Purify Your Blood Naturally:ನಿಮ್ಮ ದೇಹದ ರಕ್ತ ಶುದ್ಧಿಗಾಗಿ ಬಳಸಿ ಈ ಕೆಳಗಿನ ಆಹಾರ

(Purify Your Blood Naturally)ಇತ್ತೀಚಿನ ಜೀವನಶೈಲಿ, ಆಹಾರ ಪದ್ಧತಿ, ಮಾಲಿನ್ಯ ಮತ್ತು ಪರಿಸರದಲ್ಲಿರುವ ವಿಷಕಾರಿ ಅಂಶಗಳಿಂದ ರಕ್ತದಲ್ಲಿ ಕಶ್ಮಲಗಳು ಉಂಟಾಗುತ್ತವೆ. ರಕ್ತದಲ್ಲಿನ ಕಶ್ಮಲ ಆದರೆ ದೇಹವು ಅನೇಕ ರೋಗಗಳಿಗೆ ಬಲಿಯಾಗುತ್ತದೆ. ರಕ್ತವು ಜೀವಕೋಶಗಳಿಗೆ ಆಮ್ಲಜನಕವನ್ನು ಒಯ್ಯುವಂತಹ ಕೆಲಸವನ್ನು ಮಾಡುತ್ತದೆ ಒಂದುವೇಳೆ ರಕ್ತ ಕಶ್ಮಲವಾದರೆ ಆರೋಗ್ಯ ಹದಗೆಡುತ್ತದೆ. ಇಂತಹ ತೊಂದರೆಗಳು ನಿಮ್ಮನ್ನು ಕಾಡದೆ ಇರಲು ಕೆಲವು ಆಹಾರಕ್ರಮವನ್ನು ರೂಡಿಸಿಕೊಳ್ಳುವುದು ಉತ್ತಮ. ರಕ್ತವನ್ನು ಶುದ್ಧವಾಗಿ ಇಟ್ಟುಕೊಳ್ಳಲು ಯಾವೆಲ್ಲಾ ಆಹಾರವನ್ನು ಸೇವನೆ ಮಾಡಬೇಕು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Purify Your Blood Naturally)ಬಿಟ್ರೋಟ್ ಜ್ಯೂಸ್
ಬೀಟ್ರೂಟ್ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿರುವ ಬೀಟಾಸಯಾನಿನ್ ಅಂಶವನ್ನು ಹೊಂದಿರುವುದರಿಂದ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಬಿಟ್ರೋಟ್‌ ಜ್ಯೂಸ್‌ ಕುಡಿಯುವ ಹವ್ಯಾಸ ರೂಡಿಸಿಕೊಂಡರೆ ಉತ್ತಮ. ಬಿಟ್ರೋಟ್ ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು ನಂತರ ಪಾತ್ರೆಯಲ್ಲಿ ಎರಡು ಲೋಟ ನೀರು ಹಾಕಿ ಅದರಲ್ಲಿ ಕತ್ತರಿಸಿದ ಬಿಟ್ರೋಟ್ತುಂಡುಗಳನ್ನು ಹಾಕಿ 7-10 ನಿಮಿಷಗಳ ಕಾಲ ಕುದಿಯಲು ಬಿಡಿ. ಅನಂತರ ಅದಕ್ಕೆ ಕರಿಮೆಣಸು ಪುಡಿ , ಜೀರಿಗೆ ಪುಡಿ ಹಾಕಿ ಮಿಶ್ರಣ ಮಾಡಿ ಕುಡಿಯುವುದರಿಂದ ರಕ್ತ ಶುದ್ಧಿ ಆಗಲು ಸಹಾಯ ಮಾಡುತ್ತದೆ. ಬಿಟ್ರೋಟ್‌ ಜ್ಯೂಸ್‌ ಪ್ರತಿದಿನ ಕುಡಿಯುವ ಹವ್ಯಾಸ ರೂಡಿಸಿಕೊಂಡರೆ ಉತ್ತಮ.

ಶುಂಠಿ ಮತ್ತು ನಿಂಬೆ
ಕುಟ್ಟಣಿಗೆಯಲ್ಲಿ ಶುಂಠಿ ಕುಟ್ಟಿಕೊಂಡು ಇದಕ್ಕೆ ಮೂರು ಹನಿ ನಿಂಬೆಹಣ್ಣು ರಸ , ಒಂದು ಚಿಟಿಕೆ ಉಪ್ಪು , ಒಂದು ಚಿಟಿಕೆ ಕಾಳು ಮೆಣಸು ಪುಡಿ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತವನ್ನು ಶುದ್ಧೀಕರಿಸುತ್ತದೆ.

ತುಳಸಿ
ತುಳಸಿ ಎಲೆಗಳ ಸೇವನೆಯು ಅನೇಕ ರೀತಿಯಲ್ಲಿ ಪ್ರಯೋಜನ ಪಡೆದುಕೊಳ್ಳಬಹುದು ಎಂಬ ಮಾಹಿತಿ ಎಲ್ಲರಿಗೂ ತಿಳಿದೆ ಇದೆ. ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ರಕ್ತ ಶುದ್ಧವಾಗುತ್ತದೆ. ತುಳಸಿ ಎಲೆಗಳಲ್ಲಿ ಆಮ್ಲಜನಕ ಸಮೃದ್ಧವಾಗಿರುವುದರಿಂದ ಇದು ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ಒಂದೊಂದು ಎಲೆಯನ್ನು ತಿನ್ನುವ ಹವ್ಯಾಸ ರೂಡಿಸಿಕೊಳ್ಳಿ.

ಬೇವಿನ ಸೊಪ್ಪು
ರಕ್ತ ಶುದ್ಧೀಕರಣಕ್ಕೆ ಬೇವಿನ ಸೊಪ್ಪು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಹಜವಾಗಿ ಬೇವಿನ ಸೊಪ್ಪು ಸೇವಿಸುವುದು ಸ್ವಲ್ಪ ಕಷ್ಟ ಆದರೆ ಇದು ರಕ್ತದಲ್ಲಿರುವ ಕಲ್ಮಶಗಳನ್ನು ಸ್ವಚ್ಛಗೊಳಿಸುತ್ತದೆ. ಹಾಗಾಗಿ ಬೇವಿನ ಸೊಪ್ಪಿನ ಕಷಾಯ ಮತ್ತು ಪ್ರತಿದಿನ ಒಂದೊಂದು ಎಲೆಯನ್ನು ತಿನ್ನುವುದರಿಂದ ರಕ್ತದಲ್ಲಿ ಸಂಗ್ರಹವಾಗಿರುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Control Body Cholesterol Tips:ದೇಹದ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಇಲ್ಲಿದೆ ಸುಲಭ ಮಾರ್ಗ

ಇದನ್ನೂ ಓದಿ:Actresses Diet Information:ಪಿಟ್‌ ಆಗಿರಲು ನಟಿಯರು ಯಾವೆಲ್ಲಾ ಆಹಾರ ಸೇವನೆ ಮಾಡುತ್ತಾರೆ ಗೊತ್ತಾ?

ಬೆಳ್ಳುಳ್ಳಿ
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವ ಕೆಲಸವನ್ನು ಮಾಡುವುದಲ್ಲದೆ ರಕ್ತವನ್ನು ಶುದ್ಧಿಕರಿಸುತ್ತದೆ. ಪ್ರತಿದಿನದ ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸಿದರೆ ಉತ್ತಮ.

Purify Your Blood Naturally Use the following foods to purify your body’s blood

Comments are closed.