Tomato soup: ಟೊಮೇಟೋ ಸೂಪ್‌ ಕುಡಿಯೋದ್ರಿಂದ ಇದೆ ಹಲವಾರು ಪ್ರಯೋಜನ

(Tomato soup) ಚಳಿಗಾಲದಲ್ಲಿ ಬೆಚ್ಚಗಿನ ಆಹಾರ ಸೇವನೆ ಮಾಡಲು ಮನಸ್ಸು ಬಯಸುತ್ತದೆ. ಬಿಸಿ ಬಿಸಿ ಟೀ, ಕಾಫಿ ಸೇವನೆ ಮಾಡಲು ಮನಸ್ಸು ಹಾತೊರೆಯುತ್ತದೆ. ಆಗಾಗ ಬಿಸಿ ಟೀ, ಕಾಫಿ ಸೇವನೆ ಮಾಡೋದು ಆರೋಗ್ಯಕ್ಕೆ ಹಾನಿಕರ. ಹಾಗಾಗಿ ಈ ಸಮಯದಲ್ಲಿ ನಾವು ಸೂಪ್ ಗೆ ಹೆಚ್ಚಿನ ಆಧ್ಯತೆ ನೀಡಬಹುದು. ಸೂಪ್ ದೇಹಕ್ಕೆ ಬಿಸಿ ಅನುಭವ ನೀಡುವ ಜೊತೆಗೆ ನಮ್ಮ ಆರೋಗ್ಯವನ್ನು ಸುಧಾರಿಸಲು ಕೂಡ ನೆರವಾಗುತ್ತದೆ. ಚಳಿಗಾಲದ ಸಮಯದಲ್ಲಿ ವಿವಿಧ ತರಕಾರಿಗಳ ಸೂಪ್ ತಯಾರಿಸಿಕೊಂಡು ತಿನ್ನಬಹುದು. ತರಕಾರಿ ಸೂಪ್ ಗಿಂತಲೂ ಟೊಮೊಟೊ ಸೂಪ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ.

ಟೊಮೊಟೊ ಸೂಪ್‌(Tomato soup)ನ ರುಚಿ ಅದ್ಭುತವಾಗಿರುತ್ತದೆ. ಚಳಿಗಾಲದಲ್ಲಿ ನೀವು ಟೊಮೊಟೊ ಸೂಪ್ ಸೇವನೆ ಮಾಡೋದ್ರಿಂದ ಸಾಕಷ್ಟು ಪ್ರಯೋಜನವಿದೆ. ಇಲ್ಲಿ ನೀವು ಟೊಮೇಟೊ ಸೂಪ್‌ ಅನ್ನು ಮನೆಯಲ್ಲೇ ಹೇಗೆ ತಯಾರಿಸಬಹುದು ಹಾಗೂ ಟೊಮೊಟೊ ಸೂಪ್ ಸೇವನೆ ಮಾಡೋದ್ರಿಂದ ಏನೆಲ್ಲ ಲಾಭವಿದೆ ಎಂಬುದನ್ನು ನೀವು ತಿಳಿಯಬಹುದು. ಮೊದಲಿಗೆ ನಾವು ಟೊಮೇಟೊ ಸೂಪ್‌ ಮಾಡುವ ವಿಧಾನವನ್ನು ತಿಳಿಯೋಣ.

ಸೂಪ್‌ ಮಾಡಲು ಬೇಕಾಗುವ ಸಾಮಾಗ್ರಿಗಳು
4 – 5 ಮಧ್ಯಮ ಗಾತ್ರದ ಟೊಮೆಟೊಗಳು
2 ಎಸಳು ಬೆಳ್ಳುಳ್ಳಿ
1 ಮಧ್ಯಮ ಗಾತ್ರದ ಈರುಳ್ಳಿ
1/2 ಕ್ಯಾರೆಟ್
2 ಟೀಸ್ಪೂನ್ ಬೆಣ್ಣೆ
1/2 ಟೀಸ್ಪೂನ್ ಕರಿಮೆಣಸು
1/2 ಟೀಸ್ಪೂನ್ ಉಪ್ಪು
1 ಕಪ್ ನೀರು
1 ಟೀಸ್ಪೂನ್ ಕಾರ್ನ್ ಫ್ಲೋರ್ ಅಥವಾ ಮೈದಾ ಅಥವಾ 1 ಬೆರಳು ಗಾತ್ರದ ಆಲೂಗಡ್ಡೆ
1/4 – 1/2 ಟೀಸ್ಪೂನ್ ಸಕ್ಕರೆ (ಬೇಕಾದಲ್ಲಿ)
1 ಟೀಸ್ಪೂನ್ ತಾಜಾ ಕೆನೆ (ಬೇಕಾದಲ್ಲಿ)
1 ಬ್ರೆಡ್ ಸ್ಲೈಸ್ (ಬೇಕಾದಲ್ಲಿ)

