Omicron BF.7: ನೀವು ಖರೀದಿಸುವ ಮಾಸ್ಕ್‌ ಎಷ್ಟು ಸೇಪ್ ?‌

ಹಿಂದಿನ ಬಾರಿ ಕೋವಿಡ್‌ ಅತಿಯಾಗುತ್ತಾ ಇದ್ದಂತೆ ಮಾಸ್ಕ್‌ ಧರಿಸುವುದು ಖಡ್ಡಾಯ ಮಾಡಲಾಗಿತ್ತು. ಈ ಬಾರಿಯೂ ಕೂಡ ಕೋವಿಡ್‌ ನ ಹೊಸ ರೂಪಾಂತರ ತಳಿ (Omicron BF.7) ಮತ್ತೆ ಮಾಸ್ಕ್‌ ಧರಿಸುವಂತೆ ಮಾಡುತ್ತಿದೆ. ಎಲ್ಲರೂ ಕೂಡ ಮುನ್ನೆಚರಿಕೆ ಕ್ರಮವಾಗಿ ಮಾಸ್ಕ್‌ ಧರಿಸುತ್ತಿದ್ದಾರೆ. ಇನ್ನು ಕೆಲವರು ಯಾವ ಮಾಸ್ಕ್‌ ಖರೀದಿಸಿದರೆ ಸೇಪ್‌ ಎನ್ನುವ ಗೊಂದಲದಲ್ಲಿ ಇರುತ್ತಾರೆ. ಅಂಗಡಿಯಲ್ಲಿ ನೀವು ಖರೀದಿ ಮಾಡುವ ಮಾಸ್ಕ್‌ ಸುರಕ್ಷಿತವೋ ಇಲ್ಲವೋ ಎಂದು ನೋಡಿಕೊಂಡು ಖರೀದಿ ಮಾಡಿ.

(Omicron BF.7 )ಆದಷ್ಟು ಬಟ್ಟೆಯ ಮಾಸ್ಕ್‌ ಖರೀದಿಯನ್ನು ಕಡಿಮೆ ಮಾಡಿ n95 ಮತ್ತು ಬಿಸಾಡುವಂತಹ ಮಾಸ್ಕ್‌ ಧರಿಸಿ.ಇದರಲ್ಲಿ ಐ ಎಸ್‌ ಐ ಮಾರ್ಕ್‌ ಇರುವಂತಹ ಮಾಸ್ಕ್‌ ನೋಡಿ ಖರೀದಿ ಮಾಡಿ ಇಂತಹ ಮಾಸ್ಕ್‌ ಹೆಚ್ಚು ಸುರಕ್ಷಿತವಾಗಿರುವುದರಿಂದ ಇದನ್ನು ಖರೀದಿ ಮಾಡಿ ಧರಿಸಿದರೆ ಉತ್ತಮ. ಮಾಸ್ಕ್‌ ಧರಿಸಲು ನಿಮಗೆ ಆರಾಮದಾಯಕವಾಗಿದ್ದು, ಉಸಿರಾಡುವುದಕ್ಕೆ ಆಗುತ್ತದಾ ಎಂದು ನೋಡಿಕೊಂಡು ಮಾಸ್ಕ್‌ ಖರೀದಿ ಮಾಡಿ ಧರಿಸಿ.

ಮಾಸ್ಕ್‌ ಧರಿಸುವುದರಲ್ಲಿ ಎಚ್ಚರವಹಿಸುವುದು ಮಾತ್ರವಷ್ಟೇ ಅಲ್ಲದೆ ಅದನ್ನು ಧರಿಸುವ ಕ್ರಮದಲ್ಲಿ ಸ್ವಚ್ಚತೆಯನ್ನು ಕಾಪಾಡುವುದು ಬಹಳ ಮುಖ್ಯ. ಬಟ್ಟೆ ಮಾಸ್ಕ್‌ ಧರಿಸುವುದನ್ನು ಆದಷ್ಟು ಕಡಿಮೆ ಮಾಡಿ ಒಂದುವೇಳೆ ನೀವು ಬಟ್ಟೆ ಮಾಸ್ಕ್‌ ಧರಿಸುತ್ತಿದ್ದರೆ ಪ್ರತಿದಿನ ಅದನ್ನು ತೊಳೆದು ಬಳಕೆ ಮಾಡಿ. ನೀವು n95 ಮತ್ತು ಬಿಸಾಡುವಂತಹ ಮಾಸ್ಕ್‌ ಖರೀದಿ ಮಾಡಿದರೆ ಅದನ್ನು ಹೆಚ್ಚು ದಿವಸಗಳ ಕಾಲ ಧರಿಸಬೇಡಿ. ಬಳಸಿದ ಮಾಸ್ಕ್‌ ಅನ್ನು ಎಸೆಯಿರಿ.

ಇದನ್ನೂ ಓದಿ:Covid test compulsory: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಇದನ್ನೂ ಓದಿ:Omicron BF.7: ಕೋವಿಡ್ ಹೊಸ ರೂಪಾಂತರ : ಈ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಿ

ಪ್ಯಾಷನ್‌ ಎಂದು ಡ್ರೆಸ್‌ ಗೆ ಹೊಂದಿಕೆಯಾಗುವಂತಹ ಮಾಸ್ಕ್‌ ಖರೀದಿ ಮಾಡಿ ಧರಿಸುವ ಬದಲು, ನಿಮ್ಮನ್ನು ಸುರಕ್ಷಿತವಾಗಿರಿಸುವ ಮಾಸ್ಕ್‌ ಖರೀದಿ ಮಾಡಿ. ಸರಿಯಾದ ಕ್ರಮದಲ್ಲಿ ಮಾಸ್ಕ್‌ ಧರಿಸಿ .ನಿಮ್ಮ ಮೂಗಿನಿಂದ ಗಲ್ಲದವರೆಗೂ ಸರಿಯಾಗಿ ಕುಳಿತುಕೊಳ್ಳುವಂತೆ ಮಾಸ್ಕ್‌ ಖರೀದಿ ಮಾಡಿ . ನಿಯಮದಂತೆ ಪ್ರತಿದಿನ ಮಾಸ್ಕ್‌ ಧರಿಸಿದರೆ ಈಗ ಬಂದಿರುವ ಕೋವಿಡ್‌ ನ ಹೊಸ ರೂಪಾಂತರ ತಳಿ ಓಮಿಕ್ರಾನ್ ಬಿಎಫ್.7 (Omicron BF.7) ನಿಂದ ದೂರವಿರಬಹುದು.

Omicron BF.7 what kind of mask safe your health

Comments are closed.