Phyllanthus niruri: ನೆಲನೆಲ್ಲಿ ಗಿಡದ ಪ್ರಯೋಜನದ ಬಗ್ಗೆ ನಿಮಗೆಷ್ಟು ಗೊತ್ತು?

(Phyllanthus niruri) ನೆಗ್ಗಿನಮುಳ್ಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನೆಲನೆಲ್ಲಿ ಎಂದು ಕರೆಯಲಾಗುತ್ತದೆ. ಇದು ಗದ್ದೆಯ ಬದಿಗಳಲ್ಲಿ ವಿಶಾಲವಾಗಿ ಬೆಳೆಯುತ್ತದೆ. ಮೇಲ್ನೋಟಕ್ಕೆ ಹುಣಸೆ ಮರದ ಎಲೆಗಳನ್ನು ಹೋಲುವ ಈ ಎಲೆಗಳು ಸಣ್ಣ ಸಣ್ಣ ದಳಗಳನ್ನು ಹೊಂದಿವೆ. ಮಳೆಗಾಲದ ಸಮಯದಲ್ಲಿ ಇದರಲ್ಲಿ ಹಳದಿ ಬಣ್ಣದ ಹೂವುಗಳು ಕೂಡ ಬಿಡುತ್ತವೆ. ಹೆಚ್ಚಾಗಿ ಇದು ಗ್ರಾಮೀಣ ಪ್ರದೇಶದ ಗದ್ದೆ ಬದಿಗಳಲ್ಲಿ ಬೆಳೆಯುವುದರಿಂದ ಗ್ರಾಮೀಣ ಭಾಗದ ಜನರಿಗೆ ಇದು ಚಿರಪರಿಚಿತ.

ಇದು ಬಹುತೇಕ ಗ್ರಂಥಿ ಅಂಗಡಿಗಳಲ್ಲಿ ಸಿಗುತ್ತದೆ ಇದಕ್ಕೆ ಆಯುರ್ವೇದದಲ್ಲಿ ಗೋಕ್ಷುರ ಎಂದು ಕರೆಯುತ್ತಾರೆ. ಆ ಹೆಸರಿನಿಂದ ಕರೆಯಲು ಕಾರಣ ಈ ಮುಳ್ಳು ಆಕಳಿನ ಪಾದಕ್ಕೆ ಚುಚ್ಚಿಕೊಂಡು ಬರುತ್ತಿತ್ತು. ಗೋಕ್ಷುರ ಅಥವಾ ನೆಗ್ಗಿನ ಮುಳ್ಳು ತಂಪಾಗಿರುವಂತದ್ದು. ಇದು ಶೀತ ಗುಣವನ್ನು ಹೊಂದಿದೆ. ಶೀತ ಗುಣದಿಂದಲೇ ಹಲವಾರು ರೀತಿಯ ಸಮಸ್ಯೆಗಳನ್ನು ಪರಿಹರಿಸುವಂತಹ ಗುಣವನ್ನು ಹೊಂದಿದೆ. ಇದು ದೇಹವನ್ನು ತೇವವಾಗಿರಿಸುತ್ತದೆ ಯಾರಿಗೆ ಅಶಕ್ತತೆ ಇದೆ ಯಾರ ದೇಹದಲ್ಲಿ ಶುಷ್ಕತೆ ಇದೆ ಅವರಿಗೆ ಇದು ಉತ್ತಮವಾದದ್ದು. ಈ ಗುಣಗಳಿರುವುದರಿಂದ ಇದು ವಾತ ಮತ್ತು ಪಿತ್ತವನ್ನು ನಿಯಂತ್ರಣಕ್ಕೆ ತರುತ್ತದೆ.

ಇನ್ನೂ ಇದು ಪ್ರಯೋಜನಕ್ಕೆ ಬಾರದ ಸಸ್ಯ ಎಂದು ಅಂದುಕೊಳ್ಳುವವರು, ನಿಮ್ಮ ಅನಿಸಿಕೆಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಇದು ಅತ್ಯುತ್ತಮ ಆರೋಗ್ಯಕರ ಗುಣಗಳನ್ನು ಹೊಂದಿದೆ. ಆಯುರ್ವೇದ ಮತ್ತು ಯುನಾನಿ ಚಿಕಿತ್ಸೆಯಲ್ಲಿ ಈ ಸಸ್ಯ ಬಳಸಲ್ಪಡುತ್ತದೆ. ಇನ್ನೂ ಚೀನಿಯರ ಸಾಂಪ್ರದಾಯಿಕ ಔಷದೀಯ ಪದ್ದತಿಗಳಲ್ಲೂ ಈ ಸಸ್ಯವನ್ನು ಬಳಸಲಾಗುತ್ತದೆ. ಇದು ಮಾಂಸಖಂಡಗಳು ಚೆನ್ನಾಗಿ ಬೆಳೆಯುವುದಕ್ಕೆ ಸಹಾಯಮಾಡುತ್ತದೆ. ಇದನ್ನ ಸೇವನೆ ಮಾಡುವುದರಿಂದ ಹೃದಯಕ್ಕೆ ತುಂಬಾ ಸಹಾಯವಾಗುತ್ತದೆ ಯಾಕೆಂದರೆ ಇದು ದೇಹದಲ್ಲಿರುವ ಅಧಿಕ ನೀರಿನಾಂಶ ವನ್ನು ಹೊರ ಹಾಕುವುದರಿಂದ ಹೃದಯದ ಮೇಲೆ ಒತ್ತಡ ಕಡಿಮೆಯಾಗುತ್ತದೆ.

ಇದರ ಮುಳ್ಳು, ಬೇರು ಮತ್ತು ಹಣ್ಣುಗಳಿ ಕಿಡ್ನಿ, ಕರುಳು, ಹಾಗೂ ಶರೀರದ ಎಲ್ಲಾ ಅಂಗಾಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಫಂಗಸ್‌ ಮತ್ತು ಬ್ಯಾಕ್ಟಿರಿಯಾದಿಂದಾದ ಕಾಯಿಲೆಗಳನ್ನು ಕೂಡ ತಡೆಗಟ್ಟುತ್ತದೆ. ಇನ್ನೂ ಇದು ಮೂತ್ರಕೋಶದ ಕಲ್ಲುಗಳನ್ನು ಗುಣಪಡಿಸಲು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸಲು ಶಕ್ತಿವರ್ಧಕವಾಗಿ ಬಳಸಲಾಗುತ್ತದೆ.

ಇದನ್ನೂ ಓದಿ : Kidney Stone: ಕಿಡ್ನಿ ಸ್ಟೋನ್‌ ಇದೆಯೇ ಎಂಬುದನ್ನು ಸೂಚಿಸುವ 5 ಲಕ್ಷಣಗಳು; ಎಚ್ಚರ! ನಿರ್ಲಕ್ಷ ಮಾಡಿದರೆ ಜೀವಕ್ಕೆ ಅಪಾಯ

ಇದನ್ನೂ ಓದಿ : Refreshing Juice : ಬೇಸಿಗೆಯ ಬಿಸಿಲಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ ಈ ರಿಫ್ರೆಶೆಂಗ್‌ ಜ್ಯೂಸ್‌ಗಳು

Phyllanthus niruri: How much do you know about the benefits of plantain?

Comments are closed.