ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರಾಗಿ ಗಂಜಿ ಕುಡಿದ್ರೆ ಏನಾಗುತ್ತೆ ಗೊತ್ತಾ ?

ಜನರು ತಮ್ಮ ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರಕ್ಕೆ (Healthy food) ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಯಾಕೆಂದರೆ ಒಳ್ಳೆಯ ಆರೋಗ್ಯ, ಉತ್ತಮ ಜೀವನಕ್ಕೆ (Health tips) ಕಾರಣವಾಗಿದೆ.

ಜನರು ತಮ್ಮ ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರಕ್ಕೆ (Healthy food) ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಯಾಕೆಂದರೆ ಒಳ್ಳೆಯ ಆರೋಗ್ಯ, ಉತ್ತಮ ಜೀವನಕ್ಕೆ (Health tips) ಕಾರಣವಾಗಿದೆ. ಇನ್ನು ಬೆಳಗ್ಗೆ ಎಳುವುದರಿಂದ ಸಂಜೆ ಮಲಗುವುದರವರೆಗೂ ನಾವು ಏನನ್ನು ತಿನ್ನುತ್ತೇವೆ ? ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮಕಾರಿ ಎನ್ನುವುದು ಕೂಡ ಮುಖ್ಯವಾಗಿರುತ್ತದೆ. ಹೀಗಾಗಿ ಆರೋಗ್ಯಕರ ಜೀವನಕ್ಕಾಗಿ ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸುವುದು ಒಳ್ಳೆಯದು. ಹೆಚ್ಚಿನವರು ಬೆಳಿಗ್ಗೆ ಖಾಲಿ ಹೊಟ್ಟೆಗೆ ಏನು ತಿನ್ನಬೇಕು ? ಹೇಗೆ ತಿನ್ನಬೇಕು ? ಎಷ್ಟು ತಿನ್ನಬೇಕು ಹಾಗೂ ನಾವು ಬೆಳಿಗ್ಗೆ ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದು ಕೂಡ ಕಾರಣವಾಗುತ್ತದೆ.

ಸಾಮಾನ್ಯವಾಗಿ ಕೆಲವರು ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಬಿಸಿ ನೀರನ್ನು ಕುಡಿಯುತ್ತಾರೆ. ಇನ್ನು ಒಂದಷ್ಟು ಜನ ರಾತ್ರಿ ನೆನಸಿ ಇಟ್ಟ ಪದಾರ್ಥಗಳನ್ನು (ಡ್ರೈ ಫ್ರೂಟ್ಸ್‌, ಕಲ್ಲುಸಕ್ಕರೆ ಇತ್ಯಾದಿ) ತಿನ್ನುತ್ತಾರೆ. ಅದರಂತೆ ಒಂದಷ್ಟು ಜನ ಬೆಳಿಗ್ಗೆ ಉಪಾಹಾರಕ್ಕೆ (Health Benefits of Ragi) ರಾಗಿ ಗಂಜಿ ಅಥವಾ ರಾಗಿ ಅಂಬಲಿಯನ್ನು ಕುಡಿಯುತ್ತಾರೆ. ಈ ರೀತಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ (Ragi ganji Benefits) ರಾಗಿ ಗಂಜಿಯನ್ನು ಕುಡಿಯುವುದರಿಂದ ಏನಾಗುತ್ತದೆ. ಅದು ನಮ್ಮ ದೇಹದ ಮೇಲೆ ಏನೆಲ್ಲಾ ಪ್ರಯೋಜನವಾಗುತ್ತದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಬೆಳಿಗ್ಗೆ ಖಾಲಿ ಹೊಟ್ಟೇಲಿ ರಾಗಿ ಗಂಜಿ ಕುಡಿಯುವುದರಿಂದ ಆಗುವ ಪ್ರಯೋಜನಗಳು :

ವೇಗವಾಗಿ ತೂಕ ಕಡಿಮೆ ಆಗುತ್ತೆ :
ರಾಗಿ ಗಂಜಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹಲವು ರೀತಿಯ ಪ್ರಯೋಜನವಿದೆ. ರಾಗಿ ಗಂಜಿಯು ನಮ್ಮ ದೇಹಕ್ಕೆ ಒಂದೊಳ್ಳೆ ಪೌಷ್ಟಿಕ ಆಹಾರವಾಗಿರುತ್ತದೆ. ರಾಗಿಯು ಹೆಚ್ಚಿನ ವಿಟಮಿನ್‌ಯುಕ್ತ ಪೌಷ್ಠಿಕಾಂಶವನ್ನು ಒಳಗೊಂಡಿದ್ದು ಜೀರ್ಣಿಸಿಕೊಳ್ಳಲು ಸುಲಭ. ಹೀಗಾಗಿ ಬೆಳಿಗ್ಗೆ ತಿನ್ನುವುದರಿಂದ ನಮ್ಮ ಹೊಟ್ಟೆ ಮಧ್ಯಾಹ್ನದವರೆಗೂ ತುಂಬಿರುವಂತೆ ಭಾಸವಾಗುತ್ತದೆ. ಹಾಗೆಯೇ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ತುಂಬಾ ಹೊತ್ತಿನವರೆಗೂ ಹಸಿವೆ ಆಗದಂತೆ ಕಾಪಾಡುತ್ತದೆ. ಹೀಗಾಗಿ ವೇಗವಾಗಿ ನಮ್ಮ ದೇಹದ ತೂಕವನ್ನು ಇಳಿಸಲು ಸಹಾಯಕಾರಿ ಆಗಿದೆ.

