Skin Problem Tips:ಚರ್ಮ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಟಿಪ್ಸ್‌ ಬಳಸಿ

(Skin Problem Tips)ವಿವಿಧ ಬಗೆಯ ಚರ್ಮ ಸಂಬಂಧಿ ರೋಗಗಳಿಂದ ಬಳಲುತ್ತಿದ್ದರೆ ಇನ್ನು ಮುಂದೆ ಆ ಚಿಂತೆ ಬೇಡ, ಚರ್ಮ ಸಂಬಂಧಿ ಕಾಯಿಲೆಯನ್ನು ಮನೆಯಲ್ಲಿಯೇ ಉಪಶಮನ ಮಾಡಿಕೊಳ್ಳಬಹುದು. ಚರ್ಮ ಸಂಬಂಧಿ ಕಾಯಿಲೆಗೆ ಔಷಧೀಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬ ಮಾಹಿತಿಯ ಕುರಿತು ಈ ಕೆಳಗೆ ತಿಳಿಸಲಾಗಿದೆ.

(Skin Problem Tips)ಬೇಕಾಗುವ ಸಾಮಾಗ್ರಿಗಳು:
ತುಳಸಿ ಎಲೆ
ಸುಣ್ಣ

ಮಾಡುವ ವಿಧಾನ
ಮೊದಲಿಗೆ ತುಳಸಿ ಎಲೆಯನ್ನು ಪೇಸ್ಟ್‌ ಮಾಡಿ ಬದಿಯಲ್ಲಿ ಇಟ್ಟುಕೊಳ್ಳಬೇಕು. ನಂತರ ಒಂದು ಬೌಲ್ ನಲ್ಲಿ ತುಳಸಿ ಪೇಸ್ಟ್‌, ಒಂದು ಚಿಟಿಕೆ ಸುಣ್ಣ(ಎಲೆ ಅಡಿಕೆ ತಿನ್ನಲು ಬಳಸುವ ಸುಣ್ಣ) ಹಾಕಿ ಮಿಶ್ರಣಮಾಡಿಕೊಳ್ಳಬೇಕು. ಇದನ್ನು ಚರ್ಮಸಂಬಂದಿತ ಕಜ್ಜಿ, ಗಜಕರ್ಣ, ಅಲರ್ಜಿ, ತುರಿಕೆ ಆಗುವ ಭಾಗಕ್ಕೆ ಹಚ್ಚಿಕೊಂಡರೆ ಕ್ಷಣದಲ್ಲಿ ಚರ್ಮ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತುಳಸಿ ಪೇಸ್ಟ್‌ ಅನ್ನು ದಪ್ಪವಾಗಿ ಲೇಪನ ಮಾಡಿಕೊಳ್ಳುವುದರಿಂದ ಮತ್ತು ರಾತ್ರಿ ಮಲಗುವ ಸಮಯದಲ್ಲಿ ಹಚ್ಚಿಕೊಂಡರೆ ಇನ್ನು ಉತ್ತಮ.

