Onion Beauty Tips:ನೀಳವಾದ ಕೂದಲು ಬೇಕಾ ಹಾಗಾದ್ರೆ ಈರುಳ್ಳಿ ಬಳಸಿ

(Onion Beauty Tips)ಈರುಳ್ಳಿ ಅಡುಗೆಮನೆ ಮತ್ತು ಅರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಬಳಕೆ ಮಾಡುವುದು ಅಷ್ಟೇ ಅಲ್ಲದೆ ಸೌಂದರ್ಯ ವರ್ಧಕವಾಗಿ ಬಳಕೆ ಮಾಡಬಹುದು.ಈರುಳ್ಳಿಯಲ್ಲಿ ವಿಟಮಿನ್‌ ಎ,ಸಿ ಮತ್ತು ಕೆ ಅಂಶಗಳು ಸಮೃದ್ಧವಾಗಿರುವುದರಿಂದ ಸುಂದರ ನೀಳ ಕೂದಲು ಪಡೆಯಬಹುದು.ಈರುಳ್ಳಿಯಿಂದ ಮಾಡಿದ ಔಷಧೀಯನ್ನು ಕೂದಲಿಗೆ ಹಚ್ಚುವುದರಿಂದ ನೀಳವಾದ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಈರುಳ್ಳಿಯಿಂದ ಮಾಡುವ ಔಷಧೀಯ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

(Onion Beauty Tips)ಬೇಕಾಗುವ ಸಾಮಗ್ರಿಗಳು:

  • ಈರುಳ್ಳಿ
  • ಆಲೂಗಡ್ಡೆ
  • ನಿಂಬೆ ಹಣ್ಣು

ಮಾಡುವ ವಿಧಾನ:
ಮಿಕ್ಸಿ ಜಾರಿಯಲ್ಲಿ ನಾಲ್ಕು ತುಂಡುಗಳಾಗಿ ಹೆಚ್ಚಿಕೊಂಡ ಈರುಳ್ಳಿ, ಆಲೂಗಡ್ಡೆ, ನಿಂಬೆ ಹಣ್ಣು ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣದ ರಸವನ್ನು ಒಂದು ಸಣ್ಣ ಬೌಲ್ ನಲ್ಲಿ ಸೊಸಿಕೊಳ್ಳಬೇಕು. ನಂತರ ಅದಕ್ಕೆ ಒಂದು ಚಮಚ ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆ ಹಾಕಿ ಕಲಸಿಕೊಳ್ಳಬೇಕು. ಅನಂತರ ಒಂದು ಹತ್ತಿಯನ್ನು ತೆಗೆದುಕೊಂಡು ಬೌಲ್ ನಲ್ಲಿ ಅದ್ದಿ ತಲೆ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿಕೊಂಡು 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಬೇಕು. ಹೀಗೆ ವಾರದಲ್ಲಿ ಒಂದು ಬಾರಿ ಮಾಡುವುದರಿಂದ ನಿಳವಾದ ಕೇಶವನ್ನು ಪಡೆಯಬಹುದು.

ಇದನ್ನೂ ಓದಿ:Home Remedies for Stretch Mark : ಪ್ರೆಗ್ನೆನ್ಸಿ ನಂತರದ ಸ್ಟ್ರೆಚ್‌ ಮಾರ್ಕ್‌ಗೆ ಇಲ್ಲಿದೆ ಮನೆಮದ್ದು

ಇದನ್ನೂ ಓದಿ:Pumpkin Soup : ಕುಂಬಳಕಾಯಿ ಸೂಪ್ ಕುಡಿದು ದೇಹದ ತೂಕ ಇಳಿಸಿಕೊಳ್ಳಿ

ಇದನ್ನೂ ಓದಿ:Tulsi leaves:”ತುಳಸಿ ಎಲೆ”ಯಿಂದ ಡ್ಯಾಂಡ್ರಫ್ ಸಮಸ್ಯೆ ನಿವಾರಣೆ

ಆಲವೇರಾ ಹೆರ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು:

  • ಆಲವೇರಾ
  • ಕೊಬ್ಬರಿ ಎಣ್ಣೆ
  • ಮೆಹಂದಿ ಪೌಡರ್
  • ಕಾಫಿ ಪೌಡರ್
  • ಮೊಸರು

ಮಾಡುವ ವಿಧಾನ:

ಒಂದು ಬೌಲ್ ನಲ್ಲಿ ಆಲವೇರಾ ಹಾಕಿ ಚಮಚದಲ್ಲಿ ಹಿಸುಕಿಕೊಳ್ಳಬೇಕು ನಂತರ ಅದಕ್ಕೆ ಎರಡು ಚಮಚ ಕೊಬ್ಬರಿ ಎಣ್ಣೆ, 4 ಚಮಚ ಮೆಹಂದಿ ಪೌಡರ್, ಒಂದು ಚಮಚ ಕಾಫಿ ಪೌಡರ್, ಮೂರು ಚಮಚ ಮೊಸರನ್ನು ಹಾಕಿ ಚೆನ್ನಾಗಿ ಕಲಸಿಕೊಂಡು ಅದಕ್ಕೆ ನೀರು ಬೆರೆಸಿ ಕಲಸಿಕೊಂಡು 3-4 ಗಂಟೆಯವರೆಗೆ ಹಾಗೆ ಇಡಬೇಕು. ನಂತರ ಅದನ್ನು ಕೂದಲಿಗೆ ಹಚ್ಚಿಕೊಂಡು 2 ಗಂಟೆ ಬಿಟ್ಟು ತಲೆ ಸ್ನಾನ ಮಾಡಬೇಕು. ಹೀಗೆ ತಿಂಗಳಲ್ಲಿ ಒಮ್ಮೆ ಮಾಡುವುದರಿಂದ ಕೂದಲನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು .

ಈರುಳ್ಳಿಯಲ್ಲಿ ಸೋಡಿಯಂ, ಪೊಟ್ಯಾಶಿಯಮ್‌,ಪೋಲೇಟ್ ಗಳು,ವಿಟಮಿನ್‌ ಏ, ಸಿ ಮತ್ತು ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ರಂಜಕ ಪೋಷಕಾಂಶಗಳು ಹೇರಳವಾಗಿ ಇರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮ ಹತ್ತಿರ ಸುಳಿಯದಂತೆ ಕಾಪಾಡುತ್ತದೆ. ಈರುಳ್ಳಿಯಲ್ಲಿರುವ ಫ್ಲೇವನಾಯ್ಡ್ ಗಳು ಮತ್ತು ಥಿಯೋಸಲ್ಫಿನೇಟ್‌ ಅಂಶಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈರುಳ್ಳಿ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

If you want long hair then use onion

Comments are closed.