PAN Card News : ಪ್ಯಾನ್‌ ಬಳಕೆದಾರರು ಎರಡು ಪ್ಯಾನ್‌ ಕಾರ್ಡ್‌ ಬಳಸುತ್ತಿದ್ದರೆ ಎಚ್ಚರ !

ನವದೆಹಲಿ : ಪ್ಯಾನ್‌ ಆಧಾರ್‌ ಲಿಂಕ್‌ನ್ನು ಮಾರ್ಚ್‌ 31, 2023ರ ಒಳಗೆ ಮಾಡುವಂತೆ ಈಗಾಗಲೇ ಆದಾಯ ತೆರಿಗೆ (PAN Card News) ಎಚ್ಚರಿಸಿದೆ. ಅದರ ಮೊದಲು ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿ ಇದಾಗಿದೆ. ಇತ್ತೀಚಿನ ಕಾಲದಲ್ಲಿ ಪ್ಯಾನ್ ಕಾರ್ಡ್ ಪ್ರತಿ ಹಣಕಾಸು ವಹಿವಾಟಿಗೆ ಮತ್ತು ಬ್ಯಾಂಕಿಂಗ್‌ ವ್ಯವಹಾರಕ್ಕೆ ಅಗತ್ಯ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದನ್ನು ಈಗ ಕಡ್ಡಾಯಗೊಳಿಸಲಾಗಿದ್ದು, ಇಲ್ಲದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಹಾಗೆಯೇ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದಂತೆ ಈ ತಪ್ಪು ಮಾಡಿದ್ದರೆ, ಬಳಕೆದಾರರಿಗೆ 10,000 ರೂ. ದಂಡ ಕೂಡ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಎರಡು ಪ್ಯಾನ್‌ ಕಾರ್ಡ್‌ ಹೊಂದಿದ್ದರೆ ಸಮಸ್ಯೆ :
ಮೊದಲನೆಯದಾಗಿ ಪ್ಯಾನ್ ಕಾರ್ಡ್‌ನ್ನು ಬಳಕೆ ಮಾಡುವಾಗ ಅದರಲ್ಲಿ ನೀಡಲಾದ ಹತ್ತು ಅಂಕಿಯ ಪ್ಯಾನ್ ಸಂಖ್ಯೆಯನ್ನು ಬಹಳ ಎಚ್ಚರಿಕೆಯಿಂದ ಭರ್ತಿ ಮಾಡಬೇಕು. ಅದರಲ್ಲಿ ಯಾವುದೇ ಕಾಗುಣಿತ ತಪ್ಪು ಮಾಡಿ ಭರ್ತಿ ಮಾಡಿದರೆ ನಿಮಗೆ ಭಾರೀ ದಂಡವನ್ನು ಭರಿಸಬೇಕಾಗುತ್ತದೆ ಎನ್ನುವುದನ್ನು ಬಳಕೆದಾರರು ನೆನಪಿನಲ್ಲಿಟ್ಟುಕೊಳ್ಳಬೇಕು.
ಇದರೊಂದಿಗೆ ನೀವು ಎರಡು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೂ ಸಹ, ನೀವು ಭಾರಿ ಮೊತ್ತದ ದಂಡವನ್ನು ಪಾವತಿಸಬೇಕಾಗಬಹುದು.

ನೀವು ಎರಡು ಪ್ಯಾನ್‌ ಕಾರ್ಡ್‌ನ್ನು ಹೊಂದಿದ್ದರೆ, ನಿಮ್ಮ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡುವ ಸಾಧ್ಯತೆ ಇರುತ್ತದೆ. ಅಂದರೆ, ನೀವು ಸಹ ಎರಡು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೆ, ತಕ್ಷಣವೇ ನೀವು ನಿಮ್ಮ ಎರಡನೇ ಪ್ಯಾನ್ ಕಾರ್ಡ್ ಅನ್ನು ಇಲಾಖೆಗೆ ಸರೆಂಡರ್ ಮಾಡಬೇಕಾಗುತ್ತದೆ.1961ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 272ಬಿಯಲ್ಲಿಯೂ ಇದಕ್ಕೆ ಅವಕಾಶವಿದೆ.

ಇದನ್ನೂ ಓದಿ : Online Gas Booking : ಆನ್‌ಲೈನ್‌ನಲ್ಲಿ ಸಿಲಿಂಡರ್‌ ಬುಕಿಂಗ್‌ ಮಾಡಿ ಕ್ಯಾಶ್‌ಬ್ಯಾಕ್‌ ಗಳಿಸಿ

ಇದನ್ನೂ ಓದಿ : Twitter CEO Post : ಟ್ವಿಟರ್ ಸಿಇಒ ಹುದ್ದೆಗೆ ಅರ್ಜಿ ಸಲ್ಲಿಸಿದ ‘ಇಮೇಲ್‌ನ ಸಂಶೋಧಕ’ ಶಿವ ಅಯ್ಯದುರೈ

ಇದನ್ನೂ ಓದಿ : Mask Demand Price Hike : ಭಾರತದಲ್ಲಿ ಮತ್ತೆ ಕೊರೊನಾ ಆತಂಕ : ಹೆಚ್ಚಾಯ್ತು ಮಾಸ್ಕ್‌ಗಳಿಗೆ ಬೇಡಿಕೆ, ಬೆಲೆ ಏರಿಕೆ

ಎರಡನೇ ಪ್ಯಾನ್ ಕಾರ್ಡ್‌ನ್ನು ಸರೆಂಡರ್ ಮಾಡುವ ವಿಧಾನ :

  • ಇದಕ್ಕಾಗಿ ಸಾಮಾನ್ಯ ಫಾರ್ಮ್‌ಗಳಿವೆ, ಅದನ್ನು ನೀವು ಆದಾಯ ತೆರಿಗೆ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.
  • ಇದಕ್ಕಾಗಿ ವೆಬ್‌ಸೈಟ್‌ನಲ್ಲಿರುವ ‘Request For New PAN Card Or/ And Changes or Correction in PAN Data’ ಲಿಂಕ್‌ನ್ನು ಕ್ಲಿಕ್ ಮಾಡುವ ಮೂಲಕ ನೀವು ಫಾರ್ಮ್‌ನ್ನು ಡೌನ್‌ಲೋಡ್ ಮಾಡಬಹುದು.
  • ಇದರ ನಂತರ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ಯಾವುದೇ NSDL ಕಚೇರಿಗೆ ಸಲ್ಲಿಸಬೇಕು.
  • ಎರಡನೇ ಪ್ಯಾನ್ ಕಾರ್ಡ್ ಅನ್ನು ಸರೆಂಡರ್ ಮಾಡುವಾಗ, ಅದನ್ನು ಫಾರ್ಮ್‌ನೊಂದಿಗೆ ಸಲ್ಲಿಸಬೇಕಾಗಿದೆ.
  • ನೀವು ಈ ಕೆಲಸವನ್ನು ಆನ್‌ಲೈನ್‌ನಲ್ಲಿಯೂ ಮಾಡಬಹುದು.

PAN Card News : Beware if PAN users are using two PAN cards!

Comments are closed.