ಟೊಮೇಟೊ ಸೂಪ್ ಮಾಡುವ ವಿಧಾನ:
ಬೆಳ್ಳುಳ್ಳಿ, ಈರುಳ್ಳಿ, ಕ್ಯಾರೆಟ್ ಮತ್ತು ಟೊಮೆಟೊಗಳನ್ನು ಕತ್ತರಿಸಿಟ್ಟುಕೊಳ್ಳಿ. ಮೊದಲಿಗೆ ಒಂದು ಬಾಣಲೆಯಲ್ಲಿ 2 ಚಮಚ ಬೆಣ್ಣೆಯನ್ನು ಹಾಕಿ ಬಿಸಿಮಾಡಿ. ಬೆಣ್ಣೆ ಕರಗಿದ ಕೂಡಲೇ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ಕ್ಯಾರೆಟ್ ಹಾಕಿ ಒಂದೆರಡು ನಿಮಿಷ ಬಾಡಿಸಿ. ಆಲೂಗಡ್ಡೆ ಹಾಕುವುದಾದಲ್ಲಿ ಈ ಸಮಯದಲ್ಲೇ ಹಾಕಿ. ಈಗ ಅದೇ ಬಾಣಲೆಗೆ ಕತ್ತರಿಸಿದ ಟೊಮೆಟೊ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ. ಉಪ್ಪು ಮತ್ತು ಕರಿ ಮೆಣಸು ಸೇರಿಸಿ, ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿ. ಹುರಿದ ಪದಾರ್ಥಗಳು ತಣ್ಣಗಾದ ಕೂಡಲೇ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದು ಕೊಳ್ಳಿ. ಜ್ಯೂಸು ಸೋಸುವ ಜರಡಿ ಉಪಯೋಗಿಸಿ, ಅರೆದ ಮಿಶ್ರಣವನ್ನು ಸೋಸಿರಿ. ಮೇಲಿನಿಂದ ಸ್ವಲ್ಪ ನೀರು ಸೇರಿಸಿ, ಒಂದು ಚಮಚದ ಸಹಾಯದಿಂದ ಚೆನ್ನಾಗಿ ಸೋಸಿ. ಸೋಸಿದ ಟೊಮೇಟೊ ರಸವನ್ನು ಒಂದು ಪಾತ್ರೆಗೆ ಹಾಕಿ. ಉಳಿದ ನೀರು ಸೇರಿಸಿ ಕುದಿಯಲು ಇಡಿ. ಕಾರ್ನ್ ಫ್ಲೋರ್ ನ್ನು ಸ್ವಲ್ಪ ನೀರಿನಲ್ಲಿ ಕಲಸಿ ಹಾಕಿ. ಮೈದಾ ಹಿಟ್ಟು ಉಪಯೋಗಿಸುತ್ತೀರಾದರೆ, ಒಂದು ಚಮಚ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಹಾಲಿನಲ್ಲಿ ಕಲಸಿದ ಮೈದಾ ಹಿಟ್ಟು ಹಾಕಿ, ಕುದಿಸಿ, ನಂತರ ಟೊಮೇಟೊ ರಸ ಸೇರಿಸಿ. ಸೂಪ್ ಚೆನ್ನಾಗಿ ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆಫ್ ಮಾಡಿ. ಬೇಕಾದಲ್ಲಿ ಹಾಲಿನ ಕೆನೆ (ಫ್ರೆಶ್ ಕ್ರೀಮ್) ಅಥವಾ ಹುರಿದ ಬ್ರೆಡ್ ಚೂರುಗಳಿಂದ ಅಲಂಕರಿಸಿ. ಟೊಮೇಟೊ ಸೂಪನ್ನು ಬಿಸಿಯಾಗಿರುವಾಗಲೇ ಬಡಿಸಿ, ಕುಡಿಯಿರಿ.

ಟೊಮೇಟೊ ಸೂಪ್‌ ಕುಡಿಯೋದ್ರಿಂದ ಅಗುವ ಪ್ರಯೋಜನಗಳು ಈ ಕೆಳಗಿನಂತಿವೆ:

