Coffee Powder Face Mask :ಬಿಸಿಲಿಗೆ ಟ್ಯಾನ್‌ ಆಗುವ ಚಿಂತೆಯೇ ? ಕಾಫಿ ಪೌಡರ್‌ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಿ

(Coffee Powder Face Mask)ಬಿಸಿಲಿಗೆ ಮುಖ ಟ್ಯಾನ್‌ ಆಗುತ್ತದೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಾ ಇರುತ್ತದೆ. ಹಾಗಾಗಿ ಟ್ಯಾನ್‌ ಆಗುವುದರಿಂದ ತಪ್ಪಿಸಿಕೊಳ್ಳಲು ಹಲವು ಕ್ರೀಮ್‌ಗಳನ್ನು ಮುಖಕ್ಕೆ ಹಚ್ಚುತ್ತಾರೆ. ಇಲ್ಲವಾದರೆ ಮನೆಯಲ್ಲಿಯೇ ಕ್ರೀಮ್‌ , ಫೇಸ್‌ ಮಾಸ್ಕ್‌ ಮಾಡಿಕೊಂಡು ಮುಖಕ್ಕೆ ಹಚ್ಚುತ್ತಾರೆ. ಕಾಫಿ ಪೌಡರ್‌ ನ ಫೇಸ್‌ ಮಾಸ್ಕ್‌ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ನೀವು ಟ್ಯಾನ್‌ ಅಗುವುದರಿಂದ ತಪ್ಪಿಸಿಕೊಳ್ಳಬಹುದು. ಇದರ ಮಾಹಿತಿಯನ್ನು ತಿಳಿಸಲಾಗಿದೆ.

(Coffee Powder Face Mask)ಬೇಕಾಗುವ ಸಾಮಾಗ್ರಿಗಳು:
ಕಾಫಿ ಪುಡಿ
ಅರಿಶಿಣ
ಮೊಸರು

ಮಾಡುವ ವಿಧಾನ:
ಒಂದು ಬೌಲ್‌ ನಲ್ಲಿ ಒಂದು ಚಮಚ ಕಾಫಿ ಪುಡಿ, ಸ್ವಲ್ಪ ಅರಿಶಿಣ, ಮೊಸರು ಹಾಕಿಕೊಂಡು ಮಿಶ್ರಣ ಮಾಡಿಕೊಂಡು ಫೇಸ್‌ ಮಾಸ್ಕ್‌ ತಯಾರಿಸಿಕೊಳ್ಳಬೇಕು. ಇದನ್ನು ಮುಖಕ್ಕೆ ಲೇಪನ ಮಾಡಿಕೊಂಡು ಇಪ್ಪತ್ತು ನಿಮಿಷಗಳ ವರೆಗೆ ಬಿಟ್ಟು ನಂತರ ಮುಖ ತೊಳೆಯಬೇಕು. ತಿಂಗಳಿಗೊಮ್ಮೆ ಫೇಸ್‌ ಮಾಸ್ಕ್‌ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಟ್ಯಾನ್‌ ಆಗುವುದರಿಂದ ತಪ್ಪಿಸಿಕೊಳ್ಳಬಹುದು.

ಬೇಕಾಗುವ ಸಾಮಾಗ್ರಿಗಳು:
ಮೊಟ್ಟೆ
ಕಡ್ಲೆ ಹಿಟ್ಟು

ಮಾಡುವ ವಿಧಾನ:
ಒಂದು ಬೌಲ್‌ ನಲ್ಲಿ ಮೊಟ್ಟೆ , ಕಡ್ಲೆ ಹಿಟ್ಟು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿಕೊಂಡು ಹದಿನೈದು ನಿಮಿಷ ಬಿಟ್ಟು ಮುಖವನ್ನು ತೊಳೆಯಬೇಕು. ತಿಂಗಳಿಗೊಮ್ಮೆ ಫೇಸ್‌ ಮಾಸ್ಕ್‌ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಕಪ್ಪು ಕಲೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:Winter And Water: ಚಳಿಗಾಲದಲ್ಲಿ ನೀವೆಷ್ಟು ನೀರು ಕುಡಿಯುತ್ತೀರಾ…

ಇದನ್ನೂ ಓದಿ:Honey Face Wash:ಮನೆಯಲ್ಲಿಯೇ ತಯಾರಿಸಿಕೊಳ್ಳಿ ಜೇನುತುಪ್ಪದ ಫೇಸ್‌ ವಾಶ್‌

ಇದನ್ನೂ ಓದಿ:Banana Hair pack:ಸುಕ್ಕುಗಟ್ಟುವ ಕೂದಲಿಗೆ ಬಾಳೆಹಣ್ಣಿನ ಹೇರ್‌ ಪ್ಯಾಕ್ ಟ್ರೈ ಮಾಡಿ

ಕಾಫಿ ಪುಡಿ
ಕಾಫಿ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಟೀ ಟ್ರೀ ಎಣ್ಣೆಯ ಜೊತೆ ಕಾಫಿ ಪುಡಿಯನ್ನು ಬೇರೆಸಿ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮಸುಕ್ಕಾಗುವುದನ್ನು ಕಡಿಮೆ ಮಾಡುತ್ತದೆ. ಕಾಫಿ ಪುಡಿ, ಮೊಸರು, ನಿಂಬೆ ರಸವನ್ನು ಬೆರೆಸಿ ಕಲಸಿಕೊಳ್ಳಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿಕೊಂಡು ಒಣಗಿದ ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಬೇಕು. ಹೀಗೆ ಮಾಡುವುದರಿಂದ ಮುಖದಲ್ಲಿರುವ ಕಪ್ಪುಕಲೆಗಳನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪದೊಂದಿಗೆ ಕಾಫಿಪುಡಿಯನ್ನು ಬೇರೆಸಿ ಸ್ಕ್ರಬ್‌ ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿರುವ ಕಲೆಯನ್ನು ನಿವಾರಣೆ ಮಾಡಿ ಹೊಳಪು ಹೆಚ್ಚಿಸುತ್ತದೆ. ಇದಕ್ಕೆ ಜೇನುತುಪ್ಪ ಮಿಶ್ರಣ ಮಾಡುವುದರಿಂದ ಒಣ ಚರ್ಮ ಹೊಂದಿರುವವರ ಮುಖದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ. ತಿಂಗಳಿಗೆ ಎರಡು ಬಾರಿ ಕಾಫಿ ಪುಡಿಗೆ ನೀರನ್ನು ಸೇರಿಸಿ ಕೂದಲನ್ನು ತೊಳೆಯುವುದರಿಂದ ತಲೆಹೊಟ್ಟು ನಿವಾರಣೆ ಆಗುತ್ತದೆ.

Worried about getting a sun tan? Apply coffee powder face mask on face

Comments are closed.