Human skulls in courier: ಕೊರಿಯರ್‌ ಬಾಕ್ಸ್‌ ನಲ್ಲಿ ಪತ್ತೆಯಾಯ್ತು ಮಾನವನ ನಾಲ್ಕು ತಲೆಬುರುಡೆ

ಮೆಕ್ಸಿಕೋ: (Human skulls in courier) ವಿಮಾನ ನಿಲ್ದಾಣವೊಂದರಲ್ಲಿ ಸಿಕ್ಕಿದ್ದ ಕೊರಿಯರ್‌ ಬಾಕ್ಸ್‌ ನಲ್ಲಿ ನಾಲ್ಕು ಮಾನವನ ತಲೆಬುರುಡೆಗಳು ಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ. ಮೆಕ್ಸಿಕೋದ ಕ್ವೆರೆಟಾರೊ ಇಂಟರ್‌ ಕಾಂಟಿನೆಂಟಲ್‌ ಏರ್ಪೋರ್ಟ್‌ ನಲ್ಲಿ ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯೂಮಿನಿಯಂ ಫಾಯಿಲ್‌ ನಲ್ಲಿ ಸುತ್ತಿಟ್ಟಿದ್ದ ನಾಲ್ಕು ಮಾನವನ ತಲೆಬುರುಡೆಗಳು ಪತ್ತೆಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಹೌದು.. ಮೆಕ್ಸಿಕೋದ ಕ್ವೆರೆಟಾರೊ ಇಂಟರ್‌ ಕಾಂಟಿನೆಂಟಲ್‌ ಏರ್ಪೋರ್ಟ್‌ ನಲ್ಲಿ ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯೂಮಿನಿಯಂ ಫಾಯಿಲ್‌ ನಲ್ಲಿ ಸುತ್ತಿಟ್ಟಿದ್ದ ನಾಲ್ಕು ಮಾನವನ ತಲೆಬುರುಡೆಗಳು (Human skulls in courier) ಪತ್ತೆಯಾಗಿದ್ದು, ಮೆಕ್ಸಿಕೋ ದೇಶದ ಅತ್ಯಂತ ಹಿಂಸ್ಮಾತ್ಮಕ ಭಾಗಗಳಲ್ಲಿ ಒಂದಾದ ಪಶ್ಚಿಮ ಕರಾವಳಿ ರಾಜ್ಯವಾದ ಮೈಕೋವಾಕನ್‌ ನಿಂದ ದಕ್ಷಿಣ ಕೆರೊಲಿನಾದ ಮ್ಯಾನಿಂಗ್‌ ನಲ್ಲಿನ ವಿಳಾಸಕ್ಕೆ ಈ ಕೊರಿಯರ್‌ ಅನ್ನು ಕಳುಹಿಸುವ ಉದ್ದೇಶ ಇತ್ತು ಎನ್ನಲಾಗಿದೆ.

ವಿಮಾನ ನಿಲ್ದಾಣಗಳಲ್ಲಿ ತನಿಖೆಯನ್ನು ನಡೆಸುತ್ತಿರುವಾಗ ರಟ್ಟಿನ ಬಾಕ್ಸ್‌ನಲ್ಲಿ ತಲೆಬುರುಡೆಗಳು ಇರುವುದು ಪತ್ತೆಯಾಗಿದೆ. ಆದರೆ ಇದು ಯಾರ ತಲೆಬುರುಡೆ, ಇದನ್ನು ಯಾವ ಕಾರಣಕ್ಕೆ ಕೊರಿಯರ್‌ ಮೂಲಕ ಇನ್ನೊಂದು ಭಾಗಕ್ಕೆ ಕಳುಹಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ. ವಿಮಾನ ನಿಲ್ದಾಣದಲ್ಲಿ ತಲೆಬುರುಡೆಗಳು ಪತ್ತೆಯಾದ ಹಿನ್ನಲೆಯಲ್ಲಿ ಅಧಿಕಾರಿಗಳು ತೀವ್ರ ತಪಾಸಣೆಯನ್ನು ನಡೆಸುತ್ತಿದ್ದಾರೆ.

ಅಲ್ಲದೇ ಮಾನವ ಅವಶೇಷಗಳ ವರ್ಗಾವಣೆಗೆ ಸಮರ್ಥ ಆರೋಗ್ಯ ಪ್ರಾಧಿಕಾರದ ವಿಶೇಷ ಅನುಮತಿಯನ್ನು ಅಗತ್ಯವಾಗಿ ಪಡೆದಿರಬೇಕಾಗಿದೆ. ಆದರೆ ಈ ವಿಷಯದಲ್ಲಿ ಅನುಮತಿಯನ್ನು ಪಡೆಯಲಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Karavara bus accident: ಶಾಪಿಂಗ್‌ ಗೆ ತೆರಳುತ್ತಿದ್ದ ವೇಳೆ ಬಸ್‌ ಢಿಕ್ಕಿ: ತಂದೆಯ ಕಣ್ಣೆದುರೇ ಕೊನೆಯುಸಿರೆಳೆದ ಮಗಳು

ಇದನ್ನೂ ಓದಿ : Dehli crime news: 2 ನೇ ತರಗತಿ ವಿದ್ಯಾರ್ಥಿಯ ಖಾಸಗಿ ಭಾಗಕ್ಕೆ ನೈಲಾನ್‌ ದಾರ ಕಟ್ಟಿ ವಿಕೃತಿ ಮೆರೆದ ಸಹ ವಿದ್ಯಾರ್ಥಿಗಳು

ಇದನ್ನೂ ಓದಿ : Suicide at Live streaming: ಮದುವೆಗೆ ನಿರಾಕರಣೆ: ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

Four human skulls wrapped in aluminum foil were found inside a cardboard box at Mexico’s Queretaro Intercontinental Airport, local officials said.

Comments are closed.