Stop Vomiting Immediately: ವಾಂತಿ ಸಮಸ್ಯೆ ತಕ್ಷಣ ನಿಲ್ಬೇಕಾ? ಇಲ್ಲಿದೆ ಪರಿಹಾರ

(Stop Vomiting Immediately)ಕೆಲವರಿಗೆ ಆಹಾರ ಸೇವನೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಅಜೀರ್ಣವಾಗಿ ವಾಂತಿ ಸಮಸ್ಯೆಗಳು ಬರುತ್ತವೆ. ವಾಂತಿ ಸಮಸ್ಯೆ ಇದ್ದಾಗ ಡಾಕ್ಟರ್‌ ಬಳಿ ಹೋಗಲು ಕಷ್ಟವಾಗುತ್ತದೆ. ಹಾಗಾಗಿ ವಾಂತಿಯನ್ನು ನಿಲ್ಲಿಸಲು ಮನೆಯಲ್ಲಯೇ ಮದ್ದನ್ನು ಮಾಡಿ ನಂತರ ಡಾಕ್ಟರ್‌ ಬಳಿ ಹೋಗಬಹುದು. ವಾಂತಿಯನ್ನು ತಕ್ಷಣವಾಗಿ ನಿಲ್ಲಿಸುವುದಕ್ಕೆ ಮನೆಮದ್ದಿನ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Stop Vomiting Immediately)ಶುಂಠಿ
ಶುಂಠಿಯ ರಸವನ್ನು ಹಾಗೆ ಸೇವಿಸುವುದರಿಂದ ವಾಂತಿ ಸಮಸ್ಯೆ ನಿವಾರಣೆ ಆಗುತ್ತದೆ. ಇಲ್ಲವಾದಲ್ಲಿ ನೀರಲ್ಲಿ ಜಜ್ಜಿಕೊಂಡ ಶುಂಠಿಯನ್ನು ಹಾಕಿ ಕಾಯಿಸಿಕೊಂಡು ಆ ನೀರನ್ನು ಒಂದೊಂದೆ ಗುಟುಕು ಪದೇ ಪದೇ ಕುಡಿಯುವುದರಿಂದ ವಾಂತಿ ನಿಲ್ಲುತ್ತದೆ.

ಪುದಿನ ಎಲೆ
ಪುದಿನ ಎಲೆಯ ವಾಸನೆಯನ್ನು ತೆಗೆದುಕೊಳ್ಳುವುದರಿಂದ ವಾಂತಿ ನಿಲ್ಲುತ್ತದೆ. ಇಲ್ಲವಾದಲ್ಲಿ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿಕೊಂಡು ನೀರಿನಲ್ಲಿ ನಾಲ್ಕೈದು ಪುದಿನ ಸೊಪ್ಪು ಹಾಕಿಕೊಂಡು ಕಾಯಿಸಿಕೊಂಡು ಇದನ್ನು ಕುಡಿಯುವುದರಿಂದ ವಾಂತಿ ನಿಲ್ಲುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವುದನ್ನು ತಡೆಯುತ್ತದೆ.

ಲವಂಗ
ಮೊದಲಿಗೆ ಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಬಿಸಿ ಆಗುತ್ತಿದ್ದ ಹಾಗೆ ಮೂರು ಲವಂಗ ಹಾಕಿ ಎರಡು ನಿಮಿಷ ಕುದಿಸಿಕೊಳ್ಳಬೇಕು. ನಂತರ ಈ ನೀರನ್ನು ಲವಂಗದ ಸಮೇತ ಸೇವನೆ ಮಾಡಬೇಕು .ಹೀಗೆ ಮಾಡುವುದರಿಂದ ವಾಂತಿ ನಿಯಂತ್ರಣಕ್ಕೆ ಬರುತ್ತದೆ.

