Omicron BF.7: ಕೊರೊನಾ ಹೊಸ ರೂಪಾಂತರದ ಬಗ್ಗೆ ಭಯ ಬೇಡ ಈ ನಿಯಮ ಪಾಲಿಸಿ ಸಾಕು

(Omicron BF.7)ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ಅನೇಕ ದೇಶಗಳಲ್ಲಿ ಆತಂಕ ಸೃಷ್ಟಿಸಿದಲ್ಲದೆ ಸಾವು ನೋವುಗಳಾಗಿವೆ . ಇದೀಗ ಮತ್ತೆ ಕೊರೊನದ ಹೊಸ ತಳಿ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸುತ್ತಿದೆ. ಭಾರತಕ್ಕೂ ಕೂಡ ಕೊರೊನಾದ ಹೊಸ ಅಲೆ ಬಿಸಿ ತಟ್ಟಿದೆ. ಹೊಸ ರೂಪದ ಕೊರೊನದ ಬಗ್ಗೆ ಆತಂಕ ಬೇಡ ಕೆಲವು ನಿಯಮಗಳನ್ನು ಪಾಲಿಸಿದರೆ ಓಮಿಕ್ರಾನ್ ಬಿಎಫ್.7 (Omicron BF.7 ) ನಿಮ್ಮನ್ನು ಕಾಡುವುದಿಲ್ಲ. ಕೊರೊನದಿಂದ ದೂರವಿರಲು ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಕೆಲವು ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳುವುದರಿಂದ ಕೊರೊನಾದಿಂದ ತಪ್ಪಿಸಿಕೊಳ್ಳಬಹುದು. ಕೊರೆನಾ ಬರದಂತೆ ಎನೆನೂ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎನ್ನುವ ಮಾಹಿತಿಯ ಕುರಿತು ತಿಳಿದುಕೊಳ್ಳೋಣ.

(Omicron BF.7)ಅಗತ್ಯ ಔಷಧೀಗಳನ್ನು ತೆಗೆದುಕೊಳ್ಳಿ
ಹೊಸ ರೂಪಾಂತರ ಕೊರೊನ ತಳಿ ಓಮಿಕ್ರಾನ್ ಬಿಎಫ್.7 (Omicron BF.7 ) ಆತಂಕ ಬೇಡ ಇದಕ್ಕಾಗಿ ಆಸ್ಪತ್ರೇಯಲ್ಲಿ ಲಭ್ಯವಿರುವ ಔಷಧೀಯನ್ನು ತೆಗೆದುಕೊಳ್ಳಿ. ಇದರ ಔಷಧೀಯ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಇದರ ಬಗ್ಗೆ ಆತಂಕ ಬೇಡ ಅಗತ್ಯ ಔಷಧೀಗಳನ್ನು ತೆಗೆದುಕೊಳ್ಳಿ.

ಸುಳ್ಳು ಮಾಹಿತಿಯನ್ನು ನಂಬಬೇಡಿ

ಕಳೆದ ವರ್ಷ ಕೊರೊನಾದ ಬಗ್ಗೆ ಇದ್ದ ಸುಳ್ಳು ಮಾಹಿತಿ ಆತಂಕವನ್ನು ಸೃಷ್ಟಿ ಮಾಡಿತ್ತು ಈ ಬಾರಿಯೂ ಕೂಡ ಇದರ ಬಗ್ಗೆ ಹರಡುವ ಸುಳ್ಳು ಮಾಹಿತಿಯನ್ನು ನಂಬಬೇಡಿ. ಕೊರೊನಾದ ಹೊಸ ರೂಪಾಂತರವಾದ ಓಮಿಕ್ರಾನ್ ಬಿಎಫ್.7 (Omicron BF.7 ) ತಗುಲದಂತೆ ನಿಯಮಗಳನ್ನು ಪಾಲನೆ ಮಾಡಿ.

ನಿಯಮಗಳನ್ನು ಪಾಲನೆ ಮಾಡಿ
ಪ್ರತಿದಿನ ಹೊರಗೆ ಹೋಗುವ ಮುನ್ನ ಮಾಸ್ಕ್‌ ಧರಿಸಿ, ಕೈಗೆ ಸ್ಯಾನಿಟೈಸರ್‌ ಹಚ್ಚಿಕೊಳ್ಳಿ. ಆದಷ್ಟು ಜನರಿಂದ ಅಂತರವನ್ನು ಕಾಯ್ದುಕೊಳ್ಳಿ , ಮನೆಯಿಂದ ಹೊರಗಡೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿದರೆ ಉತ್ತಮ. ಜ್ವರ ಬಂದಾಗ ಆದಷ್ಟು ಜನಸಂದಣಿ ಇರುವ ಪ್ರದೇಶದಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ತರಕಾರಿ ಮಾರುಕಟ್ಟೆಯಂತಹ ಸ್ಥಳಗಳಿಗೆ ಹೋದಾಗ ಆದಷ್ಟು ಅಂತರ ಕಾಯ್ದುಕೊಳ್ಳು ಪ್ರಯತ್ನಿಸಿ. ಪಾರ್ಟಿ ಅಥವಾ ಯಾವುದೇ ಅನಗತ್ಯ ಕಾರ್ಯಕ್ರಮಗಳಿದ್ದರೆ ಸದ್ಯಕ್ಕೆ ಅಲ್ಲಿಗೆ ಹೋಗಬೇಡಿ.

ಇದನ್ನೂ ಓದಿ:Nasal vaccine: ಮೂಗಿನ ಮೂಲಕ ಕೊರೊನಾ ಲಸಿಕೆ : ಗ್ರೀನ್ ಸಿಗ್ನಲ್‌ ಕೊಟ್ಟ ಕೇಂದ್ರ ಆರೋಗ್ಯ ಇಲಾಖೆ

ಇದನ್ನೂ ಓದಿ:Benefits Of Sunlight:ದೇಹದಲ್ಲಿ ವಿಟಮಿನ್‌ ಡಿ ಹೆಚ್ಚಿಸುವ ಸೂರ್ಯನ ಕಿರಣದಿಂದ ಹಲವು ಪ್ರಯೋಜನ

ಇದನ್ನೂ ಓದಿ:Benefits Of Sunlight:ದೇಹದಲ್ಲಿ ವಿಟಮಿನ್‌ ಡಿ ಹೆಚ್ಚಿಸುವ ಸೂರ್ಯನ ಕಿರಣದಿಂದ ಹಲವು ಪ್ರಯೋಜನ

ಕೊರೊನದ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ
ಶೀತ, ಕೆಮ್ಮು,ಜ್ವರ, ವೀಪರತವಾದ ತಲೆನೋವು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ನಿಮ್ಮ ಪ್ಯಾಮಿಲಿ ಡಾಕ್ಟರ್‌ ಇದ್ದರೆ ಅವರ ಸಲಹೆಗಳನ್ನು ತೆಗೆದುಕೊಳ್ಳಿ. ಆತಂಕ ಪಡೆದೆ ಅವರು ತಿಳಿಸಿದ ಸಲಹೆಗಳನ್ನು ಪಾಲನೆ ಮಾಡಿ.

Omicron BF.7 Don’t be afraid of the new variant of Corona, just follow this rule

Comments are closed.