ಸ್ನಾನದ ವಿಡಿಯೋ ವೈರಲ್ ಬೆದರಿಕೆ : ಕಾಲೇಜು ವಿದ್ಯಾರ್ಥಿಯನ್ನೇ ಹತ್ಯೆಗೈದ ದಂಪತಿ ?
ಎರಡು ತಿಂಗಳ ಹಿಂದೆ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ನಂತರ ವಿಡಿಯೋವನ್ನು ಮಹಿಳೆಗೆ ತೋರಿಸಿ ಬೆದರಿಕೆಯೊಡ್ಡಿದ್ದಾನೆ.

ಗಾಂಧಿನಗರ : ಮಹಿಳೆ ಸ್ನಾನ ಮಾಡುತ್ತಿದ್ದ ವಿಡಿಯೋ ಮೊಬೈಲ್ನಲ್ಲಿ ಚಿತ್ರಿಸಿಕೊಂಡು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೇ ಆಕೆಯನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ. ಕೊನೆಗೆ ಯುವಕ ಹತ್ಯೆಯಾಗಿದ್ದಾನೆ.
ಗುಜರಾತ್ ರಾಜ್ಯದ ಗಾಂಧಿನಗರದ ಕಲೋಲ್ ತಾಲೂಕಿನಲ್ಲಿ ನಡೆದಿದೆ. ಹಾರ್ದಿಕ್ (20 ವರ್ಷ) ಎಂಬಾತನೇ ಕೊಲೆಯಾದವನು ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಹಿನ್ನೆಲೆಯಲ್ಲಿ ದಂಪತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಸ್ನಾನದ ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿಯ ಕಳ್ಳಾಟ ಬಯಲಾಗಿದೆ. ಆರೋಪಿ ಮಹಿಳೆಯ ಸಮೀಪದಲ್ಲಿಯೇ ಹಾರ್ದಿಕ್ ಮನೆ ಇದ್ದು, ಎರಡು ತಿಂಗಳ ಹಿಂದೆ ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ. ನಂತರ ವಿಡಿಯೋವನ್ನು ಮಹಿಳೆಗೆ ತೋರಿಸಿ ಬೆದರಿಕೆಯೊಡ್ಡಿದ್ದಾನೆ.
ಹಾರ್ದಿಕ್ ಮಹಿಳೆಗೆ ವಿಡಿಯೋವನ್ನು ವೈರಲ್ ಮಾಡುವ ಬೆದರಿಕೆಯೊಡ್ಡುತ್ತಿದ್ದಂತೆಯೇ ಮಹಿಳೆ ಆತನ ಒತ್ತಡಕ್ಕೆ ಮಣಿದಿದ್ದಾಳೆ. ನಂತರ ಹಾರ್ದಿಕ್ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ನಂತರ ಮಹಿಳೆ ತನ್ನ ಪತಿಗೆ ಈ ವಿಚಾರ ತಿಳಿಸಿದ್ದಾಳೆ.
ಮನೆಗೆ ಆಹ್ವಾನಿಸಿದ ಮಹಿಳೆ, ಕೊಲೆಗೈದ ಪತಿ
ಹಾರ್ದಿಕ್ ಕಿರುಕುಳ ನೀಡ್ತಾ ಇರೋದು ಹೆಚ್ಚಾಗುತ್ತಿದ್ದಂತೆಯೇ ಜುಲೈ 11ರಂದು ಮಹಿಳೆ ಹಾರ್ದಿಕ್ನನ್ನು ಮನೆಗೆ ಆಹ್ವಾನಿಸಿದ್ದಾಳೆ. ಹಾರ್ದಿಕ್ ಮನೆಗೆ ಬರುವ ಮೊದಲೇ ಪತಿ ಕೆಲಸಕ್ಕೆ ಹೋಗುವಂತೆ ನಟಿ, ಮೊಟಾರ್ ಸೈಕಲ್ನಲ್ಲಿ ಮನೆಯಿಂದ ತೆರಳಿದ್ದಾನೆ.
ಬೆಳಗ್ಗೆ ಸುಮಾರು ಬೆಳಿಗ್ಗೆ 9.10ಕ್ಕೆ ಹಾರ್ದಿಕ್ ತನ್ನ ತಂದೆಗೆ ಕರೆ ಮಾಡಿ ಪರ್ಬತ್ಪುರದಲ್ಲಿ ಜಾಗ ನೋಡುವುದಕ್ಕೆ ತೆರಳುತ್ತಿರುವುದಾಗಿ ಹೇಳಿ ದಂಪತಿಗಳ ಮನೆಗೆ ತೆರಳಿದ್ದಾನೆ. ಈ ವೇಳೆತಲ್ಲಿ ಪತಿ ಕೆಲಸಕ್ಕೆ ತೆರಳಿದ್ರೆ, ಮಕ್ಕಳು ಶಾಲೆಗೆ ಹೋಗಿದ್ರು. ಹಾರ್ದಿಕ್ ಮನೆ ಒಳಗೆ ತೆರಳಿ ಮಹಿಳೆಯ ಜೊತೆಗೆ ಆತ್ಮೀಯತೆಯಿಂದ ಮಾತನಾಡಲು ಶುರು ಮಾಡಿದ್ದಾನೆ.
ಏಕಾಏಕಿ ಮನೆಯೊಳಗೆ ಪ್ರವೇಶಿಸಿದ ಆಕೆಯ ಪತಿ ಹಾರ್ದಿಕ್ ಎದೆ ಮೇಲೆ ಕುಳಿತ ಕೂಡಲೇ, ಮಹಿಳೆ ಆತನ ಕೈಗಳನ್ನು ಹಿಡಿದು ಕಟ್ಟಿ ಹಾಕಿದ್ದರು. ನಂತರ ಸ್ಕಾರ್ಪ್ನಿಂದ ಕತ್ತನ್ನು ಹಿಸುಕಿ ಕೊಂದಿದ್ದಾರೆ. ನಂತರ ಆತನ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ, ಮನೆಗೆ ಬೀಗ ಹಾಕಿ ಮೋಟಾರ್ ಸೈಕಲ್ ಮೂಲಕ ಹೊರಟು ಹೋಗಿದ್ದಾರೆ.
ಮೂವರು ಮಕ್ಕಳನ್ನು ಶಾಲೆಯಿಂದ ಕರೆತಂದು ಮಹಿಳೆಯ ತಂದೆಯ ಮನೆಯಲ್ಲಿ ಬಿಟ್ಟು ದಂಪತಿ ಎಸ್ಕೇಪ್ ಆಗಿದ್ದಾರೆ. ಕೊಲೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ದಂಪತಿಯನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯ ನಂತರ ಸತ್ಯಾ ಸತ್ಯತೆ ಹೊರ ಬರೋದಕ್ಕೆ ಸಾಧ್ಯ.
Gujarat Gandhinagar bathing video viral threat student murder by couple Kannada News