ಸೊಂಪು
ಮೊದಲಿಗೆ ಪಾತ್ರೆಯಲ್ಲಿ ನೀರನ್ನು ಇಟ್ಟುಕೊಂಡು ಬಿಸಿ ಆಗುತ್ತಿದ್ದ ಹಾಗೆ ಸೊಂಪು ಹಾಕಿಎರಡು ಮೂರು ನಿಮಿಷದವರೆಗೆ ಕುದಿಸಿಕೊಳ್ಳಬೇಕು ನಂತರ ಇದನ್ನು ಕುಡಿದರೆ ವಾಂತಿ ನಿಲ್ಲುತ್ತದೆ. ಸೊಂಪನ್ನು ಅಗಿದು ಅದರ ರಸವನ್ನು ನುಂಗುವುದರಿಂದ ಕೂಡ ವಾಂತಿಯನ್ನು ನಿಲ್ಲಿಸಬಹುದು ಅಷ್ಟೇ ಅಲ್ಲದೆ ಜಿರ್ಣಕ್ರಿಯೆಗೂ ಕೂಡ ಸಹಕಾರಿಯಾಗಿದೆ.

ಈರುಳ್ಳಿ
ಅರ್ಧ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕುಟ್ಟಣಿಗೆಯಲ್ಲಿ ನುಣ್ಣಗೆ ಕುಟ್ಟಿಕೊಳ್ಳಬೇಕು ಅಥವಾ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.ನಂತರ ಅದರಲ್ಲಿರುವ ರಸವನ್ನು ಒಂದು ಬೌಲ್ ನಲ್ಲಿ ಹಿಂಡಿಕೊಳ್ಳಬೇಕು. ಮಿಕ್ಸಿಯಲ್ಲಿ ಈರುಳ್ಳಿಯನ್ನು ರುಬ್ಬಿಕೊಂಡರೆ ಹಾಗೆ ಅದನ್ನು ಬೌಲ್‌ ನಲ್ಲಿ ಹಾಕಿಕೊಳ್ಳಬೇಕು. ನಂತರ ಅದಕ್ಕೆ ಜೇನುತುಪ್ಪವನ್ನು ಬೇರೆಸಿಕೊಂಡು ತಿಂದರೆ ವಾಂತಿಯನ್ನು ನಿಲ್ಲಿಸುತ್ತದೆ.

ಇದನ್ನೂ ಓದಿ:Oily Skin Beauty Tips:ಆಯಿಲ್‌ ಸ್ಕಿನ್‌ ಪಿಂಪಲ್‌ ನಿವಾರಣೆಗೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ ಫೇಸ್‌ ಪ್ಯಾಕ್‌

ಇದನ್ನೂ ಓದಿ:Long Hair Beauty Tips: ನೀಳ ಕೇಶರಾಶಿ ನಿಮ್ಮದಾಗಬೇಕಾ ? ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

ಮನೆಮದ್ದುಗಳಲ್ಲಿ ನೈಸರ್ಗಿಕ ಆಹಾರ ಪದಾರ್ಥಗಳಿಂದ ಮಾಡುವುದರಿಂದ ಇವುಗಳಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ. ಹಾಗಾಗಿ ವಾಂತಿ ಸಮಸ್ಯೆಗಳು ಇದ್ದಾಗ ಈ ಮೇಲೆ ಸೂಚಿಸಿದ ಐದು ಪದಾರ್ಥಗಳ ಮನೆಮದ್ದನ್ನು ಸೇವಿಸಿದರೆ ತಕ್ಷಣ ವಾಂತಿ ನಿಲ್ಲುತ್ತದೆ. ವಾಂತಿ ಸಮಸ್ಯೆ ಕಾಣಿಸಿಕೊಂಡಾಗ ಈ ಮೇಲಿನ ಐದು ಮನೆಮದ್ದುಗಳಲ್ಲಿ ಯಾವುದಾದರೂ ಒಂದು ಮನೆಮದ್ದು ಮಾಡಿ ಕುಡಿದರೆ ವಾಂತಿ ನಿಲ್ಲುತ್ತದೆ.

Should the vomiting problem stop immediately? Here is the solution

Comments are closed.