Winter Skin Care Tips: ಚಳಿಗಾಲದ ತಂಪಾದ ಗಾಳಿ ನಮಗೆ ಆಹ್ಲಾದಕರವೆನಿಸಿದರೂ, ಪುಟ್ಟ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈ ಹವಾಮಾನ ಸವಾಲಿನದ್ದಾಗಿರುತ್ತದೆ. ಮಕ್ಕಳ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಶೀತ, ಕೆಮ್ಮು ಮತ್ತು ಚರ್ಮದ ಸಮಸ್ಯೆಗಳು ಬೇಗನೆ ಕಾಣಿಸಿಕೊಳ್ಳುತ್ತವೆ. ಚಳಿಗಾಲದಲ್ಲಿ ನಿಮ್ಮ ಮಗುವಿನ ಆರೈಕೆಗಾಗಿ ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು.
ಹತ್ತಿ ಬಟ್ಟೆ: ಮಗುವಿನ ಚರ್ಮಕ್ಕೆ ನೇರವಾಗಿ ಉಣ್ಣೆಯ ಬಟ್ಟೆ ತಗುಲಬಾರದು, ಇದು ತುರಿಕೆಗೆ ಕಾರಣವಾಗಬಹುದು. ಮೊದಲು ಮೆದುವಾದ ಹತ್ತಿ ಬಟ್ಟೆ ಹಾಕಿ, ಅದರ ಮೇಲೆ ಸ್ವೆಟರ್ ಧರಿಸಿರಿ.
ಮಗುವಿನ ತಲೆ, ಕಿವಿ ಮತ್ತು ಪಾದಗಳು ಯಾವಾಗಲೂ ಮುಚ್ಚಿರಲಿ. ಮೃದುವಾದ ಟೋಪಿ ಮತ್ತು ಸಾಕ್ಸ್‌ಗಳನ್ನು ಕಡ್ಡಾಯವಾಗಿ ಬಳಸಿ.
ಮಗು ಮಲಗುವಾಗ ತುಂಬಾ ಭಾರವಾದ ಕಂಬಳಿ ಹೊದಿಸಬೇಡಿ. ಅದರ ಬದಲಿಗೆ ಬೆಚ್ಚಗಿನ ‘ಸ್ಲೀಪಿಂಗ್ ಬ್ಯಾಗ್’ ಅಥವಾ ಮಗುವಿನ ಮೈಗೆ ಹೊಂದಿಕೊಳ್ಳುವ ಬೆಚ್ಚನೆಯ ಬಟ್ಟೆಗಳನ್ನು ಬಳಸಿ.
ಚಳಿಗಾಲದಲ್ಲಿ ಮಕ್ಕಳ ಚರ್ಮ ಬೇಗನೆ ಒಣಗುತ್ತದೆ (Dry Skin). ಇದನ್ನು ತಡೆಯಲು ಹೀಗೆ ಮಾಡಿ:
ಪ್ರತಿದಿನ ಸ್ನಾನಕ್ಕೂ ಮುನ್ನ ತೆಂಗಿನ ಎಣ್ಣೆ ಅಥವಾ ಬೇಬಿ ಆಯಿಲ್‌ನಿಂದ ಮಗುವಿಗೆ ಮಸಾಜ್ ಮಾಡಿ. ಇದು ರಕ್ತಪರಿಚಲನೆಗೆ ಮತ್ತು ಚರ್ಮದ ತೇವಾಂಶ ಕಾಪಾಡಲು ಸಹಕಾರಿ.
ಮಗುವನ್ನು ಸ್ನಾನ ಮಾಡಿಸಲು ತುಂಬಾ ಬಿಸಿ ನೀರು ಬಳಸಬೇಡಿ. ಉಗುರು ಬೆಚ್ಚಗಿನ ನೀರು ಸೂಕ್ತ.
ಸ್ನಾನದ ನಂತರ ಮಗುವಿನ ಮೈಗೆ ಕೆಮಿಕಲ್ ಮುಕ್ತ ಮಾಯಿಶ್ಚರೈಸರ್ ಅಥವಾ ಬೇಬಿ ಲೋಷನ್ ಹಚ್ಚಿ.
ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಾಯ ಹಾಲು ಅತ್ಯುತ್ತಮ ರೋಗನಿರೋಧಕ ಶಕ್ತಿ ನೀಡುತ್ತದೆ.
ಘನ ಆಹಾರ ಸೇವಿಸುವ ಮಕ್ಕಳಿಗೆ ಯಾವಾಗಲೂ ತಾಜಾ ಮತ್ತು ಬಿಸಿ ಆಹಾರವನ್ನೇ ನೀಡಿ. ಸೂಪ್, ಬೇಳೆ ಕಟ್ಟು ಮುಂತಾದವುಗಳನ್ನು ನೀಡಬಹುದು.
ಚಳಿಗಾಲದಲ್ಲಿ ದಾಹ ಕಡಿಮೆಯಿದ್ದರೂ, ಮಗುವಿನ ದೇಹದಲ್ಲಿ ನೀರಿನಂಶ ಇರಲು ಆಗಾಗ ಉಗುರು ಬೆಚ್ಚಗಿನ ನೀರನ್ನು ಕುಡಿಸುತ್ತಿರಿ.
ಕಿಂಗ್ ಕೊಹ್ಲಿ ಅಬ್ಬರಕ್ಕೆ ಕಿವೀಸ್ ಪತನ: ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 4 ವಿಕೆಟ್‌ಗಳ ಜಯ
ಅಮ್ಮಂದಿರ ಗಮನಕ್ಕೆ ಕೆಲವು ವಿಶೇಷ ಸೂಚನೆಗಳು
ಬೆಳಗಿನ ಎಳೆಯ ಬಿಸಿಲಿನಲ್ಲಿ ಮಗುವನ್ನು ಸ್ವಲ್ಪ ಹೊತ್ತು ಇರಿಸಿ. ಇದರಿಂದ ಮಗುವಿಗೆ ಅಗತ್ಯವಾದ ‘ವಿಟಮಿನ್ ಡಿ’ ದೊರೆಯುತ್ತದೆ.
ಮಗುವನ್ನು ಎತ್ತಿಕೊಳ್ಳುವ ಮೊದಲು ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಶೀತ ಅಥವಾ ಜ್ವರ ಇರುವವರಿಂದ ಮಗುವನ್ನು ದೂರವಿಡಿ.
ಮಗು ಮಲಗುವ ಕೋಣೆ ತುಂಬಾ ತಂಪಾಗಿರದಂತೆ ಕಿಟಕಿಗಳನ್ನು ಸರಿಯಾದ ಸಮಯದಲ್ಲಿ ಮುಚ್ಚಿ. ಆದರೆ ಗಾಳಿಯಾಡಲು ಅವಕಾಶವಿರಲಿ.


