ಭಾರತದ ಏಕೈಕ ಟ್ರಾಫಿಕ್ ಜಾಮ್ ಇಲ್ಲದ ನಗರ : ಈ ಊರಲ್ಲಿ ಕೇಳಿಸದು ವಾಹನಗಳ ಹಾರ್ನ್ !

North Aizawl city : ವಾಹನಗಳ ಖರೀದಿ ಹೆಚ್ಚುತ್ತಿದ್ದಂತೆಯೇ ಟ್ರಾಫಿಕ್ ಜಾಮ್ ಕೂಡ ಜಾಸ್ತಿಯಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಸರ್ಕಾರಿ ಸಾರಿಗೆಗಳಿಗಿಂತ ವೈಯಕ್ತಿಕ ವಾಹನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಮುಗಿಯದ ಟ್ರಾಫಿಕ್ ಜಾಮ್, ವಾಹನಗಳ ಹಾರ್ನ್ ಅಬ್ಬರ ಕಾಣಬಹುದಾಗಿದೆ. ಇದು ಎಂಥ ಶಾಂತ ವ್ಯಕ್ತಿಯ ಮನಸ್ಸನ್ನು ಕಿರಿಕಿರಿ ಮಾಡುವಂತಹ ಸಾಮರ್ಥ್ಯ ಹೊಂದಿದೆ.
ನೀವು ನಂಬಿದ್ರೆ ನಂಬಿ..! ನಮ್ಮ ದೇಶದಲ್ಲೊಂದು ನಗರವಿದೆ. ಇಲ್ಲಿ ಟ್ರಾಫಿಕ್ ಜಾಮ್ ಎನ್ನುವುದೇ ಇಲ್ಲ. ಈ ನಗರದ ವಾಹನ ಮಾಲೀಕರು ಎಲ್ಲೆಂದರಲ್ಲಿ, ಮನಸ್ಸಿಗೆ ಬಂದಂತೆ ಹಾರ್ನ್ ಬಾರಿಸುವುದಿಲ್ಲ. ಏಕೆಂದರೆ ಇಲ್ಲಿನ ಸ್ಥಳೀಯ ಸಂಸ್ಕೃತಿಯ ಪ್ರಕಾರ ವಾಹನಗಳು ಹಾರ್ನ್ ಬಾರಿಸಿದ್ರೆ ಅದನ್ನು ಅಸಭ್ಯ ಸಂಸ್ಕೃತಿ ಎಂದು ಪರಿಗಣಿಸಲಾಗುತ್ತದೆ.
ಭಾರತದ ಯಾವ ನಗರದಲ್ಲಿ ಶೂನ್ಯ ಟ್ರಾಫಿಕ್ ಜಾಮ್
ಈ ಪ್ರಶ್ನೆಗೆ ಉತ್ತರ ಐಜ್ವಾಲ್ ನಗರ. ಇದು ಮಿಜೋರಾಂನ ರಾಜಧಾನಿಯಾಗಿದೆ. ಇಲ್ಲಿ ನೀವು ಎಂದಿಗೂ ಸಂಚಾರ ದಟ್ಟಣೆಯನ್ನು ಕಾಣುವುದೇ ಇಲ್ಲ. ಇಲ್ಲಿನ ರಸ್ತೆಗಳು ಎಷ್ಟು ಪ್ರಶಾಂತವಾಗಿರುತ್ತದೆ ಎಂದರೆ ನಿಮಗೆ ಒಂದೇ ಒಂದು ವಾಹನಗಳ ಹಾರ್ನ್ ಸದ್ದು ಕೂಡ ಕೇಳುವುದಿಲ್ಲ.
ಭಾರತದ ಪ್ರಮುಖ ನಗರಗಳು ಎನಿಸಿರುವ ಬೆಂಗಳೂರು, ದೆಹಲಿ, ಕೋಲ್ಕತ್ತಾ, ಮುಂಬೈನಂತಹ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ತುತ್ತ ತುದಿಯಲ್ಲಿ ಇರುತ್ತದೆ. ಇದನ್ನು ಹೊರತುಪಡಿಸಿ ಕಡಿಮೆ ಜನದಟ್ಟಣೆ ಹೊಂದಿರುವ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಆಸ್ಸಾಂಗಳಲ್ಲಿಯೂ ಸಂಚಾರ ದಟ್ಟಣೆಗೆ ಯಾವುದೇ ಬರವಿಲ್ಲ.
