protect your kids from heatwaves : ಉಷ್ಣ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಪೋಷಕರಿಗೆ ಇಲ್ಲಿದೆ ಸಲಹೆ

protect your kids from heatwaves : ದೇಶದಲ್ಲಿ ಈ ಬಾರಿ ಉಷ್ಣ ಅಲೆ ಅಧಿಕವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದೆ. ಮಿತಿ ಮೀರಿದ ಸೆಖೆಯಿಂದಾಗಿ ಜನರ ಸ್ಥಿತಿಯಂತೂ ಕೇಳತೀರದು ಎಂಬಂತಾಗಿದೆ. ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗಗಳಲ್ಲಿ ನಿಗಿ ನಿಗಿ ಕೆಂಡ ಕಾರುವ ಸೂರ್ಯನ ಶಾಖವು ಮಕ್ಕಳು ವೃದ್ಧರೆನ್ನದೇ ಎಲ್ಲರಿಗೂ ತೊಂದರೆಯನ್ನುಂಟು ಮಾಡುತ್ತಿದೆ.


ಮೊದಲೇ ಬೇಸಿಗೆಯೆಂದರೆ ಸೆಖೆಯ ಕಾಟ. ಅಂತದ್ರಲ್ಲಿ ಈ ಬಾರಿ ಬೇರೆ ಮೊದಲಿನಿಗಿಂತ ಉಷ್ಣ ಅಲೆ ಹೆಚ್ಚಿರಲಿದೆ ಎಂದು ಐಎಂಡಿ ಸೂಚನೆ ನೀಡಿದೆ. ಮಕ್ಕಳಿಗೆ ಬೇಸಿಗೆ ರಜೆ ಕೂಡ ಆರಂಭವಾಗಿರೋದ್ರಿಂದ ಅವರು ಒಂದೆಡೆ ಕೂರದೇ ಬಿಸಿಲಿನಲ್ಲಿ ಓಡಾಡುತ್ತಿರುತ್ತಾರೆ. ಆದರೆ ಹೆಚ್ಚುತಿರುವ ತಾಪಮಾನವು ಮಕ್ಕಳಲ್ಲಿ ನಿರ್ಜಲೀಕರಣ, ಚರ್ಮದ ಅಲರ್ಜಿ, ಜ್ವರ, ಭೇದಿ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನುಂಟು ಮಾಡಬಹುದು. ಹೀಗಾಗಿ ನಿಮ್ಮ ಮಕ್ಕಳನ್ನು ಉಷ್ಣ ಅಲೆಯಿಂದ ಕಾಪಾಡಿಕೊಳ್ಳಲು ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ ನೋಡಿ :


ಚೆನ್ನಾಗಿ ನೀರು ಕುಡಿಸಿ :


ಅತಿಯಾದ ಸೆಖೆಯು ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆಯನ್ನು ತಂದೊಡ್ಡಬಹುದು. ಇದರಿಂದ ತಲೆನೋವು, ವಾಕರಿಕೆ ಹಾಗೂ ಇತರೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಕ್ಕಳು ಬೇಸಿಗೆ ಸಮಯದಲ್ಲಿ ಹೆಚ್ಚೆಚ್ಚು ದ್ರವ ರೂಪದ ಆಹಾರಗಳನ್ನು ಸೇವನೆ ಮಾಡಿದಲ್ಲಿ ನಿರ್ಜಲೀಕರಣದಿಂದ ಪಾರಾಗಬಹುದಾಗಿದೆ. ನಿಮ್ಮ ಮಗುವಿಗೆ ಬಾಯಾರಿಕೆಯಿಲ್ಲದಿದ್ದರೂ ಸಹ ದಿನಕ್ಕೆ ಕನಿಷ್ಟ 3-4 ಲೀಟರ್​ ನೀರನ್ನು ಕುಡಿಸಿ. ಮಕ್ಕಳಿಗೆ ನೀವು ಎಳನೀರುಮ ನಿಂಬು ಪಾನೀಯ, ಬೆಲ್ಲದ ಪಾನಕ ಅಥವಾ ಯಾವುದೇ ಮಿಲ್ಕ್​ ಶೇಕ್​ಗಳನ್ನು ನೀವು ಮನೆಯಲ್ಲಿಯೇ ತಯಾರಿಸಿ ನೀಡಬಹುದು.


