Benefits of Banana : ಒಂದು ಬಾಳೆಹಣ್ಣಿನಲ್ಲಿ ಅಡಗಿದೆ ಅಗಾಧ ಪ್ರಮಾಣದ ಆರೋಗ್ಯಕರ ಅಂಶ

Benefits of Banana :ಬಾಳೆ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ಹಣ್ಣು. ಅಲ್ಲದೇ ವಿಶ್ವದಲ್ಲೇ ಬೆಳೆಯುವ ಅತ್ಯಂತ ಪ್ರಮುಖ ಹಣ್ಣುಗಳಲ್ಲಿ ಬಾಳೆ ಹಣ್ಣು ಸಹ ಒಂದಾಗಿದೆ. ಕೇವಲ ಬಾಯಿ ರುಚಿಗೆ ಮಾತ್ರವಲ್ಲದೇ ಅಗಾಧವಾದ ಪೋಷಕಾಂಶಗಳಿಂದಾಗಿ ಈ ಹಣ್ಣನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದನ್ನು ಕೇಕ್​ ಹಾಗೂ ಮಿಲ್ಕ್​ಶೇಕ್​ಗಳಲ್ಲಿ ರುಚಿ ಹೆಚ್ಚಿಸಲು ಬಳಸೋದು ಮಾತ್ರವಲ್ಲದೇ ಇದನ್ನು ಡಯಟ್​ ಫುಡ್​ ಆಗಿ ಸಹ ಬಳಸಬಹುದು.
ಹಾಗಾದರೆ ಬಾಳೆಹಣ್ಣಿನ ಸೇವನೆಯಿಂದ ಏನೇನು ಲಾಭವಿದೆ ಎಂಬುದನ್ನು ತಿಳಿದುಕೊಳ್ಳೋಣ:
ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ :
ಬಾಳೆ ಹಣ್ಣುಗಳಲ್ಲಿ ಹೇರಳ ಪ್ರಮಾಣದಲ್ಲಿ ಕರಗುವ ಫೈಬರ್​ ಅಡಗಿದೆ. ಇನ್ನೂ ಬಲಿತಾಗದ ಬಾಳೆಯಲ್ಲಿ ದೇಹದಿಂದ ಜೀರ್ಣವಾಗದ ನಿರೋಧಕ ಪಿಷ್ಟವಿದೆ. ಈ ಎರಡು ಫೈಬರ್​ಗಳು ನಿಮ್ಮ ದೇಹದಲ್ಲಿ ಒಟ್ಟಾರೆ ಸಕ್ಕರೆ ಅಂಶವನ್ನು ಕಡಿಮೆ ಮಾಡು್ತ್ತದೆ. ದಿನಕ್ಕೆ ಎರಡು ಬಾಳೆ ಹಣ್ಣನ್ನು ಸೇವನೆ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಹೃದಯದ ಆರೋಗ್ಯಕ್ಕೆ ಸೂಕ್ತ:
ಬಾಳೆ ಹಣ್ಣಿನಲ್ಲಿ ಪೋಟ್ಯಾಷಿಯಂ ಅಗಾಧ ಪ್ರಮಾಣದಲ್ಲಿದೆ. ಪೊಟ್ಯಾಷಿಯಂ ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಿಂದ ನಿಮ್ಮ ರಕ್ತದೊತ್ತಡ ಕೂಡ ಕಡಿಮೆಯಾಗುತ್ತದೆ. ಮಧ್ಯಮ ಗಾತ್ರದ ಬಾಳೆ ಹಣ್ಣು ದಿನನಿತ್ಯ ದೇಹಕ್ಕೆ ಬೇಕಾಗುವ ಪೋಟ್ಯಾಷಿಯಂನಲ್ಲಿ 10 ಪ್ರತಿಶತವನ್ನು ಪೂರೈಸುತ್ತದೆ.
ಚರ್ಮದ ಆರೋಗ್ಯಕ್ಕೆ ಸೂಕ್ತ:
ನಿಮಗೆ ಈ ಮಾತನ್ನು ಕೇಳಿದ್ರೆ ಆಶ್ಚರ್ಯ ಎನಿಸಬಹುದು. ಆದರೆ ಬಾಳೆ ಹಣ್ಣಿನ ಸಿಪ್ಪೆ ನಿಮ್ಮ ತ್ವಚೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ನಿಮಗೆ ಮೊಡವೆ ಅಥವಾ ಚರ್ಮ ಸಂಬಂಧಿ ಸೋಂಕು ಇದ್ದಲ್ಲಿ ನೀವು ಸೋಂಕು ಇರುವ ಜಾಗದಲ್ಲಿ ಅಥವಾ ಮೊಡವೆ ಇರುವ ಪ್ರದೇಶದಲ್ಲಿ ಐದು ನಿಮಿಷಗಳ ಕಾಲ ಬಾಳೆ ಹಣ್ಣಿನ ಸಿಪ್ಪೆಯಿಂದ ಮಸಾಜ್​ ಮಾಡಿಕೊಳ್ಳಿ. ಬಾಳೆ ಹಣ್ಣಿನ ಸಿಪ್ಪೆಯ ಜೊತೆಯಲ್ಲಿ ಅಲೋವೇರಾ ಜೆಲ್​ನ್ನು ಮಿಶ್ರಣ ಮಾಡಿಕೊಳ್ಳಿ ಇದನ್ನು ನಿಮ್ಮ ಕಣ್ಣಿನ ಮೇಲೆ ಇಟ್ಟುಕೊಂಡಲ್ಲಿ ಡಾರ್ಕ್​ ಸರ್ಕಲ್​ ಕೂಡ ವಾಸಿಯಾಗಲಿದೆ.

These Benefits of Banana will Force You to Include the Fruit in Your Diet

ಇದನ್ನು ಓದಿ: Good News: ಸಯಾಮಿ ಅವಳಿಗಳಿಗೆ ಸಿಕ್ಕಿತು ಸರ್ಕಾರಿ ಕೆಲಸ; ಜೀವನವನ್ನು ಧನಾತ್ಮಕವಾಗಿ ನೋಡಲು ಇವರೇ ಮಾದರಿ

ಇದನ್ನೂ ಓದಿ : Winter Hair Care Tips : ಚಳಿಗಾಲದಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿಗೆ ಇಲ್ಲಿದೆ ಮನೆಮದ್ದು

Comments are closed.