PunarPuli Juice Health Tips:ಪುನರ್‌ ಪುಳಿ ಜ್ಯೂಸ್ ಕುಡಿದ್ರೆ ತಲೆನೋವು ಹತ್ತಿರಕ್ಕೂ ಸುಳಿಯುವುದಿಲ್ಲ

(PunarPuli Juice Health Tips)ಪುನರ್‌ ಪುಳಿ ಆಂಟಿಫಂಗಲ್‌ ಮತ್ತು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿರುವುದರಿಂದ ಇದರಿಂದ ತಯಾರಿಸಿದ ಜ್ಯೂಸ್‌ ಕುಡಿದರೆ ಅಥವಾ ಹಣ್ಣು ತಿಂದರೆ ಸೋಂಕು ಹಾಗೂ ವೈರಸ್‌ ಗಳಿಂದ ದೂರವಿರಲು ಸಹಾಯಮಾಡುತ್ತದೆ ಮತ್ತು ಇದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆಯಬಹುದು. ಜೀವಸತ್ವಗಳ ಆಗರವಾದ ಪುನರ್‌ ಪುಳಿ ಮಾಲಿಕ್ ಆಮ್ಲ,ಸಿಟ್ರಿಕ್ ಆಮ್ಲ ಅಂಶಗಳನ್ನು ಒಳಗೊಂಡಿರುವುದರಿಂದ ಪುನರ್‌ ಪುಳಿ ಸೇವಿಸಿದರೆ ಆರೋಗ್ಯಕ್ಕೆ ಸಹಾಯವಾಗುವುದು. ಪುನರ್‌ ಪುಳಿಯಿಂದ ತಯಾರಿಸಿದ ಜ್ಯೂಸ್‌ ಕುಡಿಯುವುದರಿಂದ ಪಿತ್ತ, ವಾಂತಿ, ತಲೆನೋವು ನಮ್ಮ ಹತ್ತಿರ ಸುಳಿಯಂತೆ ನೋಡಿಕೊಳ್ಳುತ್ತದೆ. ಪುನರ್‌ ಪುಳಿ ಜ್ಯೂಸ್‌ ಹೇಗೆ ಮಾಡಿಕೊಳ್ಳುವುದು ಎನ್ನುವ ಮಾಹಿತಿಯ ಕುರಿತು ತಿಳಿಯೋಣ.

(PunarPuli Juice Health Tips) ಬೇಕಾಗುವ ಸಾಮಾಗ್ರಿಗಳು:
ಪುನರ್‌ ಪುಳಿ ಹಣ್ಣಿನ ಸಿಪ್ಪೆ
ಬೆಲ್ಲ

ಮಾಡುವ ವಿಧಾನ
ಒಂದು ಲೋಟ ಬಿಸಿ ನೀರಿಗೆ ಒಣಗಿಸಿಕೊಂಡ ಪುನರ್‌ ಪುಳಿ ಹಣ್ಣಿನ ಸಿಪ್ಪೆ ಹಾಕಿ ನೆನಸಿಡಬೇಕು. ನಂತರ ಆ ನೀರನ್ನು ಸೊಸಿಕೊಂಡು ಅದಕ್ಕೆ ಬೆಲ್ಲ ಹಾಕಿ ಕರಗಿಸಿ ಕುಡಿದರೆ ಪಿತ್ತ, ವಾಂತಿ, ತಲೆನೋವು ಕಡಿಮೆ ಆಗುತ್ತದೆ.

ಪುನರ್‌ ಪುಳಿ ಹಣ್ಣು

ಪುನರ್‌ ಪುಳಿ ಹಣ್ಣನ್ನು ಕಟ್‌ ಮಾಡಿಕೊಂಡು ಅದರ ಸಿಪ್ಪೆಯೋಳಗೆ ಸಕ್ಕರೆಯನ್ನು ತುಂಬಿ ಬಿಸಿಲಿಗೆ ಇಡಬೇಕು . ಬಿಸಿಲಿನ ತಾಪಕ್ಕೆ ಸಕ್ಕರೆ ಕರಗುತ್ತದೆ, ನಂತರ ಇದನ್ನು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಂಡು ಕುಡಿಯುವುದರಿಂದ ಪಿತ್ತ ಕಡಿಮೆ ಆಗುತ್ತದೆ.

ಧನಿಯಾ ಪುಡಿ

ಬೇಕಾಗುವ ಸಾಮಾಗ್ರಿಗಳು:
ಧನಿಯಾ ಪುಡಿ

ಮಾಡುವ ವಿಧಾನ
ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಕಾಯಿಸಬೇಕು ನೀರು ಬಿಸಿ ಆದ ನಂತರ ಒಂದು ಚಮಚ ಧನಿಯಾ ಪುಡಿ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಐದರಿಂದ ಎಂಟು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಬೇಕು ಅನಂತರ ಅದನ್ನು ಲೋಟಕ್ಕೆ ಸೊಸಿಕೊಂಡು ಕುಡಿಯುವುದರಿಂದ ಪಿತ್ತ ಕಡಿಮೆ ಆಗುತ್ತದೆ.

ಕುದಿಸಿಕೊಂಡ ಒಂದು ಲೋಟ ನೀರಿಗೆ ಒಂದು ಚಮಚ ಧನಿಯಾ ಹಾಕಿ ರಾತ್ರಿ ನೆನಸಿಟ್ಟು , ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಧನಿಯಾ ನೆನಸಿಟ್ಟ ನೀರು ಕುಡಿಯುವುದರಿಂದ ಪಿತ್ತ ಕಡಿಮೆ ಆಗುತ್ತದೆ.

ಇದನ್ನೂ ಓದಿ:Fever Reduce Tips:ಜ್ವರ ತಟ್ಟನೆ ಉಪಶಮನವಾಗಲು ಇಲ್ಲಿದೆ ಪರಿಹಾರ

ಇದನ್ನೂ ಓದಿ:Tomato: ತಲೆಹೊಟ್ಟಿನ ಸಮಸ್ಯೆಗೆ ಟೊಮೇಟೊ ಹಣ್ಣು!

ಇದನ್ನೂ ಓದಿ:Nagging Sore Throat Remedies:ಕಾಡುತ್ತಿರುವ ಗಂಟಲು ನೋವಿನಿಂದ ಮುಕ್ತಿ ಪಡೆಯಲು ಈ ಟಿಪ್ಸ್‌ ಅನುಸರಿಸಿ

ಪುನರ್‌ ಪುಳಿ ಸೇವನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡುವುದು ಅಷ್ಟೇ ಅಲ್ಲದೆ ಕೂದಲು , ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಪುನರ್‌ ಪುಳಿಯ ರಸವನ್ನು ಇತರ ನೈಸರ್ಗಿಕ ಉತ್ಪನ್ನಗಳೊಂದಿಗೆ ಬಳಸಿ ಮುಖಕ್ಕೆ ಲೇಪನ ಮಾಡಿಕೊಳ್ಳುವುದರಿಂದ ಮುಖದ ಸೌಂಧರ್ಯವನ್ನು ಕಾಪಾಡುತ್ತದೆ.

PunarPuli Juice Health Tips If you drink Punar Puli juice, the headache will not come close

Comments are closed.