White Spots Removal:ಬಿಳಿಸಿಬ್ಬು ನಿವಾರಣೆಗೆ ಮನೆಯಲ್ಲಿದೆ ಮದ್ದು

(White Spots Removal)ದೇಹದಲ್ಲಿ ಬಿಳಿ ಕಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ . ಅದಕ್ಕೆ ಕಾರಣ ದೇಹದಲ್ಲಿ ಮೆಲನಿನ್‌ ಉತ್ಪಾದನೆ ಮಾಡುವ ಜೀವಕೊಶಗಳು ಕ್ಷೀಣಿಸಿದಾಗ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ದೇಹದ ಮೇಲೆ ಕಾಣಿಸುವ ಬಿಳಿ ಕಲೆಗಳು ಇದೊಂದು ಫಂಗಸ್‌ ನಿಂದ ಉಂಟಾಗುವಂತಹ ರೋಗ. ಈ ಬಿಳಿ ಸಿಬ್ಬು ದೇಹದಲ್ಲಿ ಹರಡುತ್ತದೆ ಇದಕ್ಕೆ ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಕಡಿಮೆ ಮಾಡಿಕೊಳ್ಳಬಹುದು. ಈ ಬಿಳಿಸಿಬ್ಬು ಮುಕ್ತಿಗಾಗಿ ಈ ಕೆಳಗೆ ತಿಳಿಸಿರುವ ಮನೆಮದ್ದುಗಳಿಂದ ಪರಿಹಾರ ಕಂಡುಕೊಳ್ಳೋಣ.

(White Spots Removal)ಕೊಬ್ಬರಿ ಎಣ್ಣೆ
ದಿನಕ್ಕೆ ಎರಡು ಬಾರಿ ಬಿಳಿ ಆಗಿರುವ ಜಾಗಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್‌ ಮಾಡಿಕೊಂಡರೆ ಎರಡು ವಾರದಲ್ಲಿ ಬಿಳಿ ಕಲೆಗಳು ಕಡಿಮೆ ಆಗುತ್ತಾ ಬರುತ್ತದೆ. ಕೊಬ್ಬರಿ ಎಣ್ಣೆ ನಮ್ಮ ತ್ವಚೆಯನ್ನು ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ ಹಾಗಾಗಿ ಇದನ್ನು ತ್ವಚೆಗೆ ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಡೆಯುತ್ತದೆ.

ಶುಂಠಿ
ದೇಹದಲ್ಲಿ ಬಿಳಿಯಾದ ಜಾಗದಲ್ಲಿ ಶುಂಠಿ ರಸವನ್ನು ಹಚ್ಚಿಕೊಂಡು ಒಣಗಲು ಬಿಡಬೇಕು ಹೀಗೆ ಮಾಡುವುದರಿಂದ ಬಿಳಿಕಲೆಗಳು ಕಡಿಮೆ ಆಗುತ್ತದೆ. ಶುಂಠಿ ಮತ್ತು ಪುದಿನಾವನ್ನು ಮಿಕ್ಸಿ ಜಾರಿಯಲ್ಲಿ ಹಾಕಿ ಜ್ಯೂಸ್ ಮಾಡಿ ಕುಡಿಯುವುದರಿಂದ ಬಿಳಿ ಕಲೆಗಳಿಗೆ ಮುಕ್ತಿ ಸಿಗುತ್ತದೆ.

ಕೆಂಪು ಮಣ್ಣು
ಕೆಂಪು ಮಣ್ಣಿಗೆ ಶುಂಠಿ ರಸವನ್ನು ಬೇರೆಸಿ ದೇಹದಲ್ಲಿ ಬಿಳಿ ಇರುವ ಜಾಗಕ್ಕೆ ಹಚ್ಚಿಕೊಂಡರೆ ಬಿಳಿ ಕಲೆಗಳು ಕಡಿಮೆ ಆಗುತ್ತದೆ.

ಬಾವಂಚಿ ಎಣ್ಣೆ (ಬಾಕುಂಚಿ)
ಬಾವಂಚಿ ಎಣ್ಣೆಯನ್ನು ದೇಹದಲ್ಲಿ ಬಿಳಿ ಇರುವ ಜಾಗಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷ ಬಿಸಿಲಿನಲ್ಲಿ ನಿಲ್ಲಬೇಕು ಹೀಗೆ ಪ್ರತಿದಿನ ಮಾಡುವುದರಿಂದ ಕಾಲಕ್ರಮೇಣ ಬರುತ್ತಾ ಬಿಳಿ ಕಲೆಗಳು ಗುಣ ಆಗುತ್ತದೆ.

ಅರಿಶಿಣ ಪುಡಿ ಮತ್ತು ಸಾಸಿವೆ ಎಣ್ಣೆ ಮಿಶ್ರಣ

ಒಂದು ಚಮಚ ಅರಿಶಿಣ ಪುಡಿಗೆ ಎರಡು ಚಮಚ ಸಾಸಿವೆ ಎಣ್ಣೆ ಹಾಕಿ ಮಿಶ್ರಣ ಮಾಡಿಕೊಂಡು ದೇಹದ ಬಿಳಿ ಕಲೆಗಳ ಮೇಲೆ ಹಚ್ಚಬೇಕು ಹೀಗೆ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಬಿಳಿ ಕಲೆಗಳನ್ನು ಕಡಿಮೆ ಮಾಡುತ್ತದೆ.