ಟೊಮೇಟೊ ಸೂಪ್‌ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ
ಚಳಿಗಾಲದಲ್ಲಿ ಖಾಯಿಲೆ ಹೆಚ್ಚು. ಬಹುತೇಕರು ಋತುವಿನಲ್ಲಿ ಕಾಣಿಸಿಕೊಳ್ಳುವ ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಾರೆ. ಆಗಾಗ ಖಾಯಿಲೆ ಬೀಳೋದು ಹೆಚ್ಚು. ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕೂಡ ಹದಗೆಡುತ್ತೆ ಎನ್ನುವವರು ಡಯಟ್ ನಲ್ಲಿ ಟೊಮೆಟೊ ಸೂಪ್ ಸೇರಿಸಿ. ಇದ್ರಿಂದ ದೊಡ್ಡ ಮಟ್ಟದ ಪರಿಹಾರ ಸಿಗುತ್ತದೆ. ಟೊಮೊಟೊದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ನಮಗೆ ಶಕ್ತಿ ನೀಡುವ ಜೊತೆಗೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ದೇಹದಲ್ಲಿನ ಉಷ್ಣತೆಯನ್ನು ಸರಿತೂಗಿಸುವಲ್ಲಿ ಟೊಮೇಟೊ ಸೂಪ್‌ ಸಹಾಯಕಾರಿ
ಚಳಿಗಾಲದಲ್ಲಿ ಶೀತದಿಂದಾಗಿ ನಮ್ಮ ದೇಹದ ಉಷ್ಣತೆಯಲ್ಲಿ ಏರುಪೇರಾಗುತ್ತದೆ. ಚಳಿಯಿಂದ ಬಳಲುವವರು ದೇಹವನ್ನು ಬಿಸಿ ಮಾಡಲು ಟೀ, ಕಾಫಿ ಸೇವನೆ ಮಾಡ್ತಾರೆ. ಆದ್ರೆ ಇದು ಕೆಲ ಸಮಯ ಮಾತ್ರ ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ಹಾಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಿಸುತ್ತದೆ. ಆದ್ರೆ ಟೊಮೊಟೊ ಸೂಪ್ ನಮ್ಮ ದೇಹವನ್ನು ಬೆಚ್ಚಗಿಡುವ ಜೊತೆಗೆ ನಿರ್ಜಲೀಕರಣ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಟೊಮೇಟೊ ಸೂಪ್‌ ನಿಯಂತ್ರಿಸುತ್ತೇ ನಿಮ್ಮ ದೇಹತೂಕ
ಚಳಿಗಾಲದಲ್ಲಿ ಹಸಿವು ಹೆಚ್ಚು. ಇದೇ ಕಾರಣಕ್ಕೆ ಅನೇಕರು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮಾಡ್ತಾರೆ. ಜೊತೆಗೆ ಚಳಿ ಕಾರಣಕ್ಕೆ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಇದ್ರಿಂದ ತೂಕ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ತೂಕ ನಿಯಂತ್ರಣದಲ್ಲಿರಬೇಕು, ಹೊಟ್ಟೆ ತುಂಬಿದ ಅನುಭವವಾಗ್ಬೇಕು ಎನ್ನುವವರು ಟೊಮೆಟೊ ಸೂಪ್ ಸೇವಿಸಿ. ಅದು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಟೊಮೊಟೊ ಸೂಪ್ ನಲ್ಲಿ ಕಡಿಮೆ ಕ್ಯಾಲೋರಿಯಿದೆ. ಇದ್ರಲ್ಲಿರುವ ಫೈಬರ್ ಅಂಶವು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ನೀವು ಹೆಚ್ಚು ತಿನ್ನೋದು ನಿಯಂತ್ರಣಕ್ಕೆ ಬರುತ್ತದೆ.

ಇದನ್ನೂ ಓದಿ : Toothache Home Remedies : ಹಲ್ಲು ನೋವು, ಹಲ್ಲು ಹುಳುಕು ಸಮಸ್ಯೆಗೆ ಪರಿಹಾರ ಈ 5 ಮನೆಮದ್ದು

ಇದನ್ನೂ ಓದಿ : Tomato: ತಲೆಹೊಟ್ಟಿನ ಸಮಸ್ಯೆಗೆ ಟೊಮೇಟೊ ಹಣ್ಣು!

ದೇಹದಲ್ಲಿನ ವಿಷದ ಅಂಶವನ್ನು ಹೊರಹಾಕುವಲ್ಲಿ ಟೊಮೇಟೊ ಸೂಪ್‌ ಸಹಾಯಕಾರಿ
ಚಳಿಗಾಲದಲ್ಲಿ ಟೊಮೆಟೊ ಸೂಪ್‌ ಸೇವನೆ ಮಾಡೋದ್ರಿಂದ ದೇಹದಲ್ಲಿರುವ ವಿಷ ಹೊರ ಹೋಗಲು ನೆರವಾಗುತ್ತದೆ. ಮೊದಲೇ ಹೇಳಿದಂತೆ ಚಳಿಗಾಲದಲ್ಲಿ ತಿನ್ನುವುದು ಹೆಚ್ಚಾಗುತ್ತದೆ. ಅದ್ರಲ್ಲೂ ಬಿಸಿ ಬಿಸಿ ಫಾಸ್ಟ್ ಫುಡ್ ಸೇವನೆ ಹೆಚ್ಚು. ಇದ್ರಿಂದ ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುವುತ್ತವೆ. ಅತಿಯಾದ ಸೇವನೆಯಿಂದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ಟೊಮೆಟೊ ಸೂಪ್ ಈ ಎರಡೂ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಟೊಮೆಟೊ ಸೂಪ್‌ನಲ್ಲಿರುವ ನೀರಿನ ಅಂಶ, ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದರಿಂದಾಗಿ ಯುಟಿಐಗೆ ರಕ್ಷಣೆ ಸಿಗುತ್ತದೆ. ಇದಲ್ಲದೆ, ಟೊಮೆಟೊದಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಹಾಗಾಗಿ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.

(Tomato soup) Mind wants to eat warm food in winter. The mind longs to drink hot tea and coffee. Frequent consumption of hot tea and coffee is harmful to health. So this time we can give more priority to soup. Apart from giving a warm feeling to the body, soup also helps in improving our health.

Comments are closed.