ತುಳಸಿ ಎಲೆ
ಔಷಧೀಯ ಗುಣಗಳ ಆಗರ ಎಂದು ಕರೆಸಿಕೊಳ್ಳುವ ತುಳಸಿ ಎಲೆಯಲ್ಲಿ ಹಲವು ಔಷಧೀಯ ಗುಣವಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್‌, ಆಂಟಿ ವೈರಲ್‌, ಆಂಟಿ ಇನ್ಫಾಮೇಟರಿ, ಆಂಟಿ ಫಂಗಲ್‌ ಇತ್ಯಾದಿ ಗುಣಲಕ್ಷಣಗಳು ಹೊಂದಿದೆ. ಪ್ರತಿನಿತ್ಯ ಒಂದೊಂದು ತುಳಸಿ ಎಲೆಯನ್ನು ತಿನ್ನುವುದರಿಂದ ಅಥವಾ ಚಹಾ ಮಾಡುವಾಗ ಒಂದೆರಡು ಎಲೆಗಳನ್ನು ಟೀ ಗೆ ಹಾಕಿ ಕುಡಿಯುವುದರಿಂದ ದೇಹದಲ್ಲಿ ಆಗಿರುವ ಗಾಯಗಳು ಬಹಳ ಬೇಗನೆ ಗುಣವಾಗುತ್ತದೆ. ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಆರೋಗ್ಯಕರ ಕೊಲೆಸ್ಟ್ರಾಲ್‌ ಹೆಚ್ಚಿಸುವುದಕ್ಕೆ ತುಳಸಿ ಎಲೆ ಸಹಾಯ ಮಾಡುತ್ತದೆ. ಅಧಿಕ ಒತ್ತಡ ಇರುವವರು ತುಳಿಸಿ ಎಲೆಯನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಅಂಶಗಳನ್ನು ತಡೆದು ಆರೋಗ್ಯವನ್ನು ಕಾಪಾಡುತ್ತದೆ.ಇದರಿಂದಾಗಿ ರಕ್ತ ನಾಳದಲ್ಲಿ ಸರಾಗವಾಗಿ ರಕ್ತಸಂಚಾರ ಆಗುವುದಕ್ಕೆ ಸಹಾಯ ಆಗುತ್ತದೆ.
ತುಳಸಿಯಲ್ಲಿ ಯಜೆನಾಲ್‌ ಎಂಬ ರಾಸಾಯನಿಕ ಸಂಯುಕ್ತ ಹೊಟ್ಟೆ ಉರಿಯೂತವನ್ನು ಕಡಿಮೆ ಮಾಡುವುದು.

ಅರಿಶಿಣ
ಅರಿಶಿಣ ತ್ವಚೆಗೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ಗುಣಪಡಿಸುತ್ತದೆ. ಅರಿಶಿಣಕ್ಕೆ ಸ್ವಲ್ಫ ನೀರು ಬೇರೆಸಿಕೊಂಡು ಪೇಸ್ಟ್‌ ತಯಾರಿಸಿಕೊಳ್ಳಬೇಕು ಇದನ್ನು ತುರಿಕೆ , ದದ್ದುಗಳಿರುವ ಜಾಗಕ್ಕೆ ಹಚ್ಚಿ ಒಣಗಲು ಬಿಡಬೇಕು. ನಂತರ ಮತ್ತೆ ಅದರ ಮೇಲೆ ಅರಿಶಿಣವನ್ನು ಹಚ್ಚಬೇಕು ಹೀಗೆ ಪ್ರತಿನಿತ್ಯ ಮಾಡುವುದರಿಂದ ದದ್ದು, ತುರಿಕೆ ನಿವಾರಣೆ ಆಗುತ್ತದೆ.

ಇದನ್ನೂ ಓದಿ:Natural Dry Cough Medicine:ಒಣಕೆಮ್ಮು ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಪರಿಹಾರ

ಇದನ್ನೂ ಓದಿ:Insomnia Home Remedies:ನಿದ್ರಾಹೀನತೆ ಸಮಸ್ಯೆ ನಿವಾರಣೆ ಮಾಡಲು ಮನೆಮದ್ದು

ಬೇವಿನ ಎಲೆ
ಬೇವಿನ ಎಲೆಯನ್ನು ರುಬ್ಬಿಕೊಂಡು ಪೇಸ್ಟ್‌ ತಯಾರಿಸಿಕೊಳ್ಳಬೇಕು ಇದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ . ತುರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಈ ಎಲೆಗಳಲ್ಲಿ ಫಂಗಸ್‌ ಅನ್ನು ಕಡಿಮೆ ಮಾಡುವಂತಹ ಶಕ್ತಿ ಇದೆ.

Skin Problem Tips Use these tips to get rid of skin related problems

Comments are closed.