ಕರಿಬೇವು
ಕರಿಬೇವಿನ ಒಂದು ಚಮಚ ಪುಡಿಯನ್ನು ನೀರಲ್ಲಿ ಹಾಕಿ ಕುಡಿಯುವುದರಿಂದ ದೇಹದಲ್ಲಿರುವ ಬಿಳಿ ಕಲೆಗಳನ್ನು ಕಡಿಮೆ ಮಾಡುತ್ತದೆ. ಕರಿಬೇವನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್‌ ಮಾಡಿಕೊಂಡು ಬಿಳಿ ಕಲೆ ಇರುವ ಜಾಗಕ್ಕೆ ಹಚ್ಚಿಕೊಂಡರೆ ಇದನ್ನು ಕಡಿಮೆ ಮಾಡುತ್ತದೆ.

ಗಂಧದ ಪುಡಿ, ಅರಿಶಿಣ , ಅಕ್ಕಿಹಿಟ್ಟು, ಜೇನುತುಪ್ಪ ಪೇಸ್ಟ್‌

ಬೌಲ್‌ ನಲ್ಲಿ ಒಂದು ಚಮಚ ಗಂಧದಪುಡಿ , ಒಂದು ಚಮಚ ಅರಿಶಿಣ, ಒಂದು ಚಮಚ ಅಕ್ಕಿಹಿಟ್ಟು, ಒಂದು ಚಮಚ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ ಪೇಸ್ಟ್‌ ತಯಾರಿಸಿಕೊಳ್ಳಬೇಕು. ದೇಹದಲ್ಲಿ ಬಿಳಿ ಆಗಿರುವ ಜಾಗಕ್ಕೆ ಈ ಪೇಸ್ಟ್‌ ಹಚ್ಚಿಕೊಳ್ಳುವುದರಿಂದ ಇದನ್ನು ಕಡಿಮೆ ಮಾಡುತ್ತದೆ.

ತಾಮ್ರ
ತಾಮ್ರದಲ್ಲಿ ಚರ್ಮಕ್ಕೆ ಆಗುವಂತಹ ಹಾನಿಯನ್ನು ತಪ್ಪಿಸುವಂತಹ ಗುಣಗಳಿವೆ ಹಾಗಾಗಿ ರಾತ್ರಿ ತಾಮ್ರ ಲೋಟದಲ್ಲಿ ನೀರು ಹಾಕಿ ಅದನ್ನು ಬೆಳಿಗ್ಗೆ ಕುಡಿಯುವುದರಿಂದ ಬಿಳಿ ಕಲೆಗಳನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ತಾಮ್ರದ ಲೋಟದಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿ ಆಗುವ ಬಿಳಿ ಕಲೆಗಳಿಂದ ತಪ್ಪಿಸಿಕೊಳ್ಳಬಹುದು.

ಇದನ್ನೂ ಓದಿ:Shankha Pushpa dosa recipe:ಶಂಖ ಪುಷ್ಪ ದೋಸೆಯಿಂದ ಹೆಚ್ಚುತ್ತೆ ಮಕ್ಕಳ ನೆನಪಿನ ಶಕ್ತಿ

ಇದನ್ನೂ ಓದಿ:How To Improve Eyesight:ಕಣ್ಣಿನ ದೃಷ್ಟಿ ಹೆಚ್ಚಿಸಿಕೊಳ್ಳಬೇಕೆ? ಹಾಗಾದ್ರೆ ಈ ಪದಾರ್ಥಗಳನ್ನು ಸೇವಿಸಿ……

ಅಂಜೂರ
ಅಂಜೂರ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ಆಗುವ ಕಪ್ಪುಕಲೆಗಳಿಂದ ದೂರವಿರಬಹುದು.

ಎಲೆಕೊಸು
ಎಲೆಕೊಸಿನ ರಸವನ್ನು ಬಿಳಿ ಕಲೆಗಳ ಮೇಲೆ ಹಚ್ಚಿಕೊಂಡು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ಉಗುರು ಬೆಚ್ಚಿಗಿನ ನೀರಲ್ಲಿ ತೊಳೆದರೆ ಬಿಳಿ ಕಲೆಗಳು ಕಡಿಮೆ ಆಗುತ್ತದೆ.

ಅಲವೇರಾ
ಅಲವೇರಾವನ್ನು ಬಿಳಿ ಕಲೆಗಳ ಮೇಲೆ ಹಚ್ಚಿಕೊಂಡು ನಂತರ ಉಗುರು ಬೆಚ್ಚಗಿನ ನೀರಲ್ಲಿ ತೊಳೆದರೆ ಬಿಳಿ ಕಲೆಗಳು ಕಡಿಮೆ ಆಗುತ್ತದೆ.

White Spots Removal There is a home remedy to get rid of white spots

Comments are closed.