ಹೊರಾಂಗಣ ಚಟುವಟಿಕೆಗಳನ್ನು ನಿಯಂತ್ರಿಸಿ


ಬೇಸಿಗೆ ರಜೆ ಬೇರೆ ಇರುವುದರಿಂದ ಮಕ್ಕಳು ಸ್ನೇಹಿತರ ಜೊತೆಯಲ್ಲಿ ಹೊರಗಡೆ ಆಡಲು ಹೆಚ್ಚು ಇಷ್ಟ ಪಡುತ್ತಾರೆ. ಮಧ್ಯಾಹ್ನದ ವೇಳೆಯಲ್ಲಿ ಸೆಖೆ ಅತಿಯಾಗಿ ಇರುವುದರಿಂದ ಈ ಸಮಯವು ಮಕ್ಕಳಿಗೆ ಹೊರಾಂಗಣ ಆಟವನ್ನಾಡಲು ಸೂಕ್ತವಲ್ಲ. ಬೇಸಿಗೆಯ ಸಮಯದಲ್ಲಿ ಸೂರ್ಯನ ಶಾಖವು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅತಿಯಾಗಿ ಇರುತ್ತದೆ. ಹೀಗಾಗಿ ಮಕ್ಕಳನ್ನು ಸಂಜೆ ವೇಳೆ ಮಾತ್ರ ಹೊರಗೆ ಬಿಡಿ.


ಸನ್​ ಸ್ಕ್ರೀನ್​ ಬಳಕೆ :


ಸನ್​ ಸ್ಕ್ರೀನ್​ಗಳನ್ನು ಕೇವಲ ವಯಸ್ಕರು ಮಾತ್ರ ಬಳಸಬೇಕು ಎಂದೇನಿಲ್ಲ. ಇದು ಮಕ್ಕಳಿಗೂ ಕೂಡ ಅತ್ಯವಶ್ಯಕವಾಗಿ ಬೇಕು. ವಯಸ್ಕರಿಗಿಂತ ಮಕ್ಕಳ ತ್ವಚೆ ಇನ್ನೂ ಸೂಕ್ಷ್ಮ ಎಂಬುದು ಗಮನದಲ್ಲಿರಲಿ. ಅತಿಯಾದ ಸೂರ್ಯನ ಶಾಖವು ಮಕ್ಕಳಲ್ಲಿ ಚರ್ಮದ ಅಲರ್ಜಿಯನ್ನು ಉಂಟು ಮಾಡಬಹುದು. ಹೀಗಾಗಿ ಮಕ್ಕಳು ಮನೆಯಿಂದ ಹೊರಗೆ ಕಾಲಿಡುವ ಮುನ್ನ ಅವರಿಗೆ ಸನ್​ ಸ್ಕ್ರೀನ್​ಗಳನ್ನು ಹಚ್ಚಿ ಕಳುಹಿಸಿ. ಶಾಖ ಹೆಚ್ಚಿದ್ದ ಸಂದರ್ಭಗಳಲ್ಲಿ ಛತ್ರಿಗಳನ್ನು ಬಳಸುವಂತೆ ಸಲಹೆ ನೀಡಿ.


ಹತ್ತಿ ಬಟ್ಟೆಯನ್ನೇ ಧರಿಸಲು ನೀಡಿ :


ಬೇಸಿಗೆಯ ಸಂದರ್ಭದಲ್ಲಿ ಮಕ್ಕಳಿಗೆ ಸೂಕ್ತವಾದ ಉಡುಪುಗಳನ್ನು ಧರಿಸಲು ನೀಡುವುದು ಕೂಡ ಮುಖ್ಯವಾಗಿದೆ . ಮಕ್ಕಳಿಗೆ ಹೆಚ್ಚಾಗಿ ಹತ್ತಿ ಬಟ್ಟೆಯನ್ನೇ ಧರಿಸಲು ನೀಡಿ. ಕಪ್ಪು ಬಣ್ಣವು ಉಷ್ಣವನ್ನು ಹೆಚ್ಚು ಸೆಳೆಯುವುದರಿಂದ ಬೇಸಿಗೆ ಮುಗಿಯುವವರೆಗೂ ಮಕ್ಕಳಿಗೆ ಕಪ್ಪು ಬಣ್ಣದ ಬಟ್ಟೆ ಧರಿಸಲು ನೀಡಬೇಡಿ.

ಇದನ್ನು ಓದಿ : Immunity Power : ಮನೆಯಲ್ಲಿರುವ ಈ ವಸ್ತುಗಳನ್ನು ತಿಂದ್ರೆ ಹೆಚ್ಚುತ್ತೆ ರೋಗನಿರೋಧಕ ಶಕ್ತಿ

ಇದನ್ನೂ ಓದಿ : Mental Health Tips : ನಿಮ್ಮ ಮನಸ್ಸು ಶುದ್ಧಿಕರಿಸಲು ಈ 5 ಸರಳ ದಾರಿಗಳನ್ನು ಅಳವಡಿಸಿಕೊಳ್ಳಿ!!

tips to protect your kids from heatwaves

Comments are closed.