Reasons for back pain: ಬೆಳಿಗ್ಗೆ ಎದ್ದಾಗ ಬೆನ್ನು ನೋವು ಕಾಡುತ್ತಿದೆಯೆ? ಇದಕ್ಕೆ ಕಾರಣಗಳೇನು ? ಇಲ್ಲಿದೆ ಪೂರ್ಣ ಮಾಹಿತಿ

(Reasons for back pain)ವಯೋವೃದ್ಧರನ್ನು ಕಾಡುತ್ತಿದ್ದ ಹಲವು ರೋಗಗಳು ಈಗ ಯುವಕರನ್ನೂ ಕಾಡಲಾರಂಭಿಸಿವೆ. ಇತ್ತೀಚೆಗೆ, ಯುವಜನರಲ್ಲಿ ಬೆನ್ನುನೋವಿನ ಸಮಸ್ಯೆ ಸಾಕಷ್ಟು ಹೆಚ್ಚಾಗಿದೆ. ಜೀವನಶೈಲಿಯನ್ನು ಬದಲಾಯಿಸುವುದು, ಸರಿಯಾಗಿ ನಿದ್ದೆ ಮಾಡದಿರುವುದು ಕೂಡ ಬೆನ್ನು ನೋವಿಗೆ ಒಂದು ರೀತಿಯ ಕಾರಣವಾಗಬಹುದು. ಬೆಳಗ್ಗೆ ಎದ್ದ ನಂತರ ಬರುವ ಬೆನ್ನು ನೋವು ತುಂಬಾ ಗಂಭೀರವಾದ ರೋಗವಲ್ಲ. ಆದರೆ ಆ ತೊಂದರೆಯಿಂದ ನಿಮ್ಮ ದೇಹವು ಚಲಿಸಲು ಸಾಧ್ಯವಿಲ್ಲ. ಇತರ ಕೆಲಸಗಳನ್ನು ಮಾಡಲು ಸಹ ಬಹಳ ಕಷ್ಟಪಡಬೇಕಾಗುತ್ತದೆ.

ಬೆಳಗ್ಗೆ ಎದ್ದಾಗ ಬೆನ್ನು ನೋವು (Reasons for back pain) ಬಂದರೆ ಅದು ದಿನವಿಡೀ ಹೆಚ್ಚಾಗಿ ಕಾಟ ಕೊಡುತ್ತದೆ. ಈ ನೋವಿನ ಹಿಂದೆ ಹಲವು ಕಾರಣಗಳಿರಬಹುದು. ಅವುಗಳಲ್ಲಿ ಒಂದು ವೃದ್ಧಾಪ್ಯ. ವಯಸ್ಸು ಹೆಚ್ಚಾದಂತೆ ಅದರ ಜೊತೆಯಲ್ಲಿ ಮೂಳೆಯ ಸಾಂದ್ರತೆಯೂ ಕಡಿಮೆಯಾಗತೊಡಗುತ್ತದೆ, ಇದರಿಂದ ಬೆನ್ನು ನೋವು, ಸೊಂಟ ನೋವು ಶುರುವಾಗುತ್ತದೆ. ಆಗಾಗ ಇದಕ್ಕಾಗಿ ವೈದ್ಯರ ಭೇಟಿ ಮಾಡಬೇಕಾಗುತ್ತದೆ. ನೋವು ನಿವಾರಕಗಳನ್ನು ತೆಗೆದುಕೊಳ್ಳುವ ಮೂಲಕ ನೀವು ನೋವನ್ನು ಕಡಿಮೆ ಮಾಡಬೇಕು. ಬೆಳಗ್ಗೆ ಬರುವ ಈ ಬೆನ್ನು ನೋವಿನ ಕಾರಣಗಳು ಏನಿರಬಹುದು ಮತ್ತು ಅದರಿಂದ ಪರಿಹಾರವನ್ನು ಹೇಗೆ ಪಡೆಯುವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗ್ಗಿನ ಜಾವ ಬೆನ್ನು ನೋವು ಏಕೆ ಬರುತ್ತದೆ (Reasons for back pain)?
*ತಪ್ಪಾದ ಕುಶನ್ ಆಯ್ಕೆ ಮಾಡುವುದು
ರಾತ್ರಿ ನಿದ್ರೆಯ ಸಮಯದಲ್ಲಿ ನೀವು ದಿಂಬಿನ ಮೇಲೆ ತಪ್ಪು ರೀತಿಯಲ್ಲಿ ಮಲಗಿದರೆ ಅಥವಾ ತಪ್ಪಾದ ಕುಶನ್ ಆಯ್ಕೆ ಮಾಡಿದರೆ, ಇದರಿಂದ ಬೆನ್ನು ನೋವುಂಟುಗುತ್ತದೆ. ನೀಮಗೆ ಒಂದು ಬದಿಯಲ್ಲಿ ಮಲಗುವ ಅಭ್ಯಾಸವಿದ್ದರೆ, ಈ ಅಭ್ಯಾಸವನ್ನು ಬದಲಾಯಿಸಿ. ಇದಕ್ಕಾಗಿ ಎರಡೂ ಬದಿಗಳಲ್ಲಿ ರಾತ್ರಿಯಲ್ಲಿ ಕನಿಷ್ಠ 4 ರಿಂದ 5 ಬಾರಿ ತಿರುಗಿ ಮಲಗಿ. ಇದರಿಂದ ಬೆನ್ನು ನೋವು ನಿವಾರಣೆಯಾಗುತ್ತದೆ.

