Madhyapradesh fire accident: ಗುಡಿಸಲಿಗೆ ಬೆಂಕಿ: ವೃದ್ದ ದಂಪತಿ ಸಜೀವ ದಹನ

ಮಧ್ಯಪ್ರದೇಶ: (Madhyapradesh fire accident) ಗುಡಿಸಲಿಗೆ ಬೆಂಕಿ ತಗುಲಿ ವೃದ್ದ ದಂಪತಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ನಡೆದಿದೆ. ವೃದ್ದ ದಂಪತಿ ರಾತ್ರಿ ವೇಳೆ ಗುಡಿಸಲೊಳೆ ಮಲಗಿದ್ದಾಗ ಈ ಘಟನೆ ನಡೆದಿದೆ.

ಮಾಹಿತಿ ಪ್ರಕಾರ ವೃದ್ದ ದಂಪತಿಗಳಿಬ್ಬರೇ ಗುಡಿಸಲಿನಲ್ಲಿ ವಾಸವಾಗಿದ್ದರು. ರಾತ್ರಿ ವೇಳೆ ದಂಪತಿಗಳು ನಿದ್ರೆಗೆ ಜಾರಿದ ಸಂದರ್ಭದಲ್ಲಿ ಗುಡಿಸಲಿಗೆ ಬೆಂಕಿ (Madhyapradesh fire accident) ಬಿದ್ದಿದೆ. ಬೆಂಕಿಯಲ್ಲಿ ಪೂರ್ತಿಯಾಗಿ ಸುಟ್ಟ ಗಾಯಗಳಾಗಿ ದಂಪತಿಗಳಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಬೆಂಕಿ ನಂದಿಸಿ ದಂಪತಿಗಳನ್ನು ರಕ್ಷಿಸಲು ಹರಸಾಹಸ ಪಟ್ಟರೂ ಕೂಡ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಘಟನೆಯ ಕುರಿತು ಮಾತನಾಡಿದ ಬರ್ಖೇಡಿ ಪೊಲೀಸ್ ಠಾಣೆಯ ಪ್ರಭಾರಿ ಶ್ರೀನಾಥ್ ಝರವಾಡೆ, “ಮಧ್ಯರಾತ್ರಿಯ ನಂತರ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಕೆಲವು ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು” ಎಂದು ಹೇಳಿದರು.

ಹಲವು ಗಂಟೆಗಳ ಪ್ರಯತ್ನದ ನಂತರ ಸ್ಥಳೀಯರು ಬೆಂಕಿ ನಂದಿಸಲು ಯಶಸ್ವಿಯಾಗಿದ್ದು, ಅಷ್ಟರೊಳಗಾಗಿಯೇ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದು ಪೊಲೀಸ್‌ ಅಧಿಕಾರಿ ಹೇಳಿದರು. ಮಧ್ಯ ರಾತ್ರಿಯ ವೇಳೆ ಈ ರೀತಿಯಾಗಿ ಏಕಾಏಕಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬೇಕಂತಲೇ ಯಾರಾದರೂ ದುಷ್ಕರ್ಮಿಗಳು ಈ ರೀತಿಯಾಗಿ ಮಾಡಿರಬಹುದಾ ಎಂಬುದಾಗಿ ಅನುಮಾನಗಳು ಮೂಡುತ್ತಿವೆ.

ಇದನ್ನೂ ಓದಿ : Maharashtra Gangrape:16 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ ರೇಪ್:‌ 8 ಮಂದಿ ಬಂಧನ

ಇದನ್ನೂ ಓದಿ : Annual Sports Event : ಶಾಲೆಯ ವಾರ್ಷಿಕ ಕ್ರೀಡಾಕೂಟದ ವೇಳೆ ಬಾಲಕನ ಕತ್ತು ಸೀಳಿದ ಈಟಿ

ಬಂಖೇಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರದಲ್ಲಿ ಬೆಂಕಿ ಅವಘಡ ಸಹಜವೋ ಅಥವಾ ಅಸಹಜವೋ ಎಂದು ತಿಳಿಯಲಿದೆ.

(Madhyapradesh fire accident) The incident in which an old couple died after their hut caught fire took place in Madhya Pradesh’s Narmadapuram district. The incident took place when the old couple was sleeping in a hut at night.

Comments are closed.