ಇನ್ನೇನು ಶುರುವಾಯ್ತು ಚಳಿಗಾಲ, ನಿಮ್ಮ ತ್ವಚೆಯ ಆರೈಕೆ ಹೀಗಿರಲಿ

0
  • ಅಂಚನ್ ಗೀತಾ

ಮಳೆಗಾಲ ಮುಗಿದು ಚಳಿಗಾಲ ಆರಂಭವಾದ್ರೆ ಸಾಕು ಚಳಿಯಿಂದ ಕೈಕಾಲು ನಡುಗುತ್ತೆ. ಚರ್ಮವಂತೂ ಸುಕ್ಕಾಗಿರುತ್ತೆ. ತುಟಿಯಲ್ಲಂತೂ ರಕ್ತ ಸೊರಲು ಆರಂಭವಾಗುತ್ತೆ.

ಕೈಕಾಲೆಲ್ಲ ಬಿರುಕು ಬಿಟ್ಟಿರುತ್ತದೆ. ಹೀಗಾಗಿ ಚಳಿಗಾಳದಲ್ಲಿ ಚರ್ಮದ ಆರೈಕೆ ಈ ರೀತಿ ಇದ್ದರೆ ಉತ್ತಮ. ಇಲ್ಲಿದೆ ನೋಡಿ ಹಲವಾರು ಟಿಪ್ಸ್.

ಹಾಲು ಮತ್ತು ಜೇನು:
ಹಾಲು ಮತ್ತು ಜೇನು ಒಂಥರಾ ವಿಶಿಷ್ಟ ರೀತಿಯ ಪ್ಯಾಕ್. ಒಣ ಚರ್ಮಕ್ಕೆ ಇದು ಉತ್ತಮವಾದ ಪ್ಯಾಕ್. ಹಾಲು ಮತ್ತು ಜೇನನ್ನು ಬೆರೆಸಿ 4 ಮಿಷಗಳ ಕಾಲ ಹಾಗೇ ಬಿಡಿ. ಇದು ಚರ್ಮಕ್ಕೆ ಹೊಳಪು ನೀಡೋದಲ್ಲದೆ ಸೌಂದರ್ವನ್ನು ಇಮ್ಮಡಿಗೊಳಿಸುತ್ತದೆ.

ಕಿತ್ತಳೆ ಮತ್ತು ಜೇನುತುಪ್ಪ
ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಡಿ. ಆ ಪುಡಿಗೆ ಹಾಲು ಮತ್ತು ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 5 ನಿಮಿಷಗಳ ಕಾಲ ಬಿಡಿ.

ಓಟ್ ಮೀಲ್ ಫೆಸ್ ಪ್ಯಾಕ್
ಓಟ್ ಮೀಲ್ ಫೇಸ್ ಪ್ಯಾಕ್ ಫೇಶಿಯಲ್ ಗಿಂತ ಹೆಚ್ಚಿನ ಗ್ಲೋವನ್ನು ನೀಡುತ್ತೆ. ಇದನ್ನು ಜೇನು ಮತ್ತು ಮೊಸರಿನೊಂದಿಗೆ ಸೇರಿಸಿ ಎರಡು ಹನಿ ಗ್ಲಿಸರಿನ್ ಸೇರಿಸಿ ಹತ್ತು ನಿಮಿಷಗಳ ಕಾಲ ಹಾಗೆ ಬಿಡಿ.

ಪಪ್ಪಾಯ ಹಣ್ಣು:
ಪಪ್ಪಾಯ ಹಣ್ಣಿನ ಜೊತೆಗೆ ಹಾಲನ್ನು ಬೆರಸಿ ಮುಖಕ್ಕೆ ಹತ್ತು ನಿಮಿಷಗಳ ಕಾಳ ಮಸಾಜ್ ಮಾಡಿ. ಇದು ಮುಖಕ್ಕೆ ಮಾಯ್ಶರೈಸ್ ಮಾಡುತ್ತೆ. ಅಷ್ಟೆಅಲ್ಲ ಮುಖದ ಅಂದವನ್ನು ಹೆಚ್ಚಿಸುತ್ತದೆ.

ಮೊಟ್ಟೆಯ ಬಿಳಿ ಭಾಗ:
ಮೊಟ್ಟೆಯ ಬಿಳಿ ಭಾಗ ಮತ್ತು ಸಕ್ಕರೆಯನ್ನು ಬೆರೆಸಿ ಮುಖಕ್ಕೆ ಚೆನ್ನಾಗಿ ಲೇಪಿಸಿ. ಹತ್ತು ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಹೀಗೆ ಮಾಡೋದ್ರಿಂದ ಚಳಿಗಾಲದಲ್ಲಿ ಚರ್ಮದ ರಕ್ಷಣೆಯನ್ನು ಮಾಡೋದ್ರ ಜೊತೆಗೆ ಚರ್ಮದ ಅಂದವನ್ನು ಇಮ್ಮಡಿಗೊಳಿಸಬಹುದು.

What’s the start of winter, take care of your skin?

Leave A Reply

Your email address will not be published.