ಸಂಚಾರ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದರೆ ವಾಹನಗಳ ಮಾಲೀಕರು ತಮ್ಮ ನಗರವಬ್ನು ಶಬ್ದ ಮಾಲಿನ್ಯದಿಂದ ದೂರ ಮಾಡಬಹುದು ಎಂಬುದಕ್ಕೆ ಐಜ್ವಾಲ್ ಒಂದು ಉಜ್ವಲ ಉದಾಹರಣೆಯಾಗಿದೆ.
ಭಾರತದ ಇತರೆ ನಗರಗಳಲ್ಲಿ ಸಂಚಾರ ದೀಪ ಹಸಿರು ಬಣ್ಣಕ್ಕೆ ತಿರುಗುವವರೆಗೆ ವಾಹನಗಳ ಹಾರ್ನ್ ಶಬ್ದ ಕಿರಿಕಿರಿಯುಂಟು ಮಾಡುತ್ತಿರುತ್ತದೆ. ಆದರೆ ಐಜ್ವಾಲ್ನಲ್ಲಿ ಹಾಗಿಲ್ಲ. ಇಲ್ಲಿ ಹಾರ್ನ್ ಸದ್ದು ಕೇಳುವುದೇ ಅಪರೂಪ. ಇಲ್ಲಿ ಟ್ರಾಫಿಕ್ಗಳಲ್ಲಿ ಜನರು ಹಾರ್ನ್ ಮಾಡುವ ಬದಲು ತಮ್ಮ ವಾಹನಗಳ ಎಂಜಿನ್ಗಳನ್ನು ಬಂದ್ ಮಾಡಿ ದೀರ್ಘಕಾಲದವರೆಗೂ ತಾಳ್ಮೆಯಿಂದ ಕಾಯುತ್ತಾರೆ.
North Aizawl city : ಐಜ್ವಾಲ್ನಲ್ಲಿ ಏಕೆ ಟ್ರಾಫಿಕ್ ಜಾಮ್ ಸಮಸ್ಯೆಯಿಲ್ಲ ?
ಐಜ್ವಾಲ್ನ ರಸ್ತೆಗಳು ಪ್ರಶಾಂತವಾಗಿರುವುದರ ಹಿಂದೆ ದೊಡ್ಡ ರಹಸ್ಯವೊಂದಿದೆ. ಇದಕ್ಕೆ ಕಾರಣ ಇಲ್ಲಿನ ಸಂಚಾರಿ ಠಾಣೆ ಪೊಲೀಸರಲ್ಲ. ಬದಲಾಗಿ ಮಿಜೋರಾಂನ ಸ್ಥಳೀಯ ಸಂಸ್ಕೃತಿಯಿಂದ ಈ ಬೆಳವಣಿಗೆ ಸಂಭವಿಸಿದೆ. ಈ ಭಾಗದ ನಾಗರಿಕರ ಶಿಸ್ತು ಹಾಗೂ ತಾಳ್ಮೆಯ ಫಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಐಜ್ವಾಲ್ನ ಈ ಟ್ರಾಫಿಕ್ ಸಂಸ್ಕೃತಿ ದೇಶಿ ಪ್ರವಾಸಿಗರು ಮಾತ್ರವಲ್ಲದೇ ವಿದೇಶಿಗರನ್ನೂ ದಿಗ್ಬ್ರಮೆಗೊಳಿಸಿದೆ. ಹೇಗೆ ಈ ನಗರ ಇಷ್ಟು ಶಾಂತವಾಗಿದೆ ಎಂದು ಅನೇಕರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಕೇವಲ ಸಂಚಾರ ವ್ಯವಸ್ಥೆ ಮಾತ್ರವಲ್ಲದೇ ಐಜ್ವಾಲ್ ನಗರವು ತನ್ನ ಸ್ವಚ್ಛತೆಗೂ ಹೆಸರುವಾಸಿಯಾಗಿದೆ. ಇಲ್ಲಿನ ಜನರು ಎಂದಿಗೂ ಕಂಡಕಂಡಲ್ಲಿ ಕಸಗಳನ್ನು ಎಸೆದ ಇತಿಹಾಸವೇ ಇಲ್ಲ.
North Aizawl city Mizoram , is the only city in India without traffic jams



