಂಡೆಕಾಯಿ ಕಬಾಬ್‌ ಅನ್ನ ರಸಂ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.

ಇದನ್ನೂ ಓದಿ : Cinnamon Health Tips:ಆರೋಗ್ಯ ಸಮಸ್ಯೆಗಳಿಗೆ ದಾಲ್ಚಿನ್ನಿ ರಾಮಬಾಣ

ಇದನ್ನೂ ಓದಿ : Beware Pizza Buyers:ಪಿಜ್ಝಾ ತಿನ್ನುವವರೇ ಹುಷಾರ್ ! ನಿಮ್ಮನ್ನು ಕಾಡಬಹುದು ಈ ಗಂಭೀರ ಸಮಸ್ಯೆ

ಇದನ್ನೂ ಓದಿ : ಚಿಕನ್ ಟಿಕ್ಕಾ ಮಸಾಲಾ ಸಂಶೋಧಕ ಅಹ್ಮದ್ ಅಸ್ಲಾಂ ಅಲಿ ನಿಧನ : ಅತ್ಯಂತ ಜನಪ್ರಿಯ ಭಕ್ಷ್ಯವನ್ನು ಕಂಡುಹಿಡಿದಿದ್ದು ಹೇಗೆ ?

ಬೆಂಡೆಕಾಯಿ ನಮ್ಮ ಕರುಳಿನಲ್ಲಿ ಇರುವ ಆಹಾರವನ್ನು ತಕ್ಷಣ ಜೀರ್ಣವಾಗಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಇನ್ನೂ ಬೆಂಡೆಕಾಯಿ ಕಷಾಯ ಸೇವನೆ ಲೋಳ್ಪರೆಯ ಉರಿಯೂತ, ಜ್ವರ, ತಲೆನೋವು, ಸಂಧಿವಾತ, ಅತಿಸಾರವನ್ನು ಶಮನಗೊಳಿಸುತ್ತದೆ. ಅಷ್ಟೇ ಅಲ್ಲದೇ ಮಧುಮೇಹದಿಂದ ಬಳಲುತ್ತಿದ್ದವರು ಬೆಂಡೆಕಾಯಿಯನ್ನು ತೊಳೆದು ಕಟ್‌ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ತರಕಾರಿಗಳನ್ನು ಹೆಚ್ಚು ಹೆಚ್ಚು ಊಟದಲ್ಲಿ ಬಳಸುವುದರಿಂದ ನಮ್ಮ ದೇಹವು ಆರೋಗ್ಯದಿಂದ ಕೂಡಿರುತ್ತದೆ. ಹಾಗೇ ತರಕಾರಿಯಿಂದ ಮಾಡಿದ ಖಾದ್ಯಗಳನ್ನು ಸೇವಿಸುವುದರಿಂದ ಜೀರ್ಣಾಂಗ ಕ್ರಿಯೆಯಲ್ಲಿ ಸಮಸ್ಯೆ ಇರುವವರು ಅದರರಿಂದ ಮುಕ್ತಿಯನ್ನು ಪಡೆಯಬಹುದು.

Okra Kebab Recipe: If you are bored with okra broth for lunch, try Okra Kebab.

Comments are closed.