Tulsi Seed:ತುಳಸಿ ಬೀಜದಲ್ಲಿದೆ ಅದ್ಬುತ ಶಕ್ತಿ, ನಿತ್ಯ ಸೇವನೆ ಮಾಡಿ ಹಲವು ಸಮಸ್ಯೆಯಿಂದ ದೂರವಿರಿ

(Tulsi Seed)ತುಳಸಿ ಎಲೆಯ ಔಷಧೀಯ ಗುಣಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ತುಳಸಿಯ ಒಂದು ಎಲೆಯನ್ನು ಸೇವನೆ ಮಾಡುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ದೇಹಕ್ಕೆ ಒದಗಿಸುವಂತೆ ಮಾಡುತ್ತದೆ. ಅದರಂತೆ ಇದರ ಬೀಜದಲ್ಲೂ ಕೂಡ ಹಲವು ಔಷಧೀಯ ಗುಣಗಳು ಅಡಗಿದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್, ಫೈಬರ್, ಕಬ್ಬಿಣ ಅಂಶ ಇರುವುದರಿಂದ ಇದನ್ನು ಸೇವನೆ ಮಾಡಿದರೆ ದೇಹದಲ್ಲಿ ರೋಗನಿರೋದಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ರೋಗನಿರೋಧಕ ಶಕ್ತಿಯು ಸೋಂಕಿನ ವಿರುದ್ದ ಹೊರಾಡಿ ನಮ್ಮ ದೇಹವನ್ನು ರಕ್ಷಣೆ ಮಾಡುತ್ತದೆ.

(Tulsi Seed)ತುಳಸಿ ಬೀಜಗಳಲ್ಲಿ ಅತಿ ಹೆಚ್ಚು ಔಷಧೀಯ ಗುಣವಿರುವುದರಿಂದ ಇದನ್ನು ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ. ರಾತ್ರಿ ಒಂದು ಲೋಟ ನೀರಿನಲ್ಲಿ ತುಳಸಿ ಬೀಜವನ್ನು ಹಾಕಿ ನೆನಸಿಟ್ಟು ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ಸಕ್ಕರೆ ಅಂಶ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ತುಳಸಿ ಬೀಜದಲ್ಲಿನ ನಾರಿನ ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ ಹಾಗಾಗಿ ಇದನ್ನು ಮಧುಮೇಹ ಇರುವವರು ಪ್ರತಿದಿನ ಸೇವನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಒಣ ಕೆಮ್ಮು ಇರುವವರು ಇದನ್ನು ಸೇವನೆ ಮಾಡಿದರೆ ಇದಕ್ಕೆ ಶೀರ್ಘ ಪರಿಹಾರ ಒದಗಿಸುತ್ತದೆ. ಅಷ್ಟೇ ಅಲ್ಲದೆ ತೂಕ ಇಳಿಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. ತುಳಸಿ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡಿ ಪದೇ ಪದೇ ಹಸಿವನ್ನು ಉಂಟುಮಾಡುವುದಿಲ್ಲ. ಇದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಹಾಗಾಗಿ ತುಂಬಾ ಸುಲಭವಾಗಿ ತೂಕವನ್ನು ಕಳೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ:Broccoli Health Tips :ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದರೆ ಬ್ರೊಕೋಲಿಯಿಂದ ದೂರವಿರಿ

ಇದನ್ನೂ ಓದಿ:Omicron BF.7 Health Tips: ಕೋವಿಡ್‌ ನಿಮ್ಮ ಹತ್ತಿರ ಸುಳಿಯದಿರಲು ಈ ಆಹಾರ ಕ್ರಮ ಪಾಲನೆ ಮಾಡಿ

ತುಳಸಿ ಬೀಜವನ್ನು ಸೇವನೆ ಮಾಡುವುದರಿಂದ ಹೊಟ್ಟೆಗೆ ಸಂಬಂಧಪಟ್ಟಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ತುಳಸಿ ಬೀಜವನ್ನು ನೀರಲ್ಲಿ ನೆನಸಿಟ್ಟು ಬೀಜದ ಸಮೆತ ನೀರು ಕುಡಿಯುವುದರಿಂದ ಅಜೀರ್ಣ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಪ್ರತಿದಿನ ಈ ತುಳಸಿ ಬೀಜವನ್ನು ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ನೀರಿನ ಬಾಟಲ್‌ ಗೆ ತುಳಸಿ ಬೀಜ ಹಾಕಿಕೊಂಡು ಕುಡಿಯುವುದರಿಂದ ಹಲವು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

Tulsi seed has amazing power, consume it daily stay away from many problems

Comments are closed.