Health Benefits of Ragi: Do you know what happens if you drink ragi porridge on an empty stomach in the morning?
Image Credit To Original Source

ಇದನ್ನೂ ಓದಿ : ನೀವು ಮುಖ ತೊಳೆಯುವಾಗ ಈ ತಪ್ಪುಗಳನ್ನು ಮಾಡದಿರಿ

ಮೂಳೆಗಳನ್ನು ಗಟ್ಟಿಯಾಗಿಸುತ್ತೆ :
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ರಾಗಿ ಗಂಜಿ ಅಥವಾ ಅಂಬಲಿಯನ್ನು ಕುಡಿಯುವುದರಿಂದ ನಮ್ಮ ಮೂಳೆ ಬೆಳವಣಿಗೆ ತುಂಬಾ ಸಹಾಯಕಾರಿ ಆಗಿರುತ್ತದೆ. ರಾಗಿಯಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶವನ್ನು ಹೊಂದಿರುವುದರಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ನೀಗಿಸುತ್ತದೆ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ-ಮುಟ್ಟಾಗಿಯೂ ಇರುತ್ತಾರೆ. ಹಾಗೆಯೇ ನಮ್ಮ ದೇಹದ ಮೂಳೆಗಳನ್ನು ಕ್ರಮೇಣ ಗಟ್ಟಿಯಾಗಿಸುತ್ತದೆ. ಹೀಗಾಗಿ ಮಕ್ಕಳಿಂದ ದೊಡ್ಡವರೆಗೂ ಮೂಳೆ ಬೆಳವಣಿಗೆಯನ್ನು ಉತ್ತಮಗೊಳಿಸಲು ರಾಗಿ ತುಂಬಾನೇ ಸಹಾಯಕಾರಿ ಆಗಿರುತ್ತದೆ.

Health Benefits of Ragi: Do you know what happens if you drink ragi porridge on an empty stomach in the morning?
Image Credit To Original Source

ಇದನ್ನೂ ಓದಿ : ಅಡುಗೆಗೆ ಬಳಸುವ ಮೆಂತೆ ಕಾಳು ತಲೆಹೊಟ್ಟು ನಿವಾರಿಸುತ್ತಾ ? ಒಮ್ಮೆ ಟ್ರೈ ಮಾಡಿದ್ರೆ ಅಚ್ಚರಿಗೊಳ್ತೀರಿ

ಖಿನ್ನತೆ, ನಿದ್ರಾಹೀನತೆಗೆ ರಾಮಬಾಣ :
ರಾಗಿ ಗಂಜಿ ಅಥವಾ ಅಂಬಲಿಯನ್ನು ಕುಡಿಯುವುದರಿಂದ ನಮ್ಮ ದೇಹವನ್ನು ಸದಾ ತಂಪಾಗಿಸಿರುತ್ತದೆ. ಹೀಗಾಗಿ ನಮ್ಮಲ್ಲಿ ಕಾಡುವ ಖಿನ್ನತೆಯನ್ನು ದೂರ ಮಾಡುತ್ತದೆ. ಹಾಗೆಯೇ ನಿದ್ರಾಹೀನತೆಯಿಂದ ಬಳಲುತ್ತಿದ್ದರಿಂದ ಅಮಲಿನಂತೆ ನಿದ್ರೆ ಬರುವಂತೆ ಮಾಡುತ್ತದೆ. ನಿದ್ರಾ ಹೀನತೆಯಿಂದ ಬಳಲುತ್ತಿದ್ದವರಿಗೆ ರಾಗಿ ಉತ್ತಮ ಮನೆಮದ್ದು ಎಂದರೆ ತಪ್ಪಾಗಲ್ಲ ಅದರಲ್ಲೂ ಬೆಳಿಗ್ಗೆ ಮತ್ತು ರಾತ್ರಿ ಮಲಗುವಾಗ ರಾಗಿ ಅಂಬಲಿ ಸೇವನೆಯಿಂದ ಉತ್ತಮ ನಿದ್ರೆಯನ್ನು ಪಡೆಯಬಹುದು.

Health Benefits of Ragi: Do you know what happens if you drink ragi porridge on an empty stomach in the morning?
Image Credit To Original Source

ರಕ್ತಹೀನತೆ ತಡೆಗಟ್ಟುತ್ತೆ :
ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಸವನ್ನು ಹೊಂದಿರುವುದರಿಂದ ನಮ್ಮ ದೇಹದಲ್ಲಿ ರಕ್ತಹೀನತೆಯನ್ನು ದೂರಮಾಡುತ್ತದೆ. ಹೀಗಾಗಿ ಸತತವಾಗಿ ರಾಗಿ ಅಂಬಲಿ, ರಾಗಿ ಜ್ಯೂಸ್‌ನ್ನು ಕುಡಿಯುವುದರಿಂದ ರಕ್ತಹೀನತೆಯನ್ನು ಸರಿಪಡಿಸಿಕೊಳ್ಳಬಹುದು.

Health Benefits of Ragi: Do you know what happens if you drink ragi porridge on an empty stomach in the morning?
Image Credit To Original Source

Health Benefits of Ragi: Do you know what happens if you drink ragi porridge on an empty stomach in the morning?

Comments are closed.