ಆಸ್ಟಿಯೊಪೊರೋಸಿಸ್
ಆಸ್ಟಿಯೊಪೊರೋಸಿಸ್ ಕೂಡ ಬೆನ್ನುನೋವಿಗೆ ಕಾರಣವಾಗಬಹುದು. ಇದು ಮೂಳೆಗಳು ಕ್ರಮೇಣ ದುರ್ಬಲಗೊಳ್ಳುವ ಸ್ಥಿತಿಯಾಗಿದೆ. ನೀವು ಆಸ್ಟಿಯೊಪೊರೋಸಿಸ್ ಹೊಂದಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.ಆಗ ಮಾತ್ರ ಬೆನ್ನು ನೋವು ಕಡಿಮೆ ಮಾಡಲು ಸಾಧ್ಯ.

ಸ್ಲಿಪ್ ಡಿಸ್ಕ್
ನಿಮ್ಮ ಸ್ಲಿಪ್ ಡಿಸ್ಕ್​ನಲ್ಲಿ ಅಡಚಣೆ ಉಂಟಾದರೆ, ನೀವು ಬೆಳಗ್ಗೆ ಎದ್ದಾಗ ಬೆನ್ನಿನ ಕೆಳಭಾಗಕ್ಕೆ ನೋವುಂಟಾಗುತ್ತದೆ. ನೀವು ಸಹ ಈ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀವು ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಇಲ್ಲದಿದ್ದಲ್ಲಿ ಸಮಸ್ಯೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ.

ಕ್ಯಾಲ್ಸಿಯಂ ಕೊರತೆ
ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯಿಂದ ಬೆಳಗ್ಗೆ ಎದ್ದಾಗ ಬೆನ್ನು ನೋವು ಉಂಟಾಗುತ್ತದೆ. ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀವು ತಕ್ಷಣ ತಜ್ಞರನ್ನು ಸಂಪರ್ಕಿಸಬೇಕು. ಅದಕ್ಕೆ ಸೂಕ್ತವಾದ ಪೂರಕಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಹಾರದ ವಿಚಾರದಲ್ಲಿ ಸಹ ಕೆಲವು ಬದಲಾವಣೆಗಳನ್ನು ಮಾಡಿಕೊಂಡು, ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸಬೇಕು.

ಇದನ್ನೂ ಓದಿ : Banana Scrub :ಚಳಿಗಾಲದಲ್ಲಿ ಮುಖ ಒಡೆಯದಂತೆ ರಕ್ಷಿಸಲು ಬಾಳೆಹಣ್ಣಿನ ಸ್ಕ್ರಬ್‌

ಇದನ್ನೂ ಓದಿ : Sinus Headache Remedies:ಸೈನಸ್‌ ತಲೆನೊವಿನಿಂದ ಮುಕ್ತಿ ಪಡೆಯಲು ಈ ಮೂರು ಪದಾರ್ಥ ಟ್ರೈ ಮಾಡಿ

ಈ ರೀತಿಯ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳು ಕೂಡ ಇವೆ. ಇವೆಲ್ಲ ಸಮಸ್ಯೆಗಳಿಗೆ ಒಂದೇ ಒಂದು ರೀತಿಯಲ್ಲಿ ಪರಿಹಾರವೆಂದರೇ ಅದು ವ್ಯಾಯಾಮ.
ನಿಮಗೆ ಸೋಂಕು, ಡಿಸ್ಕ್ ಸಮಸ್ಯೆ ಅಥವಾ ಸಂಧಿವಾತವಿಲ್ಲದಿದ್ದರೆ ಮತ್ತು ನೋವು ಕೇವಲ ದುರ್ಬಲ ಸ್ನಾಯುಗಳಿಂದ ಇದ್ದರೆ, ನೀವು ಸರಳವಾದ ವ್ಯಾಯಾಮಗಳನ್ನು ಮಾಡಬೇಕು. ಇದಕ್ಕಾಗಿ ನೀವು 4 ಯೋಗಾಸನಗಳನ್ನು ಮಾಡಬಹುದು. ಪವನಮುಕ್ತಾಸನ, ಬಂಧನಾಸನ, ಭುಜಂಗಾಸನ ಅಥವಾ ನೌಕಾಸನವು ಕೆಳ ಬೆನ್ನುನೋವಿನಿಂದ ನಿಮಗೆ ಪರಿಹಾರವನ್ನು ನೀಡುತ್ತದೆ.

(Reasons for back pain)Many of the diseases that were bothering the elderly have now started bothering the youth as well. Recently, the problem of back pain among young people has increased quite a lot. Changing lifestyle, not sleeping properly can also be a type of back pain.

Comments are closed.