kichcha sudeep vs ajay devgn : ಕಿಚ್ಚ ಸುದೀಪ- ಅಜಯ್​ ದೇವಗನ್​ ನಡುವೆ ಭಾಷಾ ವಾರ್​ ಶುರುವಾಗಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ನಡೆಯುತ್ತಿರುವ ಹೋರಾಟ ನಿನ್ನೆ ಮೊನ್ನೆಯದ್ದಲ್ಲ. ಈ ನಡುವೆ ಈಗಾಗಲೇ ಸಾಕಷ್ಟು ಚರ್ಚೆಗಳು, ವಾದ – ವಿವಾದಗಳು ನಡೆದು ಹೋಗಿವೆ. ಆದರೆ ಇದೀಗ ನಟ ಕಿಚ್ಚ ಸುದೀಪ ಹಾಗೂ ಅಜಯ್​ ದೇವಗನ್​ (kichcha sudeep vs ajay devgn) ಈ ಚರ್ಚೆಯನ್ನು ಮತ್ತೊಮ್ಮೆ ಹುಟ್ಟು ಹಾಕಿದ್ದಾರೆ. ಇಬ್ಬರ ನಡುವೆ ಶುರುವಾದ ಟ್ವೀಟ್​ ವಾರ್​ ಇದೀಗ ರಾಷ್ಟ್ರ ಮಟ್ಟದಲ್ಲಿ ಹೊಸದೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ನಟ ಕಿಚ್ಚ ಸುದೀಪರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ನಟಿ ರಮ್ಯಾ ಸೇರಿದಂತೆ ಅನೇಕರು ತಮ್ಮ ಸಾಥ್​ ನೀಡಿದ್ದಾರೆ.


ವಿವಾದ ಶುರುವಾಗಿದ್ದು ಹೇಗೆ..?
ನಟ ಉಪೇಂದ್ರ ಹಾಗೂ ರಾಮ್​ ಗೋಪಾಲ್​ ವರ್ಮಾ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಐ ಆ್ಯಂ ಆರ್​ ಸಿನಿಮಾದ ಟ್ರೇಲರ್​ ಹಾಗೂ ಫಸ್ಟ್​ ಲುಕ್​ ಲಾಂಚ್​ ಕಾರ್ಯಕ್ರಮಕ್ಕೆ ನಟ ಸುದೀಪ ಕೂಡ ತೆರಳಿದ್ದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಸುದೀಪ್​ ಪ್ಯಾನ್​ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡುವಾಗ ಕನ್ನಡ ಸಿನಿಮಾಗಳು ಹಿಂದಿಗೆ ಡಬ್​ ಆದ ಕೂಡ ಅದನ್ನು ಪ್ಯಾನ್​ ಇಂಡಿಯಾ ಸಿನಿಮಾ ಎನ್ನಬೇಡಿ. ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ನಿಜ ಹೇಳಬೇಕು ಅಂದರೆ ಹಿಂದಿಯವರೇ ಪ್ಯಾನ್​ ಇಂಡಿಯಾ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದರು.


ಸುದೀಪ್​ ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದನ್ನೇ ದೊಡ್ಡ ವಿಚಾರ ಎಂಬಂತೆ ಬಿಂಬಿಸಿದ ನಟ ಅಜಯ್​ ದೇವಗನ್​ ಟ್ವೀಟ್​ನಲ್ಲಿ, ನನ್ನ ಸಹೋದರ ಕಿಚ್ಚ ಸುದೀಪ, ಹಿಂದಿ ನಿಮ್ಮ ರಾಷ್ಟ್ರ ಭಾಷೆ ಅಲ್ಲ ಎಂದಮೇಲೆ ನೀವೇಕೆ ನಿಮ್ಮ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡಿ ರಿಲೀಸ್​ ಮಾಡುತ್ತೀರಿ..? ನಮ್ಮ ಮಾತೃಭಾಷೆಯಾದ ಹಿಂದಿಯು ಈ ಹಿಂದೆಯೂ ರಾಷ್ಟ್ರ ಭಾಷೆಯಾಗಿತ್ತು. ಮುಂದೆಯೂ ರಾಷ್ಟ್ರ ಭಾಷೆಯಾಗಿ ಇರಲಿದೆ ಎಂದು ಹೇಳಿದ್ದರು.


ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ, ಅಜಯ್​ ದೇವಗನ್​ ಸರ್​, ನಾನು ಹೇಳಿದ್ದನ್ನು ನೀವು ಬೇರೆ ರೀತಿಯಲ್ಲೇ ಅರ್ಥ ಮಾಡಿಕೊಂಡಿದ್ದೀರಿ. ನಾನು ನಿಮ್ಮನ್ನು ಖುದ್ದಾಗಿ ಭೇಟಿಯಾಗಿ ಈ ಬಗ್ಗೆ ವಿವರಣೆ ನೀಡುತ್ತೇನೆ ಎಂದು ಟ್ವೀಟಾಯಿಸಿದ್ದರು. ಆದರೆ ಇಲ್ಲಿಗೆ ಸುಮ್ಮನಾಗದ ಕಿಚ್ಚ ಸುದೀಪ ಮತ್ತೊಂದು ಟ್ವೀಟ್​ ಮಾಡಿ, ಇನ್ನೊಂದು ಮಾತು ಅಜಯ್​ ದೇವಗನ್​ ಸರ್​, ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್​ ನನಗೆ ಅರ್ಥವಾಯಿತು. ನಾವು ಹಿಂದಿಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ , ನಾವು ಹಿಂದಿಯನ್ನು ಕಲಿತಿದ್ದೇವೆ. ಆದರೆ ಇದೇ ಟ್ವೀಟ್​ನ್ನು ನಾನು ಕನ್ನಡದಲ್ಲಿಯೇ ಮಾಡುತ್ತಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತಿತ್ತು…? ನಾವೂ ಭಾರತಕ್ಕೆ ಸೇರಿದವರೇ ಅಲ್ಲವೇ ಸರ್​..? ಎಂದು ಪ್ರಶ್ನಿಸಿದ್ದರು.


ಈ ಟ್ವೀಟ್​ ಸರಣಿಗೆ ಅಂತ್ಯ ಹಾಡಲು ಮುಂದಾದ ಅಜಯ್​ ದೇವಗನ್, ತಪ್ಪು ತಿಳುವಳಿಕೆಯ ವಿಷಯವನ್ನು ತಿಳಿಗೊಳಿಸಿದ್ದಕ್ಕೆ ಧನ್ಯವಾದಗಳು ಸುದೀಪ್​, ಚಿತ್ರರಂಗ ಅಂದಮೇಲೆ ನಾವೆಲ್ಲರೂ ಒಂದು. ನಾವು ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇವೆ. ಅನುವಾದದಲ್ಲಿ ಏನೋ ತಪ್ಪಾಗಿ ಈ ರೀತಿ ಆಗಿರಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : kichcha sudeep : ಅಜಯ್​ ದೇವಗನ್​- ಕಿಚ್ಚ ಸುದೀಪ್​ ಹಿಂದಿ ವಾರ್​..! ನಾವೂ ಭಾರತೀಯರಲ್ಲವೇ ಎಂದ ಅಭಿನಯ ಚಕ್ರವರ್ತಿ

ಇದನ್ನೂ ಓದಿ : Thanjavur : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್‌ ಅವಘಡ : 11 ಮಂದಿ ದುರ್ಮರಣ

kichcha sudeep vs ajay devgn this is how controversy about hindi and national language controversy started

Comments are closed.